/newsfirstlive-kannada/media/post_attachments/wp-content/uploads/2024/12/BOATS-MAHAKUMBHMELA.jpg)
ಮಹಾಕುಂಭಮೇಳಕ್ಕೆ ದಿನಗಣೆನೆಗಳು ಶುರುವಾಗಿದೆ. ಮಧ್ಯಪ್ರದೇಶದ ಪ್ರಯಾಗರಾಜ್ ಈಗಲೇ ಯಾತ್ರಿಕರನ್ನು ಬರಮಾಡಿಕೊಳ್ಳಲು ಸಜ್ಜಾಗಿದೆ. ಮಹಾಕುಂಭಮೇಳದಲ್ಲಿ ಗಂಗೆಯ ಬಳಿ ಜನಸಾಗರವೇ ನೆರೆಯಲಿದೆ. ಗಂಗಾ ನದಿ ಬಳಿಗೆ ಹೋದಮೇಲೆ ಹಡುಗು ಪ್ರಯಾಣ ಮಾಡದಿದ್ದರೆ ಯಾತ್ರೆ ಒಂದು ಲೆಕ್ಕದಲ್ಲಿ ಅಪೂರ್ಣವಾಗಿಯೇ ಉಳಿಯುತ್ತದೆ. ಆದ್ರೆ ಮಹಾಕುಂಭಮೇಳೆದ ಪ್ರಯುಕ್ತ ಬೋಟ್ಗಳ ಡಿಮ್ಯಾಂಡ್ ಹೆಚ್ಚಾಗಲಿದೆ. ಹೀಗಾಗಿ ಪ್ರಯಾಣದ ದರವನ್ನು ಹೆಚ್ಚಿಸಲು ನಾವಿಕರು ಸರ್ಕಾರವನ್ನು ಕೋರಿದ್ದು ಸರ್ಕಾರ ಶೇಕಡಾ 50 ರಷ್ಟು ದರ ಏರಿಕೆ ಮಾಡಲು ಗ್ರೀನ್ ಸಿಗ್ನಲ್ ನೀಡಿದೆ.
ಪ್ರಯಾಗರಾಜ್ ನಾವಿಕರ ಸಂಘದ ಅಧ್ಯಕ್ಷ ಪಪ್ಪು ನಿಶಾದ್ ಸರ್ಕಾರ ಈ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಹಲವು ವರ್ಷಗಳಿಂದ ಹಡಗುಗಳ ಪ್ರಯಾಣದ ದರ ಒಂದೇ ಪ್ರಮಾಣದಲ್ಲಿಯೇ ಇತ್ತು. ಈಗ ದರ ಏರಿಕೆ ಮಾಡಿದ್ದು ನಿಜಕ್ಕೂ ಖುಷಿಯಾಗಿದೆ. ಇದು ನಮ್ಮಂತಹ ನಾವಿಕರಿಗೆ ತುಂಬಾ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮಧ್ಯರಾತ್ರಿ ಹೆಣ್ಣುಮಕ್ಕಳಿಗೆ ಲಿಫ್ಟ್ ಕೊಡೋ ಮುನ್ನ ಎಚ್ಚರ! ಪುರುಷರು ಓದಲೇಬೇಕಾದ ಸ್ಟೋರಿ
ಇನ್ನು ದರ ಏರಿಕೆಯನ್ನು ಮಾಡಿರುವ ಆಡಳಿತ ಮಂಡಳಿ. ಅದನ್ನು ಕರಾರುವಕ್ಕಾಗಿ ಪಾಲಿಸುವಂತೆ ನಾವಿಕರ ಸಂಘಕ್ಕೆ ಖಡಕ್ ಸೂಚನೆ ನೀಡಿದೆ. ಭಕ್ತಾದಿಗಳ ಬಳಿ ಬೇಕಾದಷ್ಟು ಹಣವನ್ನು ಪೀಕುವಂತಿಲ್ಲ. ಬೋಟ್ ಫೀಗಳು ತುಂಬಾ ಪಾರದರ್ಶಕವಾಗಿರಬೇಕು ಹಾಗೂ ಎಲ್ಲಾ ಘಾಟ್ಗಳಲ್ಲಿಯೂ ಬೋಟ್ ಪ್ರಯಾಣದ ದರದ ಪಟ್ಟಿಯನ್ನು ಅಂಟಿಸಬೇಕು ಎಂದು ಹೇಳಿದೆ. ಇನ್ನೂ ಪ್ರಯಾಣಿಕರ ಸುಕರಕ್ಷಿತ ದೃಷ್ಟಿಯಿಂದ ಮೊಟಾರ್ ಬೋಟ್ಗಳನ್ನು ನಿಷೇಧ ಮಾಡಲಾಗಿದ್ದು. ಕೇವಲ ಸಾಂಪ್ರದಾಯಿಕ ಹಡುಗುಗಳಿಗೆ ಮಾತ್ರ ಓಡಾಡಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ:ಇಂದಿಗೂ ಬಳಕೆಯಲ್ಲಿರೋ ವಿಶ್ವದ 7 ಪುರಾತನ ಭಾಷೆಗಳು; ಏನಿದರ ವಿಶೇಷ?
ಇನ್ನೂ ಮಹಾಕುಂಭಮೇಳದಲ್ಲಿ ಜನಜಂಗುಳಿ ಹಾಗೂ ಹವಾಮಾನದ ಅನುಗುಣವಾಗಿ ಹಡಗುಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಜಿಲ್ಲಾಡಳಿತ ಹೇಳಿದೆ. ಸದ್ಯ ಸಂಗಮ್ ಬಳಿ ಸುಮಾರು 1455 ಬೋಟ್ಗಳು ಓಡಾಡುತ್ತಿದ್ದು. ಮಹಾಕುಂಭಮೇಳ ಸಮಯದಲ್ಲಿ ಇದು 4 ಸಾವಿರಕ್ಕೆ ತಲುಪುವ ಸಂಭವವಿದೆ ಎಂದು ಹೇಳಲಾಗಿದೆ. ಪಕ್ಕದ ಜಿಲ್ಲೆಗಳಿಂದ ಬೋಟ್ಗಳು ಹರಿದು ಬರಲಿದೆ. ಅವುಗಳಿಗೆ ಲೈಸೆನ್ಸ್ಗಳನ್ನು ಕೂಡ ನೀಡಲಾಗುತ್ತದೆ. ಅದರ ಜೊತೆಗೆ ಬೋಟ್ಮೆನ್ಗಳಿಗೆ ಲೈಫ್ ಜಾಕೆಟ್ ಕೂಡ ನೀಡಲಾಗುವುದು ಅದರ ಜೊತೆಗೆ 2 ಲಕ್ಷ ರೂಪಾಯಿ ಕವರೇಜ್ ಆಗುವ ಇನ್ಸೂರೆನ್ಸ್ ಕೂಡ ನೀಡಲಾಗುತ್ತದೆ.
ಪ್ರತಿ ಮೂರು ವರ್ಷಕ್ಕೆ ಕುಂಭಮೇಳ, 6 ವರ್ಷಕ್ಕೊಮ್ಮೆ ಅರ್ಧಕುಂಭಮೇಳ ಹಾಗೂ 12 ವರ್ಷಕ್ಕೊಮ್ಮೆ ಮಹಾಕುಂಭಮೇಳ ನಡೆಯುತ್ತದೆ. 2013ರಲ್ಲಿ ಈ ಹಿಂದೆ ಮಹಾಕುಂಭಮೇಳ ನಡೆದಿತ್ತು. 2019ರಲ್ಲಿ ಅರ್ಧಕುಂಭಮೇಳ ನಡೆದಿತ್ತು. 2025 ಮಹಾಕುಂಭಮೇಳಕ್ಕೆ ಚಾಲನೆ ಸಿಗಲಿದೆ ಇದು ಸನಾತನ ಧರ್ಮದಲ್ಲಿಯೇ ಅತ್ಯಂತ ದೊಡ್ಡದಾದ ಹಬ್ಬ ಎಂದು ಕೂಡ ಕರೆಯುತ್ತಾರೆ. ದೇಶದ ಹಾಗೂ ವಿಶ್ವದ ಮೂಲೆ ಮೂಲೆಯಿಂದ ಜನರು ಹರಿದು ಬರುತ್ತಾರೆ. ಎಲ್ಲರೂ ಬಂದು ಮಹಾಕುಂಭದದ ಮಹಾಸಂಗಮದಲ್ಲಿ ಮಿಂದೆದ್ದು ಪುನೀತರಾಗುತ್ತಾರೆ. ಜನವರಿ 13 ರಿಂದ ಫೆಬ್ರವರಿ 26ರವರೆಗೆ ನಡೆಯಲಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