ಹೆಂಡ್ತಿ ಅಲ್ಲ ರಾಕ್ಷಸಿ; ಸೋನಮ್, ಲವರ್‌ ಸೇರಿ ಮಾಡಿದ್ದ ಪ್ಲಾನ್​.. ಇಂಚಿಂಚೂ ಮಾಹಿತಿಯೂ ಬೆಚ್ಚಿ ಬೀಳಿಸುತ್ತೆ!​

author-image
Bheemappa
Updated On
ಹೆಂಡ್ತಿ ಅಲ್ಲ ರಾಕ್ಷಸಿ; ಸೋನಮ್, ಲವರ್‌ ಸೇರಿ ಮಾಡಿದ್ದ ಪ್ಲಾನ್​.. ಇಂಚಿಂಚೂ ಮಾಹಿತಿಯೂ ಬೆಚ್ಚಿ ಬೀಳಿಸುತ್ತೆ!​
Advertisment
  • ಒತ್ತಾಯ ಮಾಡಿ ಗಂಡನನ್ನು ಹನಿಮೂನ್‌ಗೆ ಕರೆದುಕೊಂಡು ಬಂದಿದ್ದ ಪತ್ನಿ!
  • ಗಂಡನ ಮುಗಿಸಲು ಲಕ್ಷ ಲಕ್ಷ ಹಣ ಕೊಟ್ಟಿದ್ದ ಹೆಂಡತಿ, ಮುಗಿಸಿಯೇ ಬಿಟ್ಟಳು
  • ರಾಜಾ ರಘುವಂಶಿ ದೇಹವನ್ನು ಪ್ರಪಾತಕ್ಕೆ ತಳ್ಳಿರೋದು ಹೆಂಡತಿ ಸೋನಮ್

ಆತನಿಗೆ ಮದುವೆಯಾಗಿ ಒಂದ್‌ ವಾರವಾಗಿತ್ತು ಅಷ್ಟೇ, ಹೆಂಡ್ತಿ ಒತ್ತಾಯಕ್ಕೆ ಹನಿಮೂನ್‌ಗೆ ಹೊರಟ. ಅಲ್ಲಿಯ ಪ್ರಕೃತಿ ಸಂದರ್ಯ ಸವಿಯುತ್ತ ಇನೇನ್‌ ಸ್ವರ್ಗಕ್ಕೆ ಮೂರೇ ಗೇಣು ಅನ್ನೋ ರೀತಿಯ ಖುಷಿ ಪಡ್ತಿದ್ದ. ಹಿಂಬದಿಯಲ್ಲಿದ್ದ ಹೆಂಡ್ತಿ ಅದೊಂದು ಪದ ಹೇಳಿದಳು. ಆ ಮೂವರು ಸುಪಾರಿ ಹಂತಕರು ರಕ್ತ ಹರಿಸಿಯೇ ಬಿಟ್ರು. ಇದು ಮೆಘಾಲಯದ ಹನಿಮೂನ್‌ ಮರ್ಡರ್‌ ಸ್ಟೋರಿ. ಇದಕ್ಕೆ ಈಗ ಟ್ವಿಸ್ಟ್‌ ಸಿಕ್ಕಿದೆ. ಪತಿ ಹತ್ಯೆಗೆ ಪತ್ನಿ ಮತ್ತು ಆಕೆಯ ಲವರ್‌ ಸೇರಿ ಮಾಡಿದ್ದ ಪ್ಲಾನ್‌ ಬೆಚ್ಚಿ ಬೀಳುವಂತಿದೆ.

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಹನಿಮೂನ್‌ ಮರ್ಡರ್‌. ಇಂದೋರ್‌ ಉದ್ಯಮಿ ರಾಜಾ ರಘುವಂಶಿ ಮೇ 11 ರಂದು ಸೋನಮ್ ಜೊತೆ ವಿವಾಹವಾಗಿರ್ತಾರೆ. ಅದ್ಧೂರಿಯಾಗಿ ನಡೆದ ಮದುವೆಯಲ್ಲಿ ಎರಡೂ ಕುಟುಂಬಸ್ಥರು, ಬಂಧು ಮಿತ್ರರು ಪಾಲ್ಗೊಂಡು ಈ ಸುಂದರ ಜೋಡಿಗೆ ಆಶೀರ್ವಾದ ಮಾಡಿರ್ತಾರೆ. ಅದಾಗಿ ಆರೇಳು ದಿನಗಳ ನಂತರ ಅಂದ್ರೆ, ಮೇ 20 ರಂದು ಈ ಜೋಡಿ ಹನಿಮೂನ್‌ಗೆ ಹೊರಡುತ್ತೆ. ಇಂದೋರ್‌ನಿಂದ ಸುಮಾರ್‌ 2,300 ಕಿಲೋ ಮೀಟರ್‌ ದೂರದಲ್ಲಿರೋ ಮೇಘಾಲಯದ ಗುಡ್ಡಗಾಡು ಪ್ರದೇಶವಾದ ಕೊರ್ಸಾ ಪ್ರದೇಶಕ್ಕೆ ಹೋಗಿರುತ್ತಾರೆ. ಪ್ರವಾಸಿಗ ಸ್ವರ್ಗಕ್ಕೆ ಹೋದವರು ಮೇ 23 ರಂದು ನಾಪತ್ತೆಯಾಗಿ ಬಿಡ್ತಾರೆ. ಕುಟುಂಬದವರು ಫೋನ್‌ ಮಾಡಿದ್ರೆ ರಿಂಗ್‌ ಆಗೋದಿಲ್ಲ. ಬಹುಶಃ ನೆಟ್‌ವರ್ಕ್‌ ಇಲ್ಲದ ಪ್ರದೇಶದಲ್ಲಿ ಇರಬೇಕು ಅಂತಾ ಆರಂಭದಲ್ಲಿ ಕುಟುಂಬದವರು ಸುಮ್ಮನೆ ಇರುತ್ತಾರೆ. ಆದ್ರೆ, ಸಂಜೆಯಾದರೂ ಫೋನ್ ರಿಂಗ್ ಆಗಲ್ಲ. ಹನಿಮೂನ್‌ಗೆ ಹೋದವ್ರಿಂದಲೂ ಫೋನ್ ಬರೋದಿಲ್ಲ. ಆವಾಗ ಆಘಾತಗೊಳ್ತಾರೆ. ನೇರವಾಗಿ ಹೋಗಿ ಪೊಲೀಸ್‌ ಸ್ಟೇಷನ್‌ನಲ್ಲಿ ಕಂಪ್ಲೆಂಟ್‌ ಮಾಡ್ತಾರೆ. ಅದಾದ್ಮೇಲೆ ಜೂನ್‌ 2 ರಂದು ಉದ್ಯಮಿ ರಾಜಾ ರಘುವಂಶ ಮೃತದೇಹ ಪ್ರಪಾತವೊಂದರಲ್ಲಿ ಪತ್ತೆಯಾಗುತ್ತೆ. ಆದ್ರೆ, ಸೋನಮ್‌ ನಾಪತ್ತೆಯಾಗಿ ಬಿಡ್ತಾರೆ. ಎಷ್ಟೇ ಹುಡುಕಾಡಿದ್ರೂ ಆಕೆಯ ದೇಹ ಸಿಗೋದಿಲ್ಲ. ಬಹುಶಃ ಅವಳು ಕಿಡ್ನಾಪ್‌ ಆಗಿರ್ಬಹುದು ಅನ್ನೋ ಶಂಕೆ ಹುಟ್ಕೊಂಡಿರುತ್ತೆ.

publive-image

ಇದೀಗ ಸೋನಮ್‌ ಮತ್ತು ಸುಪಾರಿ ಕಿಲ್ಲರ್‌ಗಳು ಸಿಕ್ಕಿ ಬಿದ್ದಿದ್ದು ಹನಿಮೂನ್‌ ಮರ್ಡರ್‌ ಕೇಸ್‌ಗೆ ಬಿಗ್ ಟ್ವಿಸ್ಟ್‌ ಸಿಕ್ಕಿದೆ. ಇಲ್ಲಿ ಹೆಂಡ್ತಿಯೇ ಹತ್ಯೆಯ ಮಾಸ್ಟರ್ ಮೈಂಡ್‌, ಅವಳೇ ರಾಕ್ಷಸಿ ಅನ್ನೋದ್‌ ಪತ್ತೆಯಾಗಿದೆ. ಹಾಗಾದ್ರೆ, ಆಕೆ ಗಂಡನನ್ನ ಕೊಲೆ ಮಾಡೋದಕ್ಕಾಗಿ ಪ್ರಿಯಕರನ ಜೊತೆ ಸೇರಿ ಮಾಡಿದ್ದ ಪ್ಲ್ಯಾನ್‌ ಹೇಗಿತ್ತು?.

ಹನಿಮೂನ್‌ ಮರ್ಡರ್‌ ಮೇಘಾಲಯ ಮತ್ತು ಮಧ್ಯ ಪ್ರದೇಶ ಪೊಲೀಸರಿಗೆ ಸವಾಲಾಗಿತ್ತು. ಈ ಕೇಸ್‌ನಲ್ಲಿ ರಾಜಾ ರಘುವಂಶಿ ಪತ್ನಿ ಸೋನಮ್‌, ಅವಳ ಲವರ್‌ ರಾಜ್‌ ಕುಶ್ವಾಹ ಮತ್ತು ಸುಪಾರಿ ಕಿಲ್ಲರ್‌ ಗಳಾಗಿರೋ ವಿಶಾಲ್‌ ಠಾಕೂರ್‌, ವಿಶಾಲ್‌ ರಜಪೂತ್‌, ಆನಂದ್‌ ಶಿಲ್ಲಾಂಗ್‌ ಅನ್ನ ಅರೆಸ್ಟ್‌ ಮಾಡಿದ್ದಾರೆ. ಆರೋಪಿಗಳ ವಿಚಾರಣೆ ನಡೆಸ್ತಾ ಇದ್ತಂತೆ ರಘುವಂಶಿಯನ್ನ ಯಾವ್‌ ರೀತಿಯಲ್ಲಿ ಹತ್ಯೆ ಮಾಡಿದ್ದಾರೆ? ಹತ್ಯೆಯ ಉದ್ದೇಶ ಏನು? ಅನ್ನೋದ್‌ ಬಯಲಾಗಿದೆ.

ಮೇ 16ಕ್ಕೆ ಲವರ್‌ ಜೊತೆ ಮಾತು, ಹತ್ಯೆಗೆ ಫ್ರೀ ಪ್ಲ್ಯಾನ್‌!

ಮೇ 11 ರಂದು ರಾಜಾ ರಘುವಂಶಿ ಮತ್ತು ಸೋನಮ್‌ ವಿವಾಹ ಆಗ್ತಾರೆ. ಇದಾಗಿ 5ನೇ ದಿನಕ್ಕೆ ಅಂದ್ರೆ ಮೇ 16 ರಂದು ಸೋನಮ್‌ ತಮ್ಮ ಲವರ್‌ ರಾಜ್‌ ಕುಶ್ವಾಹಗೆ ಫೋನ್‌ ಮಾಡ್ತಾಳೆ. ನಾನು ಈತನ ಜೊತೆಗೆ ಇರೋದಕ್ಕೆ ಸಾಧ್ಯವಿಲ್ಲ ಅಂತಾ ಅವಲತ್ತು ಕೊಳ್ತಾಳೆ. ಆವಾಗ್ಲೇ ನೋಡಿ ಇಬ್ಬರೂ ಸೇರಿ ಮರ್ಡರ್‌ ಮಾಡೋದಕ್ಕೆ ಪ್ಲಾನ್‌ ಮಾಡಿರುತ್ತಾರೆ. ಮರ್ಡರ್‌ ಹೇಗೆ ಮಾಡ್ಬೇಕು? ಎಲ್ಲಿ ಮಾಡ್ಬೇಕು? ಯಾರಿಗೆ ಸುಪಾರಿ ಕೊಡ್ಬೇಕು? ಎಷ್ಟು ಲಕ್ಷದ ಸುಪಾರಿಗೆ ಆದ್ರೆ ಒಪ್ಪಿಕೊಳ್ಳಬೇಕು? ಆ ಮೇಲೆ ತಾವು ತಪ್ಪಿಸ್ಕೊಳ್ಳುವುದು ಹೇಗೆ? ಅನ್ನೋದನ್ನ ಪಿನ್‌ ಟು ಪಿನ್‌ ಚರ್ಚೆ ಮಾಡಿ ಡಿಸೈಡ್‌ ಮಾಡಿರ್ತಾರೆ. ಆ ಪ್ರಕಾರ ಮೇಘಾಲಯಕ್ಕೆ ಹನಿಮೂನ್‌ಗೆ ಕರ್ಕೊಂಡ್‌ ಹೋಗ್ತಾಳೆ ಸೋನಮ್‌. ವಿಶೇಷ ಅಂದ್ರೆ, ರಘುವಂಶಿಗೆ ಹನಿಮೂನ್‌ ಹೋಗೋದಕ್ಕೆ ಇಷ್ಟವೇ ಇರೋದಿಲ್ಲ. ಆದ್ರೂ ಒತ್ತಾಯ ಮಾಡಿ ಕರ್ಕೊಂಡ್‌ ಹೋಗ್ತಾಳೆ ಸೋನಮ್‌.

ಸಿಂಧೂರ ವರೆಸಿಕೊಳ್ಳುವುದಕ್ಕೆ ₹20 ಲಕ್ಷಕ್ಕೆ ಸುಪಾರಿ!

ಅದ್ಯಾವಾಗ ಮದುವೆ ಆಗಿ 5ನೇ ದಿನಕ್ಕೆ ಲವರ್‌ಗೆ ಫೋನ್‌ ಮಾಡ್ತಾಳೋ? ಆವಾಗ್ಲೇ ಹತ್ಯೆ ಮಾಡ್ಬೇಕು ಅನ್ನೋದ್ ಡಿಸೈಡ್‌ ಆಗಿ ಹೋಗಿತ್ತು. ಆವಾಗ ಸುಪರಿ ಕಿಲ್ಲರ್‌ ಸಂಪರ್ಕ ಮಾಡೋ ಜವಾಬ್ದಾರಿ ತೆಗೆದ್ಕೊಳ್ತಾನೆ ಕುಶ್ವಾಹ. ಆ ಕಿಲ್ಲರ್‌ಗಳಿಗೆ ಹಣ ನೀಡೋ ಜವಾಬ್ದಾರಿ ತೆಗೆದ್ಕೊಳ್ತಾಳೆ ಸೋನಮ್. ಹೌದು, ಆಕೆಗೆ ಮೈಗೆ ಹಚ್ಕೊಂಡಿದ್ದ ಅರಿಸಿನ ಇನ್ನೂ ವರೆಸಿಲ್ಲವಾಗಿತ್ತು. ಮೇಹಂದಿಯೂ ಹಾಗೇ ಹಸಿ ಹಸಿಯಾಗಿಯೇ ಇತ್ತು. ಆದ್ರೂ ತನ್ನ ಸಿಂಧೂರವನ್ನ ತಾನೇ ಒರೆಸಿಕೊಳ್ಳುವುದಕ್ಕೆ ತೀರ್ಮಾನಿಸಿ ಬಿಟ್ಟಿದ್ಲು. ಹೀಗಾಗಿ ಸುಪಾರಿ ಕಿಲ್ಲರ್‌ಗಳಿಗೆ ಹಣ ನೀಡೋದಕ್ಕೆ ಒಪ್ಪಿಕೊಂಡಿದ್ಲು. ಹಾಗೇ ತಾವು ಹನಿಮೂನ್‌ಗೆ ಎಲ್ಲಿಗೆ ಹೋಗ್ತಾ ಇದ್ದೇವೆ ಅನ್ನೋ ಮಾಹಿತಿಯನ್ನೂ ಹಂತಕರಿಗೆ ಪಾಸ್‌ ಮಾಡಿದ್ದಳು.

publive-image

ಊರಲ್ಲಿ ಇದ್ಕೊಂಡೆ ಡೈರೆಕ್ಷನ್‌ ಮಾಡ್ತಿದ್ದ ಸೋನಮ್ ಲವರ್‌!

ರಘುವಂಶಿ ಮಡರ್ರ್‌ನ ಮಾಸ್ಟರ್‌ ಮೈಂಡ್‌ ಆತನೇ ಹೆಂಡ್ತಿ ಸೋನಮ್‌ ಆಗಿದ್ರೆ, ಅದ್ಕೆ ಸಾಥ್‌ ಕೊಟ್ಟಿದ್ದು ಆಕೆಯ ಲವರ್‌ ಕುಶ್ವಾಹ. ಆತನ ಸುಪಾರಿ ಕಿಲ್ಲರ್‌ಗಳನ್ನ ನೇಮಕ ಮಾಡಿದ್ದ. ಆದ್ರೆ, ಆತ ಮೇಘಾಲಯಕ್ಕೆ ಹೋಗಿಲ್ಲ. ತಾನೇನಾದ್ರೂ ಹೋದ್ರೆ ಮುಂದೆ ಸಿಕ್ಕಿ ಕೊಳ್ಳಬೇಕಾಗುತ್ತೆ ಅನ್ನೋ ಹಿನ್ನೆಲೆಯಲ್ಲಿ ಊರಲ್ಲಿಯೇ ಉಳ್ಕೊಂಡಿದ್ದ. ಆದ್ರೆ, ಊರಲ್ಲಿ ಇದ್ಕೊಂಡ್‌ ಸುಪಾರಿ ಹಂತಕರಾಗಿರೋ ವಿಶಾಲ್ ಠಾಕೂರ್‌, ಆಕಾಶ್‌ ರಜಪೂತ್‌ ಮತ್ತು ಆನಂದ್ ಶಿಲ್ಲಾಂಗ್‌ಗೆ ಹಂತ ಹಂತದಲ್ಲೂ ಡೈರೆಕ್ಷನ್‌ ಮಾಡೋ ಕೆಲ್ಸ ಮಾಡ್ತಿದ್ದ. ರಘುವಂಶ ಮತ್ತು ಸೋನಮ್ ಜೋಡಿ ಎಲ್ಲಿದ್ದಾರೆ? ಎಲ್ಲಿಗೆ ಹೋಗ್ತಾ ಇದ್ದಾರೆ? ನೀವು ಎಲ್ಲಿರ್ಬೇಕು? ಅನ್ನೋದನ್ನ ಫೋನ್‌ನಲ್ಲಿಯೇ ಡೈರೆಕ್ಷನ್‌ ಮಾಡ್ತಿದ್ದ. ಆತ ಯಾವ್‌ ರೀತಿಯಲ್ಲಿ ಡೈರೆಕ್ಷನ್‌ ಮಾಡ್ತಾ ಇದ್ನೋ ಅದನ್ನ ಚಾಚು ತಪ್ಪದೇ ಪಾಲನೆ ಮಾಡೋ ಕೆಲ್ಸವನ್ನ ಸುಪಾರಿ ಹಂತಕರು ಮಾಡ್ತಿದ್ರು.

1 KM ದೂರಲ್ಲಿ ಹಂತಕರು, ಲೋಕೇಷನ್‌ ಕಳಿಸ್ತಿದ್ದ ಸೋನಮ್‌!

ಹಂತಕಿ ಪಕ್ಕವೇ ಇದ್ರೂ ರಘುವಂಶಿಗೆ ಸಣ್ಣ ಸುಳಿವು ಸಿಕ್ಕಿರಲಿಲ್ಲ. ಆಕೆ ಪ್ರಯಾಣದ ಉದ್ದಕ್ಕೂ ಅಲ್ಲಲ್ಲಿ ರಘುವಂಶಿಯಿಂದ ದೂರವಾಗಿ ಫೋನ್‌ನಲ್ಲಿ ಮಾತಾಡ್ತಾ ಇದ್ದಳು. ಬಹುಶಃ ಅದನ್ನ ಏನಾದ್ರೂ ಅನುಮಾನಿಸಿದ್ರೆ ರಘುವಂಶಿಗೆ ಸುಳಿವು ಸಿಕ್ತಾ ಇತ್ತೇನೋ? ಆದ್ರೆ ಆ ಕೆಲ್ಸ ರಘುವಂಶಿ ಮಾಡಿಲ್ಲ. ಈ ಚಾಲಕಿ ಸೋನಮ್‌ ಅದೆಷ್ಟು ಖತರ್ನಾಕ್ ಆಗಿದ್ದಳು ಅಂದ್ರೆ, ಸುಪಾರಿ ಹಂತಕರ ಫೋನ್ ನಂಬರ್‌ ಇಟ್ಕೊಂಡ್‌ ಅವ್ರಿಗೆ ಈಕೆಯೇ ಡೈರೆಕ್ಷನ್‌ ಮಾಡ್ತಾ ಇದ್ದಳು. ಶಿಲ್ಲಾಂಗ್‌ನಲ್ಲಿ ತಾವು ಉಳ್ಕೊಂಡಿರೋ ಹೋಂ ಸ್ಟೇ ಯಾವುದು ಅನ್ನೋದನ್ನ ಮೆಸೇಜ್‌ ಮಾಡಿಯೇ ಹೇಳ್ತಾ ಇದ್ದಳು. ಹಾಗೇ ಹಂತಕರಿಗೆ ನೀವು ಯಾವುದೇ ಕಾರಣಕ್ಕೂ ಒಂದೇ ರೂಮ್‌ನಲ್ಲಿ ಉಳಿದ್ಕೊಳ್ಳಬೇಡಿ. ನಮ್ಮ ಹೋಮ್‌ ಸ್ಟೇ ಸಮೀಪವೇ ಇರ್ಬೇಡಿ ಅನ್ನೋದನ್ನ ಹೇಳ್ತಾ ಇದ್ದಳಂತೆ. ಹೀಗಾಗಿಯೇ ಶಿಲ್ಲಾಂಗ್‌ನಲ್ಲಿ ಇದ್ದಾಗ ರಘುವಂಶಿ ಮತ್ತು ಸೋನಮ್‌ ಉಳ್ಕೊಂಡಿದ್ದ ಹೋಮ್ ಸ್ಟೇ ಇಂದ 1 ಕಿಲೋ ಮೀಟರ್‌ ದೂರದಲ್ಲಿರೋ ಹೋಮ್‌ ಸ್ಟೇ ನಲ್ಲಿ ಬೇರೆ ಬೇರೆ ರೂಮ್‌ನಲ್ಲಿ ಸ್ಟೇ ಆಗಿದ್ರು ಹಂತಕರು. ಹಾಗೇ ತಾವು ಎಲ್ಲಿ ಹೋಗ್ತಾ ಇದ್ದೇವೆ ಅನ್ನೋ ಲೋಕೇಷನ್‌ ಅನ್ನ ಹಂತಕರಿಗೆ ಕಳಿಸ್ತಾ ಇದ್ದಿದ್ದೇ ಸೋನಮ್‌ ಆಗಿತ್ತು. ಇದನ್ನ ಪೊಲೀಸ್ರು ಬಹಿರಂಗ ಪಡ್ಸಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ನಟನೆಯ ಕೇವಲ ಮೂರೇ 3 ಸಿನಿಮಾದ ಕಲೆಕ್ಷನ್ 3,500 ಕೋಟಿ ರೂಪಾಯಿ!

publive-image

ಟ್ರಕ್ಕಿಂಗ್‌ ಮಾಡುವಾಗ ಜೊತೆ ಸೇರಿದ್ರು ಯಮಧೂತರು!

ಸೋನಮ್‌ ಮತ್ತು ಆಕೆಯ ಲವರ್ ರಾಜ್‌ ಕುಶ್ವಾಹ್‌ ಏನ್‌ ಪ್ಲ್ಯಾನ್‌ ಮಾಡಿದ್ರೋ? ಎಲ್ಲವೂ ಹಾಗೇ ಆಗ್ತಾ ಇತ್ತು. ಇನೇನ್ ಹೋಂ ಸ್ಟೇ ಇಂದ ಸೋನಮ್‌ ಮತ್ತು ರಾಜ್‌ ರಘುವಂಶಿ ಗುಡ್ಡಗಾಡು ಪ್ರದೇಶವಾಗಿರೋ ಕೊರ್ಸಾಗೆ ಟ್ರಕ್ಕಿಂಗ್ ಹೊರಡುತ್ತಾರೆ. ತುಂಬಾ ಕಡಿದಾದ ಪ್ರದೇಶ ಅದಾಗಿದ್ದು, ಅಲ್ಲಿ ಪ್ರಕೃತಿ ನಿರ್ಮಿತವಾಗಿ ಮರದ ಬಳ್ಳಿಯಿಂದಲೇ ನಿರ್ಮಾಣವಾಗಿರೋ ಸೇತುವೆಗಳನ್ನ ನೋಡುವುದೇ ವಿಶೇಷ. ಅಂತಾ ಸ್ಥಳಕ್ಕೆ ಟ್ರಕ್ಕಿಂಗ್‌ ಮಾಡ್ತಾ ಇರುವಾಗ ಸುಪಾರಿ ಕಿಲ್ಲರ್ಸ್‌ಗಳು ಜೊತೆ ಸೇರ್ತಾರೆ. ಅವು ಅದೇ ಸ್ಥಳಕ್ಕೆ ಟ್ರಕ್ಕಿಂಗ್‌ ಹೋಗ್ತಿದ್ದೇವೆ ಅಂತಾ ಸೋನಮ್‌ ಮತ್ತು ರಘುವಂಶಿಯನ್ನ ಪರಿಚಯ ಮಾಡ್ಕೋತಾರೆ. ಆ ಸಂದರ್ಭದಲ್ಲಿ ಸೋನಮ್‌ ತನ್ಗೂ ಯಮಧೂತರಿಗೂ ಯಾವುದೇ ಪರಿಚಯ ಇಲ್ಲದವ್ರಂತೆ ನಟಿಸ್ತಾಳೆ. ಅದ್ಯಾವಾಗ ಮರ್ಡರ್‌ ಮಾಡೋ ಸ್ಪಾಟ್‌ ಬರುತ್ತೋ? ಅಲ್ಲಿಯೇ ತನ್ಗೆ ಸುಸ್ತಾಯ್ತು ಅಂತಾ ಹಿಂದೇಟು ಹಾಕ್ತಾಳೆ.

ಸುಸ್ತಾದವಳಂತೆ ನಟಿಸಿ "ಕಿಲ್​ ಹಿಮ್" ಅಂದಳು!

ರಾಜಾ ರಘುವಂಶಿ ಯಾವಾಗ ಮನೆಬಿಟ್ಟು ಹನಿಮೂನ್‌ಗೆ ಹೊರಟಿದ್ನೋ ಅವಾಗ್ಲೇ ಆತನಿಗೆ ಸಾವು ಅನ್ನೋದ್‌ ಬೆನ್ನು ಹತ್ತಿತ್ತು. ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ಸಾವಿನ ನೆರಳು ಹಿಂಬಾಲಿಸುತ್ತಲೇ ಇತ್ತು. ಆದ್ರೆ, ಆಗ ತಾನೇ ಮದುವೆಯಾಗಿದ್ದ ರಘುವಂಶಿಗೆ ಸೋನಮ್‌ನಲ್ಲಿರೋ ರಾಕ್ಷಸ ಗುಣ ಗೊತ್ತು ಮಾಡೋದಕ್ಕೆ ಸಾಧ್ಯವಾಗಲೇ ಇಲ್ಲ. ಹೆಂಡ್ತಿ ಏನ್‌ ಹೇಳಿದ್ಲೋ ಹಾಗೇ ಕೇಳಿದ. ಆಕೆ ಹೆಜ್ಜೆ ಹಾಕಿದಂತೆ ತಾನು ಹೆಜ್ಜೆ ಹಾಕಿದ. ಆದ್ರೆ, ಟ್ರಕ್ಕಿಂಗ್‌ ಮಾಡ್ತಾ ಇರುವಾಗ್ಲೇ ತನಗೆ ಸುಸ್ತಾಯ್ತು ಅಂತಾ ಡ್ರಾಮಾ ಮಾಡ್ತಾಳೆ ಸೋನಂ. ಆವಾಗ ರಘುವಂಶಿ ನಾಲ್ಕು ಹೆಜ್ಜೆ ಮುಂದೆ ಹೋಗಿದ್ದೇ ತಡ. ಕಿಲ್‌ ಹಿಮ್‌ ಅಂದು ಬಿಡ್ತಾಳೆ. ಅದಾಗ್ಲೇ ಶಸ್ತ್ರಾಸ್ತ್ರ ಇಟ್ಕೊಂಡ್‌ ಬಂದಿದ್ದ ಸುಪಾರಿ ಹಂತಕರು ರಘುವಂಶಿ ಮೇಲೆ ಹಿಂಬದಿಯಿಂದ ಹಲ್ಲೆ ನಡೆಸ್ತಾರೆ. ನೆಲಕ್ಕೆ ಬಿದ್ಮೇಲೆ ಇನ್ನಷ್ಟು ಹಲ್ಲೆ ನಡ್ಸಿ ಸಾಯಿಸಿ ಬಿಡ್ತಾರೆ.

ಗಂಡನನ್ನ ಪ್ರಪಾತಕ್ಕೆ ದುಡ್ಡಿದ್ದಳಾ ಹಂತಕಿ?

ಸೋನಮ್‌ ಅದೆಷ್ಟು ಡೇಂಜರ್‌ ಆಗಿದ್ದಳು ಅಂದ್ರೆ ಆಕೆಯ ಸಂಚು ರಘುವಂಶಿಗೂ ಗೊತ್ತಾಗಿಲ್ಲ. ಅವ್ರ ಕುಟುಂಬದವ್ರಿಗೂ ಅರಿವಿಗೆ ಬಂದಿಲ್ಲ. ಮನೆಯವ್ರು ಫೋನ್‌ ಮಾಡಿದಾಗ ಅಂದ ಚೆಂದವಾಗಿಯೇ ಮಾತಾಡ್ತಿದ್ದ ಸೋನಮ್‌ ಒಳಗಿಂದೊಳಗೆ ಗಂಡನ ವಿರುದ್ಧ ಮಸಲತ್ತು ನಡೆಸ್ತಾನೇ ಇದ್ದಳು. ಅಂತಿಮವಾಗಿ ಕೊಲೆ ಆಗ್ತಾ ಇದಂತೆ ಬಾಡಿ ಸಿಗ್ಬಾರದು ಅಂತಾ ಪ್ರಪಾತಕ್ಕೆ ತಳ್ಳಲಾಗಿತ್ತು. ಅದನ್ನ ತಳ್ಳಿದ್ದು ರಾಕ್ಷಸಿ ಸೋನಮ್‌ ಅಂತಾನೇ ಹೇಳಲಾಗ್ತಿದೆ. ಆದ್ರೆ, ಮದುವೆಯಾಗಿ ಒಂದೇ ವಾರಕ್ಕೆ ಗಂಡನ ಕೊಲ್ಲೋದಕ್ಕೆ ಸೋನಮ್‌ ಸ್ಕೆಚ್‌ ಹಾಕಿದ್ದು ಯಾಕೆ? ಅಂತಾ ನೋಡ್ತಾ ಹೋದ್ರೆ ಹನಿಮೂನ್‌ ಮರ್ಡರ್‌ ಕೇಸ್‌ಗೆ ಇನ್ನೊಂದ್‌ ಟ್ವಿಸ್ಟ್‌ ಸಿಗುತ್ತೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment