Advertisment

ಅದೊಂದು ಪತ್ರದಿಂದ ಕಲಬುರಗಿ ಕಮಲ ಪಡೆಯಲ್ಲಿ ಭಯ.. ದೂರು ನೀಡಲು ಹೋದ್ರೆ ಠಾಣೆಯಲ್ಲಿ ಹೈಡ್ರಾಮಾ

author-image
Bheemappa
Updated On
ಅದೊಂದು ಪತ್ರದಿಂದ ಕಲಬುರಗಿ ಕಮಲ ಪಡೆಯಲ್ಲಿ ಭಯ.. ದೂರು ನೀಡಲು ಹೋದ್ರೆ ಠಾಣೆಯಲ್ಲಿ ಹೈಡ್ರಾಮಾ
Advertisment
  • ಪೊಲೀಸ್​ ಠಾಣೆ ಎದುರು ಪ್ರತಿಭಟನೆ ನಡೆಸಿ ಖಾಕಿ ವಿರುದ್ಧ ತೀವ್ರ ಆಕ್ರೋಶ
  • ಪ್ರಕರಣ ದಾಖಲು ಮಾಡಿ ಎಂದ್ರೆ ಬೇರೆ ಕಾನೂನು ಹೇಳಿ ಸಮಯ ವ್ಯರ್ಥ
  • ಕಾಂಟ್ರಾಕ್ಟರ್ ಸಚಿನ್ ಪಂಚಾಳ್ ಪತ್ರದಲ್ಲಿ ಉಲ್ಲೇಖ ಆದ ಹೆಸರುಗಳು ಇವು

ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಆ್ಯಂಡ್ ಗ್ಯಾಂಗ್ ಟಾರ್ಚರ್​​ನಿಂದ ಬೀದರ್ ಮೂಲದ ಕಾಂಟ್ರಾಕ್ಟರ್ ಸಚಿನ್ ಪಂಚಾಳ್ ಜೀವ ಕಳೆದುಕೊಂಡಿದ್ದಾರೆ. ಅವರು ಬರೆದಿಟ್ಟ ಅದೊಂದು ಪತ್ರ ಕಮಲ‌ ಪಡೆಯನ್ನ ಅಕ್ಷರಶಃ ಕಂಗೆಡಿಸಿದೆ. ಸಚಿನ್ ಬರೆದಿದ್ದು ಎನ್ನಲಾದ ಪತ್ರದಲ್ಲಿ ಉಲ್ಲೇಖ ಆಗಿರುವ ಸುಪಾರಿ ಮ್ಯಾಟರ್ ಸ್ವಾಮೀಜಿ, ಬಿಜೆಪಿ ಶಾಸಕ ಹಾಗೂ ಕೇಸರಿ ಮುಖಂಡರನ್ನ ಜೀವ ಭಯ ಹುಟ್ಟಿಸಿದೆ. ದೂರು ದಾಖಲಿಸಲು ಕಲಬುರಗಿ ಸ್ಟೇಷನ್‌ ಬಜಾರ್​ಗೆ ಹೋಗಿದ್ದ ಬಿಜೆಪಿ ನಾಯಕರ ಮತ್ತು ಖಾಕಿ ಮಧ್ಯೆ ಟಾಕ್ ವಾರ್ ನಡೆದಿದ್ದು, ಠಾಣೆಯಲ್ಲಿ ಡೈ ಡ್ರಾಮಾ ನಡೆದು ಹೋಗಿದೆ.

Advertisment

publive-image

ಬೀದರ್ ಮೂಲದ ಕಾಂಟ್ರಾಕ್ಟರ್ ಸಚಿನ್ ಪಂಚಾಳ್ ಪತ್ರದಲ್ಲಿ ಉಲ್ಲೇಖ ಆಗಿರುವ ಸುಪಾರಿ ಉಲ್ಲೇಖ ಇದೀಗ ಕೈ-ಕಮಲ ನಾಯಕರ ನಡುವೆ ರಾಜಕೀಯ ಫೈಟ್​ಗೆ ನಾಂದಿ ಹಾಡಿದೆ. ಕಳೆದ ರಾತ್ರಿ ಕಲಬುರಗಿ ಸ್ಟೇಷನ್‌ ಬಜಾರ್ ಠಾಣೆಯಲ್ಲಿ ಭಾರೀ ಹೈಡ್ರಾಮಾವೇ ನಡೆದಿದೆ.

ಸಚಿವ ಪ್ರೀಯಾಂಕ ಖರ್ಗೆ ಆಪ್ತ ಮಾಜಿ ಕಾರ್ಪೋರೆಟರ್ ರಾಜು ಕಪನೂರ್ ಆ್ಯಂಡ್ ಗ್ಯಾಂಗ್, ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ್, ಆಂದೋಲಾ ಸ್ವಾಮೀಜಿ ಶ್ರೀ ಸಿದ್ದಲಿಂಗ ಸ್ವಾಮೀಜಿ , ಚಂದು ಪಾಟೀಲ್, ಮಣಿಕಂಠ ಸೇರಿ 4 ಜನರಿಗಾಗಿ ಸುಪಾರಿ ನೀಡಿದ್ದಾರೆ ಎಂದು ಗುತ್ತಿಗೆದಾರ ಸಚಿತ್​ ಬರೆದಿರುವ ಪತ್ರದಲ್ಲಿ ಉಲ್ಲೇಖ ಮಾಡಿದ್ದಾನೆ. ಇದು ಕಲಬುರಗಿಯ ಕಮಲ ಪಡೆಯಲ್ಲಿ ಅಕ್ಷರಶಃ ಭಯ ಭೀತಿ ಹುಟ್ಟಿಸಿದೆ. ಪತ್ರದಲ್ಲಿ ಉಲ್ಲೆಖಿಸಿದ ಅಂಶಗಳ ಆಧಾರದ ಮೇಲೆ ಬಿಜೆಪಿ ಪಡೆ ಕಳೆದ ರಾತ್ರಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ದೂರು ನೀಡಲು ಮುಂದಾದಾಗ ಭಾರೀ ಹೈಡ್ರಾಮಾ ನಡೆದಿದೆ.

ಇದನ್ನೂ ಓದಿ: ಮಹಾತ್ಮ ಗಾಂಧಿಯಿಂದ ವಾಜಪೇಯಿವರೆಗೂ; ರಾಜ್​ಘಾಟ್​ನಲ್ಲಿ ಯಾವ ಯಾವ ಮಾಜಿ ಪ್ರಧಾನಿಗಳ ಸ್ಮಾರಕ ಇವೆ

Advertisment

publive-image

ಪತ್ರದಲ್ಲಿ ಕಾರಣವಾದವರು ಹಾಗೂ ನಮ್ಮ ಮೇಲೆ ಷಡ್ಯಂತ್ರ ಮಾಡಲು ಯೋಚನೆ ಮಾಡಿದ್ದರು. ಅವರ ಮೇಲೆ ಎಫ್​ಐಆರ್ ಮಾಡಿ, ತನಿಖೆ ಮಾಡಬೇಕು ಎಂದು ಕಮಿಷನರ್​ ಅವರಿಗೆ ಲಿಖಿತ ರೂಪದಲ್ಲಿ ಒತ್ತಾಯ ಮಾಡಿದ್ದೇವೆ. ಪತ್ರದಲ್ಲಿ ರಾಜು ಕಪನೂರ್ ಹಾಗೂ ಅವರ ಟೀಮ್ ಹೆಸರು ಇದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಕೂಡ ಪ್ರಸ್ತಾಪ ಮಾಡಲಾಗಿದೆ. ಪತ್ರದಲ್ಲಿ ಯಾರ ಯಾರು ಹೆಸರು ಉಲ್ಲೇಖ ಇದೆ ಅವರ ಮೇಲೆ ಪ್ರಕರಣ ದಾಖಲು ಮಾಡಬೇಕು ಎಂದು ಒತ್ತಾಯಿಸಿದ್ದೇವೆ.

