/newsfirstlive-kannada/media/post_attachments/wp-content/uploads/2024/03/megha-2.jpg)
ಕಿರುತೆರೆಯಲ್ಲಿ ದಾಖಲೆ ಬರೆದ ಸೀರಿಯಲ್​ಗಳಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಕೂಡ ಒಂದು. ಜೊತೆ ಜೊತೆಯಲ್ಲಿ ಖ್ಯಾತಿಯ ಮೇಘ ಶೆಟ್ಟಿ ಈಗ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬದಲಿಗೆ ಸಿನಿಮಾ ಶೂಟಿಂಗ್​ನಲ್ಲಿ ಫುಲ್ ಬ್ಯುಸಿ ಆಗಿದ್ದಾರೆ. ಇನ್ನೂ ಪರ್ಸನಲ್ ಲೈಫ್​ಗೆ ಟೈಮ್ ಕೊಡ್ತಾ ಇದ್ದಾರೆ ನಟಿ ಮೇಘಾ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಌಕ್ವೀವ್ ಆಗಿರುತ್ತಾರೆ.
/newsfirstlive-kannada/media/post_attachments/wp-content/uploads/2024/03/megha-3.jpg)
ಇದನ್ನೂ ಓದಿ:ಬಿಳಿ ಬಣ್ಣದ ಸೀರೆಯಲ್ಲಿ ಅಪ್ಸರೆಯಾದ ನಟಿ ಮೇಘಾ ಶೆಟ್ಟಿ; ಫ್ಯಾನ್ಸ್​ ಕೊಟ್ಟ ಟೈಟಲ್ಸ್ ಗೊತ್ತಾ?
ಆಗಾಗ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಮಸ್ತ್ ಮಸ್ತ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಆದರೆ ಇದೀಗ ನಟಿ ಮೇಘಾ ಶೆಟ್ಟಿ ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ನಟಿ ಮೇಘಾ ಶೆಟ್ಟಿ ಅವರು ಸ್ಟೈಲಿಶ್​ ಆಗಿ ಹಾಟ್ ಬ್ಯೂಟಿಯಂತೆ ಕ್ಯಾಮೆರಾಗೆ ಪೋಸ್​ ಕೊಟ್ಟಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ./ ಈ ಫೋಟೋ ನೋಡಿದ ನೆಟ್ಟಿಗರು ನೀನೊಂದು ಅಂದದ ಅಪ್ಸರೆ ನಾನಾದೆ ನಿನ್ನ ಕೈ ಸೆರೆ, ಸೂಪರ್​ ಕ್ವೀನ್ ಅಂತಾ ಭಿನ್ನ ವಿಭಿನ್ನವಾಗಿ ಕಾಮೆಂಟ್​ ಮಾಡಿದ್ದಾರೆ.
View this post on Instagram
ಇನ್ನು, ಡಿಫರೆಂಟ್​ ಫೋಟೋಶೂಟ್​ಗಳ ಮೂಲಕ ಎಲ್ಲರ ಗಮನವನ್ನು ಸೇಳೆಯುತ್ತಿರು ನಟಿ ಸದ್ಯ ಸಿನಿಮಾಗಳತ್ತ ಮುಖ ಮಾಡಿದ್ದಾರಂತೆ. ಬೇರೆ ಭಾಷೆಗಳ ಆಫರ್​ಗಳು ಬರುತ್ತಿವೆಯಂತೆ. ಟ್ಯಾಲೆಂಟ್​ ಜೊತೆ ಬ್ಯೂಟಿನೂ ಇದ್ದು, ನಟಿಯನ್ನು ತೆರೆ ಮೇಲೆ ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us