/newsfirstlive-kannada/media/post_attachments/wp-content/uploads/2024/10/mehreen-pirzada.jpg)
[caption id="attachment_94710" align="alignnone" width="800"]
 ಕೆಲವು ನಟಿಯರು ಸಿನಿಮಾ ಹಾಗೂ ಅವರ ಅದ್ಭುತ ನಟನೆಯಿಂದ ಗುರುತಿಸಿಕೊಂಡರೆ, ಇನ್ನು ಕೆಲವರು ತಮ್ಮ ಸೌಂದರ್ಯದ ಮೂಲಕ ಗುರುತಿಸಿಕೊಂಡಿರುತ್ತಾರೆ. ಅದರಲ್ಲಿ ನಟಿ ಮೆಹ್ರೀನ್​ ಪಿರ್ಜಾದಾ ಕೂಡ ಒಬ್ಬರು.[/caption]
[caption id="attachment_94705" align="alignnone" width="800"]
 ತೆಲುಗು, ತಮಿಳು, ಹಿಂದಿ ಮತ್ತು ಪಂಜಾಬಿ ಸಿನಿಮಾದಲ್ಲಿ ನಟಿಸಿ ಮೆಹ್ರೀನ್​ ಪಿರ್ಜಾದಾ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್​ ಆಗಿದ್ದಾರೆ. ಈಕೆಯ ಬ್ಯೂಟಿಗೆ ಪಡ್ಡೆ ಹುಡುಗರಂತೂ ಮನಸೋತಿದ್ದು, ಸಾಮಾಜಿಕ ಜಾಲತಾಣದಲ್ಲಿ ನಟಿಯನ್ನು ಫಾಲೋ ಮಾಡುತ್ತಿದ್ದಾರೆ.[/caption]
[caption id="attachment_94706" align="alignnone" width="800"]
 ಗುಜರಾತ್​ ಮೂಲದ ನಟಿ ಮೆಹ್ರೀನ್​ ಪಿರ್ಜಾದಾ ಬಾಲಿವುಡ್​ನಲ್ಲಿ ಅಷ್ಟೇನು ಗುರುತಿಸಿಕೊಳ್ಳದಿದ್ದರು. ಬೇರೆ ಭಾಷೆಗಳಲ್ಲಿ ಅಭಿಮಾನಿಗಳ ಮನಗೆದ್ದಿದ್ದಾರೆ. ಅದರಲ್ಲೂ ಟಾಲಿವುಡ್​ನಲ್ಲಿ ಈಕೆಯನ್ನು ಯುವಕರು ಕಂಡರೆ ಮುಗಿ ಬೀಳುತ್ತಾರೆ.[/caption]
[caption id="attachment_94704" align="alignnone" width="800"]
 1995ರಲ್ಲಿ ಜನಿಸಿರುವ ಈ ನಟಿ ಕೃಷಿಕನ ಮಗಳು. ಬಾಲ್ಯದಿಂದ ಮಾಡೆಲಿಂಗ್​ ಮಾಡುವ ಕನಸು ಕಂಡಿದ್ದರು. ಅದರಂತೆ ತನ್ನ ಕನಸು ನನಸು ಮಾಡಲು ಸಿನಿಮಾ ನಟನೆಯತ್ತ ಕೊಂಡೊಯ್ದರು.[/caption]
[caption id="attachment_94703" align="alignnone" width="800"]
 2016ರಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚುವ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು ಮೆಹ್ರೀನ್​ ಪಿರ್ಜಾದಾ. ‘ಕೃಷ್ಣ ಗಾಡಿ ವೀರ ಪ್ರೇಮ ಗಾಧ’ ಎಂಬ ತೆಲುಗು ಸಿನಿಮಾಗೆ ಬಣ್ಣ ಹಚ್ಚುವ ಮೂಲಕ ಸಿನಿಮಾ ರಂಗ ಪ್ರವೇಶಿಸಿದರು.[/caption]
[caption id="attachment_94708" align="alignnone" width="800"]
 ಬಳಿಕ ತಮಿಳು, ಹಿಂದಿ ಸಿನಿಮಾದಲ್ಲೂ ಅವಕಾಶ ಪಡೆದರು. 2017ರಲ್ಲಿ ‘ಫಿಲ್ಲೌರಿ’ ಎಂಬ ಹಿಂದಿ ಮತ್ತು ‘ನೆಂಜಿಲ್​ ತುನಿಮಿರುಂದಾಲ್​ ಎಂಬ ತಮಿಳು ಸಿನಿಮಾದಲ್ಲಿ ಅವಕಾಶ ಸಿಕ್ಕಿತು.[/caption]
[caption id="attachment_94710" align="alignnone" width="800"]
 ಹೀಗೆ ಸಿನಿಮಾ ಮಾಡುತ್ತಾ ಬಂದ ಅವರು ಒಟಿಟಿಗೂ ಪ್ರವೇಶ ಪಡೆದರು. ಸಿನಿಮಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಮೆಹ್ರೀನ್​ ಪಿರ್ಜಾದಾ 2021ರಲ್ಲಿ ಮದುವೆಯಾಗಲು ಮುಂದಾದರು. ಆದಂಪುರ್​​ ಶಾಸಕ ಭವ್ಯ ಬಿಷ್ಣೋಯ್​​ ಜೊತೆ ಎಂಗೇಜ್ಮೆಂಟ್​ ಮಾಡಿಕೊಂಡರು. ಆದರೆ ಈ ನಿಶ್ಚಿತಾರ್ಥ ಕೆಲವು ತಿಂಗಳ ಬಳಿಕ ಮುರಿತು ಬಿತ್ತು.[/caption]
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us