ಶಿವರಾಜ್ ಪಾಟೀಲ್ ರದ್ದೆವಾಡಗಿ, ಬಿಜೆಪಿ ಜಿಲ್ಲಾಧ್ಯಕ್ಷ, ಕಲಬುರಗಿ ಗ್ರಾಮೀಣ

ಸಚಿವ ಪ್ರೀಯಾಂಕ ಖರ್ಗೆ ಮತ್ತು ಅವರ ಆಪ್ತ ರಾಜು ಕಪನೂರ್ & ಗ್ಯಾಂಗ್ ವಿರುದ್ದ FIR ದಾಖಲು ಮಾಡುವಂತೆ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ. ಆದ್ರೆ ಸ್ಟೇಷನ್ ಬಜಾರ್ ಠಾಣೆ ಇನ್​​ಸ್ಪೆಕ್ಟರ್ ದೂರು ಪಡೆಯಲು ಹಿಂದೇಟು ಹಾಕಿದ್ದಾರೆ. ಬಿಜೆಪಿ ಮುಖಂಡರು ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ. ಪೊಲೀಸರ ನಡೆ ಖಂಡಿಸಿ ಕಮಲ ಪಡೆ ನಾಯಕರು ಸ್ಟೇಷನ್ ಬಜಾರ್ ಠಾಣೆ ಎದುರು ಪ್ರತಿಭಟನೆ ನಡೆಸಿ ಖಾಕಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ರು. ನಾಳೆ ದಿನ ನಮಗೆ ಏನಾದ್ರು ಆದ್ರೆ ಪ್ರೀಯಾಂಕ್ ಖರ್ಗೆ ಹಾಗೂ ಪೊಲೀಸರೇ ನೇರ ಹೊಣೆ ಎಂದು ನ್ಯಾಯಕ್ಕಾಗಿ ಪ್ರತಿಭಟನೆ ಹಾದಿ ತುಳಿಯಲು ಸಜ್ಜಾಗಿದ್ದಾರೆ.

ಠಾಣೆಗೆ ಬಂದು ಮೂರು-ನಾಲ್ಕು ತಾಸು ಕುಳಿತರು ಕೇಸ್ ದಾಖಲು ಮಾಡಿಕೊಂಡಿಲ್ಲ. ಬೇರೆ ಬೇರೆ ರೀತಿಯ ಕಾನೂನುಗಳನ್ನು ಹೇಳಿಕೊಂಡು ಕುಳಿತ್ತಿದ್ದಾರೆ. ಇಲ್ಲಿ ಕೇಸ್ ಬರಲ್ಲ ಬಾಲ್ಕಿಗೆ ಹೋಗಿ ಕಂಪ್ಲೇಟ್ ಮಾಡಿ ಎನ್ನುತ್ತಾರೆ. ಕಲಬುರಗಿಯಲ್ಲಿ ನಮ್ಮ ಮನೆ ಬರುತ್ತದೆ. ಸಿಟಿಯಲ್ಲಿದ್ದೇವೆ ಎಂದು ಹೇಳಿದ್ರೆ, ನಿಮ್ಮ ಮನೆ ಎಂಬಿ ನಗರಕ್ಕೆ ಬರುತ್ತೆ. ಅಲ್ಲಿಗೆ ಹೋಗಿ ಕೇಸ್ ಹಾಕಿ ಅಂತಾರೆ.

ಬಸವರಾಜ್ ಮತ್ತಿಮೂಡ್, ಬಿಜೆಪಿ ಶಾಸಕರು.

Advertisment

publive-image

ಕಾಂಟ್ರಾಕ್ಟರ್ ಸಚಿನ್ ಪಂಚಾಳ್ ಜೀವ ತೆಗೆದುಕೊಳ್ಳುವ ಮುನ್ನ ಪತ್ರದಲ್ಲಿ ಎಲ್ಲ ಬರೆದಿದ್ದಾರೆ ಎನ್ನಲಾದ ಪ್ರಕರಣ ಸದ್ಯ ರಾಜ್ಯ ರಾಜಕೀಯಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಸುಪಾರಿ ವಿಷಯ ಮುಂದೆ ಯಾವ ಹಂತಕ್ಕೆ ತಲುಪುತ್ತೋ ಏನೋ?.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment