newsfirstkannada.com

₹2,200 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್​.. ಐವರನ್ನ ಅರೆಸ್ಟ್ ಮಾಡಿದ ಪೊಲೀಸರು

Share :

Published February 21, 2024 at 9:24am

Update February 21, 2024 at 10:18am

    ಪೊಲೀಸರು ಈ ಮೆಫಡ್ರೋನ್ ಸೀಜ್ ಮಾಡಿರುವುದು ಎಲ್ಲಿ.?

    ಗೋಡೌನ್​ವೊಂದರಲ್ಲಿ ಮಾದಕ ವಸ್ತು ತಯಾರು ಮಾಡುತ್ತಿದ್ದರು

    ಎಷ್ಟು ಸಾವಿರ ಕೆಜಿ ಮೆಫಡ್ರೋನ್ ವಶಕ್ಕೆ ಪಡೆದುಕೊಂಡಿದ್ದಾರೆ?

ಮುಂಬೈ: 2,200 ಕೋಟಿ ರೂಪಾಯಿ ಮೌಲ್ಯದ 1,100 ಕೆ.ಜಿ ತೂಕದ ಮಾದಕ ವಸ್ತುವಾದ ಮೆಫಡ್ರೋನ್ ಅನ್ನು ಮಹಾರಾಷ್ಟ್ರದ ಪುಣೆಯ ಕುರ್ಕುಂಭ್‌ನ ಗೋಡೌನ್​ವೊಂದರಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮಹಾರಾಷ್ಟ್ರದ ಪುಣೆ ಪೊಲೀಸರು ಮಾದಕ ದ್ರವ್ಯ ಮಾರಾಟದ ಬೃಹತ್ ಜಾಲವೊಂದನ್ನ ಪತ್ತೆ ಹಚ್ಚಿದ್ದು 2,200 ಕೋಟಿ ರೂಪಾಯಿ ಮೌಲ್ಯದ 1,100 ಕೆ.ಜಿ ತೂಕದ ಮಾದಕ ವಸ್ತು ಮೆಫಡ್ರೋನ್ ಅನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಐವರನ್ನು ಅರೆಸ್ಟ್ ಮಾಡಿದ್ದಾರೆ. ಪುಣೆಯ ಅರ್ಥ್ ಕೆಮ್ ಪ್ರೈವೇಟ್ ಲಿಮಿಟೆಡ್ ಫಾರ್ಮಾ ಪ್ಲಾಂಟ್‌ನಿಂದ 1,400 ಕೋಟಿ ರೂಪಾಯಿ ಮೌಲ್ಯದ 700 ಕೆಜಿ ಎಂಡಿ ಮತ್ತು ದೆಹಲಿಯಲ್ಲಿ 800 ಕೋಟಿ ಮೌಲ್ಯದ 400 ಕೆಜಿ ಸಿಂಥೆಟಿಕ್ ಡ್ರಗ್ ಅನ್ನು ವಶಪಡಿಸಿಕೊಂಡಿದ್ದಾರೆ.

ಇನ್ನು ಈ ಸಂಬಂಧ ಮಾತನಾಡಿದ ಪೊಲೀಸ್ ಅಧಿಕಾಯೊಬ್ಬರು, ಫಾರ್ಮಾ ಪ್ಲಾಂಟ್‌ನ ಮಾಲೀಕ ಭೀಮಾಜಿ ಅಲಿಯಾಸ್ ಅನಿಲ್ ಪರಶುರಾಮ್ ಸಬ್ಲೆ, ಇಂಜಿನೀಯರ್ ಯುವರಾಜ್ ಬಬನ್ ಭುಜಬಲ್ ಸೇರಿ ಐವರನ್ನು ಅರೆಸ್ಟ್ ಮಾಡಿದ್ದೇವೆ. ಇನ್ನು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್ (ಎನ್‌ಡಿಪಿಎಸ್) ಕಾಯ್ದೆಯಡಿಯಲ್ಲಿ ಎಂಡಿ ಉತ್ಪಾದನೆ ಮತ್ತು ವ್ಯಾಪಾರ ಮಾಡುವುದನ್ನ ನಿಷೇಧ ಮಾಡಲಾಗಿದೆ. ಎರಡೂ ಸ್ಥಳಗಳಲ್ಲಿ ಕ್ರಿಸ್ಟಲ್ ರೂಪದಲ್ಲಿ ಸಿಂಥೆಟಿಕ್ ಔಷಧ ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

₹2,200 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್​.. ಐವರನ್ನ ಅರೆಸ್ಟ್ ಮಾಡಿದ ಪೊಲೀಸರು

https://newsfirstlive.com/wp-content/uploads/2024/02/MUMBAI_POLICE.jpg

Load More