newsfirstkannada.com

ಟ್ಯಾಟೂ ವಿಜಿಯನ್ನು ಕೊಲೆ ಮಾಡಲು ಬಂದು ತಾನೇ ಕೊಲೆಯಾದ ಮೆಂಟಲ್ ಮಂಜ.. ಬೆಚ್ಚಿಬಿದ್ದ ಆನೇಕಲ್

Share :

Published February 25, 2024 at 10:28am

    ತಾನೇ ತಂದಿದ್ದ ಡ್ರ್ಯಾಗರ್​ನಿಂದ ಕೊಲೆಯಾದ ರೌಡಿಶೀಟರ್

    ಬುದ್ಧಿ ಹೇಳಲು ಪ್ರಯತ್ನಿಸಿದ್ದರೂ ಕೇಳದ ರೌಡಿ ಮೆಂಟಲ್ ಮಂಜ

    ಮೆಂಟಲ್ ಮಂಜನ ಕ್ರೈಂ ಇತಿಹಾಸ ಭಯಾನಕವಾಗಿದೆ

ಬೆಂಗಳೂರು: ಆನೇಕಲ್ ಪಟ್ಟಣದ ವೀವರ್ಸ್ ಕಾಲೋನಿಯಲ್ಲಿ ನಿನ್ನೆ ರೌಡಿ ಶೀಟರ್ ಮಂಜುನಾಥ್ ಅಲಿಯಾಸ್ ಮೆಂಟಲ್ ಮಂಜನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಶಶಿಕುಮಾರ್, ವಿಜಯ್ ಅಲಿಯಾಸ್ ಟ್ಯಾಟೂ ವಿಜಯ್ ಕೊಲೆ ಮಾಡಿ ಪರರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಪೊಲೀಸರಿಗೆ ಕೆಲವು ಮಹತ್ವದ ವಿಚಾರಗಳು ಗೊತ್ತಾಗಿವೆ.

ಕೊಲೆ ಮಾಡಲು ಬಂದು ತಾನೇ ಕೊಲೆಯಾದ್ನಾ?

ರೌಡಿಶೀಟರ್ ಮೆಂಟಲ್ ಮಂಜನ ಕೊಲೆ ಪ್ರಕರಣದ ಹಿಂದೆ ಬಿದ್ದಿರುವ ಪೊಲೀಸರಿಗೆ ಹೀಗೊಂದು ಅನುಮಾನ ಕಾಡಿದೆ. ಯಾಕೆಂದರೆ ಗುಂಪು ಕಟ್ಟಿಕೊಂಡು ಬಂದಿದ್ದ ಮೆಂಟಲ್ ಮಂಜ, ಟ್ಯಾಟೂ ವಿಜಿ ಜೊತೆ ಗಲಾಟೆ ಮಾಡಿದ್ದ. ಮಾರಕಾಸ್ತ್ರಗಳನ್ನು ತೋರಿಸಿ ಗಲಾಟೆ ಮಾಡಿ ಹಲ್ಲೆ ಮಾಡಿದ್ದ ಎನ್ನಲಾಗಿದೆ.

ಟ್ಯಾಟೂ ವಿಜಿ
ಟ್ಯಾಟೂ ವಿಜಿ

ಗಲಾಟೆ ಜೋರಾಗುತ್ತಿದ್ದಂತೆಯೇ ಟ್ಯಾಟೂ ವಿಜಿ ತನ್ನ ಸ್ನೇಹಿತರಿಗೆ ಕರೆ ಮಾಡಿ ಕರೆಸಿಕೊಂಡಿದ್ದ. ಅಕ್ಕ-ಪಕ್ಕದಲ್ಲಿದ್ದ ವಿಜಿ ಸ್ನೇಹಿತರು ಸ್ಥಳಕ್ಕೆ ಬಂದಿದ್ದರು. ಇಬ್ಬರ ಮಧ್ಯೆ ಗಲಾಟೆ ಮತ್ತೆ ಶುರುವಾಗಿದೆ. ವಿಜಿ ಸ್ನೇಹಿತರು, ಮೆಂಟಲ್ ಮಂಜನಿಂದ ಮಾರಕಾಸ್ತ್ರ ಕಿತ್ತುಕೊಂಡು ಹಲವು ಬಾರಿ ಬುದ್ಧಿವಾದ ಹೇಳಿದ್ದಾರೆ. ವಿಜಿ ಸ್ನೇಹಿತರ ಮಾತನ್ನು ಕೇಳದ ಮೆಂಟಲ್ ಮಂಜ, ಮತ್ತೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಇದರಿಂದ ಕೋಪಿಸಿಕೊಂಡ ವಿಜಿ ಮತ್ತು ಆತನ ಸ್ನೇಹಿತರು ಮಾರಕಾಸ್ತ್ರದಿಂದ ತೀವ್ರ ಹಲ್ಲೆ ಮಾಡಿದ್ದರು.

ಆನೇಕಲ್ ಪೊಲೀಸರಿಗೆ ಈ ವಿಚಾರ ಹೇಗೋ ಗೊತ್ತಾಗಿಬಿಡುತ್ತದೆ. ಗಲಾಟೆ ಆಗುತ್ತಿದ್ದ ಸ್ಥಳಕ್ಕೆ ಪೊಲೀಸರು ಎಂಟ್ರಿ ನೀಡುತ್ತಾರೆ. ಪೊಲೀಸರು ಬರ್ತಿದ್ದಂತೆ ಗಾಯಗೊಂಡಿದ್ದ ಮೆಂಟಲ್ ಮಂಜ ಟಾಟಾ ಸುಮೋದಲ್ಲಿ ಎಸ್ಕೇಪ್ ಆಗಿದ್ದ. ಕೊನೆಗೆ ಸ್ಥಳದಲ್ಲಿದ್ದ ಟ್ಯಾಟು ವಿಜಿ ಹಾಗೂ ಶಶಿಯನ್ನು ಪೊಲೀಸರು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ.

ತೀವ್ರ ಗಾಯಗೊಂಡಿದ್ದ ಮೆಂಟಲ್ ಮಂಜ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ. ಗಂಭೀರವಾಗಿ ಇರಿತಕ್ಕೊಳಗಾಗಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೇ ಮಂಜ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಟ್ಯಾಟೂ ವಿಜಿ ಮೇಲೆ ಸಂಚುರೂಪಿಸಿಯೇ ಹುಡುಗರನ್ನು ಕಟ್ಟಿಕೊಂಡು ಬಂದಿದ್ದ ಎನ್ನಲಾಗುತ್ತಿದೆ.

ಮೆಂಟಲ್ ಮಂಜನ ಹಿಸ್ಟರಿ ಭಯಾನಕ..!

ಕೊಲೆಯಾದ ಮೆಂಟಲ್ ಮಂಜನ ಇತಿಹಾಹ ಭಯಾನಕ. ಈ ಹಿಂದೆ ಎಂಟಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಇದೆ. ಮರ್ಡರ್, ರಾಬರಿ, ಸೇರಿದಂತೆ ಇನ್ನಿತರ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೇ ಏಳು ಪ್ರಕರಣಗಳು ಈತನ ವಿರುದ್ಧ ದಾಖಲಾಗಿದ್ದವು. ಮೊನ್ನೆಯಷ್ಟೇ ಮೆಂಟಲ್ ಮಂಜನ ಮೇಲೆ ಐಪಿಸಿ ಸೆಕ್ಷನ್ 110 ಅಡಿಯಲ್ಲಿ ಕೇಸ್ ಹಾಕಿದ್ದರು. ಲೋಕಸಭೆ ಚುನಾವಣೆ ಹಿನ್ನೆಲೆ ಕೇಸ್ ಹಾಕಿ ವಾರ್ನ್ ಮಾಡಿ ಆನೇಕಲ್ ಪೊಲೀಸರು ಕಳುಹಿಸಿದ್ದರು. ಇನ್ನು ಆರೋಪಿ ಶಶಿ ಮೇಲೆ ಈ ಹಿಂದೆ ಎರಡು ಪ್ರಕರಣ ದಾಖಲಾಗಿವೆ. ಕೊಲೆ ಯತ್ನ ಮತ್ತು ಗಲಾಟೆ ವಿಚಾರದಲ್ಲಿ ಜೈಲಿಗೆ ಹೋಗಿ ಬಂದಿದ್ದ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟ್ಯಾಟೂ ವಿಜಿಯನ್ನು ಕೊಲೆ ಮಾಡಲು ಬಂದು ತಾನೇ ಕೊಲೆಯಾದ ಮೆಂಟಲ್ ಮಂಜ.. ಬೆಚ್ಚಿಬಿದ್ದ ಆನೇಕಲ್

https://newsfirstlive.com/wp-content/uploads/2024/02/MENTAL-MANJA.jpg

Load More