ಮಾರುಕಟ್ಟೆಗೆ ಹೋದಾಗ ಮೆಂತೆ ಸೊಪ್ಪು ಖರೀದಿ ಮಾಡೋದು ಮರಿಯಲೇಬೇಡಿ; ಚಳಿಗಾಲಕ್ಕೆ ಎಷ್ಟು ಉಪಯೋಗ ಗೊತ್ತಾ?

author-image
Gopal Kulkarni
Updated On
ಚಳಿಗಾಲಕ್ಕೆ ನೀವು ಈ ಸೊಪ್ಪುಗಳನ್ನು ತಿನ್ನಲೇಬೇಕು; Winter Seasonಗೆ ಹೇಳಿ ಮಾಡಿಸಿದ ಆರೋಗ್ಯವರ್ಧಕಗಳು
Advertisment
  • ಚಳಿಗಾಲದಲ್ಲಿ ಮೆಂತೆ ಸೊಪ್ಪನ್ನು ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ?
  • ಮೆಂತೆ ಸೊಪ್ಪಿನಿಲ್ಲಿ ಇರುವ ಜೀವಸತ್ವಗಳು, ಪೋಷಕಾಂಶಗಳು ಎಷ್ಟು ಗೊತ್ತಾ?
  • ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳಿಗೆ ಮೆಂತೆ ಸೊಪ್ಪು ರಾಮಬಾಣ

ಮಂತೆ ಸೊಪ್ಪು, ಸೊಪ್ಪಿನ ತರಕಾರಿಗಳಲ್ಲಿ ಹೆಚ್ಚು ಆರೋಗ್ಯಕ್ಕೆ ಉಪಯೋಗಗಳನ್ನು ನೀಡುವ ಸೊಪ್ಪು ಎಂದೇ ಕರೆಯಾಗುತ್ತದೆ.ಈ ಸೊಪ್ಪಿನಲ್ಲಿ ಪೋಷಕಾಂಶಗಳ ಉಗ್ರಾಣವೇ ಇದೆ ಎಂದು ಹೇಳಲಾಗುತ್ತದೆ.ಅದರಲ್ಲೂ ಚಳಿಗಾಲದಲ್ಲಿ ಈ ಮೆಂತೆ ಸೊಪ್ಪು ತಿನ್ನುವುದರಿಂದ ತುಂಬಾ ಆರೋಗ್ಯದ ಲಾಭಗಳು ಇವೆ. ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದರ ಜೊತೆ ಜೊತೆಗೆ ದೇಹದ ಒಟ್ಟಾರೆ ಆರೋಗ್ಯದ ಮೇಲೂ ಕೂಡ ಧನಾತ್ಮಕ ಪರಿಹಾರ ನೀಡಲಿದೆ. ಹೀಗಾಗಿ ನಿಮ್ಮ ವಿಂಟರ್ ಡಯಟ್​ನಲ್ಲಿ ಮೆಂತಸೊಪ್ಪನ್ನು ಮರೆಯದೆ ಉಪಯೋಗಿಸಿ.

publive-image

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಮೆಂತೆ ಸೊಪ್ಪಿನಲ್ಲಿ ಹೇರಳವಾಗಿ ಆ್ಯಂಟಿಆಕ್ಸಿಡಂಟ್ಸ್ ಹಾಗೂ ವಿಟಮಿನ್ ಸಿ ಇರುವುದರ ಜೊತೆಗೆ ಇನ್ನೂ ಪೂರಕ ಪೋಷಕಾಂಶಗಳು ಖನಿಜಾಂಶಗಳು ಕೂಡ ಇವೆ. ಇವು ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚಳಿಗಾಲ ಬಂತು ಅಂದ್ರೆ ಚಳಿ ಜ್ವರ, ಶೀತ ಕೆಮ್ಮಿನಂತಹ ಸಮಸ್ಯೆಗಳು ಬರುವುದು ಸಾಮಾನ್ಯ. ಅದಕ್ಕೆ ಕಾರಣ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಕೊರತೆ, ನಿತ್ಯ ನಾವು ಮೆಂತೆ ಸೊಪ್ಪನ್ನು ತಿನ್ನುವುದರಿಂದ ದೇಹದಲ್ಲಿ ಇಮ್ಯುನಿಟಿ ಶಕ್ತಿ ಹೆಚ್ಚಾಗಿ ಇಂತಹ ಸೋಂಕುಗಳು ಬರದಂತೆ ಕಾಪಾಡುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ
ಮೆಂತೆ ಸೊಪ್ಪಿನಲ್ಲಿರುವ ಹೇರಳವಾದ ಫೈಬರ್ ಅಂಶ ಆರೋಗ್ಯಕರ ಜೀರ್ಣಕ್ರಿಯೆಗೆ ಸಹಾಯಕವಾಗಿ ನಿಲ್ಲುತ್ತದೆ. ಇದರಿಂದ ಚಳಿಗಾಲದಲ್ಲಿ ಕಾಡುವ ಮಲಬದ್ಧತೆಯ ಸಮಸ್ಯೆಯನ್ನು ದೂರವಾಗಿಸುತ್ತದೆ. ಚಳಿಗಾಲದಲ್ಲಿಯೇ ಅತಿಹೆಚ್ಚು ಜೀರ್ಣಕ್ರಿಯೆಯ ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ಮೆಂತೆಸೊಪ್ಪನ್ನು ಹೆಚ್ಚು ಹೆಚ್ಚು ಸೇವಿಸುವುದರಿಂದ ಪಚನಕ್ರಿಯೆ ಸರಳವಾಗಿ ಆಗುತ್ತದೆ.

publive-image

ಚರ್ಮದ ಆರೋಗ್ಯಕ್ಕೂ ಮೆಂತೆ ಸೊಪ್ಪು ಉಪಯುಕ್ತ
ಮೆಂತೆ ಸೊಪ್ಪಿನಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಹೇರಳವಾಗಿ ಸಿಗುತ್ತವೆ. ಇದು ಚರ್ಮದ ಆರೋಗ್ಯದಲ್ಲಿನ ಬೆಳವಣಿಗೆಗೆ ತುಂಬಾ ಸಹಾಯಕಾರಿ. ಚಳಿಗಾಲದಲ್ಲಿ ಚರ್ಮವು ಸಹಜವಾಗಿ ಶುಷ್ಕತೆಯ ಸಮಸ್ಯೆಯಿಂದ ಬಳಲುತ್ತದೆ. ಮೆಂತೆಯನ್ನು ನಿತ್ಯ ಆಹಾರದಲ್ಲಿ ಸೇವಿಸವುದರಿಂದ ಚರ್ಮದಲ್ಲಿ ತೇವಾಂಶವನ್ನು ಹೆಚ್ಚಿಸಿ ಕಾಂತಿಯನ್ನೂ ವೃದ್ಧಿಸುತ್ತದೆ.

ಇದನ್ನೂ ಓದಿ:ಟೆನ್ಷನ್ ಬಿಟ್ಹಾಕಿ ಕೂಲ್ ಆಗಿರಿ.. ಈ 4 ಮಾರ್ಗಗಳನ್ನ ಪಾಲಿಸಿದ್ರೆ ಒತ್ತಡದಿಂದ ಪಾರಾಗಬಹುದು; ನೀವೂ ಟ್ರೈ ಮಾಡಿ!

ಸಕ್ಕರೆ ಕಾಯಿಲೆ ನಿಯಂತ್ರಿಸುತ್ತದೆ
ಮೆಂತೆಸೊಪ್ಪಲ್ಲಿ ಸಕ್ಕರೆಯ ಕಾಯಿಲೆಯನ್ನು ನಿಯಂತ್ರಿಸುವ ಶಕ್ತಿಯಿದೆ ಎಂದು ಹೇಳಲಾಗುತ್ತದೆ. ಅದರಲ್ಲಿರುವ ಪೋಷಕಾಂಶಗಳು ಹಾಗೂ ಜೀವಸತ್ವಗಳು ದೇಹದ ಇನ್ಸೂಲಿನ್ ಲೇವಲ್​ಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತವೆ. ಡಯಾಬಿಟಿಸ್​ನಿಂದ ಬಳಲುತ್ತಿರುವವರಿಗೆ ಮೆಂತೆ ಸೊಪ್ಪು ಹೇಳಿ ಮಾಡಿಸಿದ ಮನೆಮದ್ದು.

ಶೀತ ಮತ್ತು ಕಫದಿಂದ ಸಂರಕ್ಷಣೆ
ಮೆಂತೆ ಸೊಪ್ಪಿನಲ್ಲಿ ನೈಸರ್ಗಿಕವಾದ ಉರಿಯೂತ ನಿರೋಧಕ ಶಕ್ತಿ ಇದೆ ಬ್ಯಾಕ್ಟಿರಿಯಾ ನಿರೋಧಕ ಶಕ್ತಿಯಿದೆ. ಚಳಿಗಾಲದಲ್ಲಿ ಈ ಸೊಪ್ಪನ್ನು ಹೆಚ್ಚು ಹೆಚ್ಚು ತಿನ್ನುವುದರಿಂದ ಗಂಟಲು ಕಟ್ಟುವಿಕೆ. ಸೋರುವ ಮೂಗು, ಕೆಮ್ಮು, ಇವುಗಳಿಗೆಲ್ಲಾ ಇದು ನೈಸರ್ಗಿಕ ಮದ್ದಾಗಿ ಅವುಗಳನ್ನು ನಿಯಂತ್ರಿಸುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment