ಕಾರು ಪ್ರಿಯರ ದಿಲ್ ಕದ್ದ ಎರಡು ಹೊಸ ಪ್ರೋ ಮಾಡೆಲ್​.. ಬೆಲೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ!

author-image
Veena Gangani
Updated On
ಕಾರು ಪ್ರಿಯರ ದಿಲ್ ಕದ್ದ ಎರಡು ಹೊಸ ಪ್ರೋ ಮಾಡೆಲ್​.. ಬೆಲೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ!
Advertisment
  • 2 ಮಾಡೆಲ್ ಕಾರ್​ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಕಂಪನಿ
  • ಮರ್ಸಿಡೀಸ್​ ಎಎಂಜಿ ಜಿಟಿ 63 ಬೆಲೆ ಎಷ್ಟು ಅಂತ ತಿಳಿದುಕೊಳ್ಳಿ
  • ಈ ಎರಡು ಕಾರುಗಳು ಜನರ ಮನಸ್ಸು ಗೆಲ್ಲುವಲ್ಲಿ ಸಕ್ಸ್​ಸ್​ ಆಗುತ್ತಾ?

ಬೆಂಝ್ ಕಾರು ಅಂದ್ರೆ ಒಂದು ಬ್ರ್ಯಾಂಡ್. ಇದು ಈಗಿನ ಜಮಾನದಲ್ಲಷ್ಟೇ​ ಅಲ್ಲ. ಬದಲಾಗಿ ದಶಕಗಳಿಂದಲೂ ಕೂಡ ಹಾಗೇ ತನ್ನ ವ್ಯಾಲ್ಯೂವನ್ನು ಉಳಿಸಿಕೊಂಡು ಬಂದಿದೆ. ಹಾಗೇ ಈ ಫೇಮಸ್​ ಕಾರ್​ ಕಂಪನಿ ಇದನ್ನೂ​ ಖರೀದಿಯ ಆಫ್ ಸೀಸನ್​ನಲ್ಲೂ ಕೂಡ ತನ್ನ ಹೊಸ ಕಾರ್​ನ ಲಾಂಚ್ ಮಾಡಿದೆ. ಅದೇ ಮರ್ಸಿಡೀಸ್​ ಎಎಂಜಿ ಜಿಟಿ 63 ಹಾಗೂ ಮರ್ಸಿಡೀಸ್​ ಎಎಂಜಿ ಜಿಟಿ 63 ಪ್ರೋ. ಈ ಎರಡು ಮಾಡೆಲ್ ಕಾರ್​ಗಳನ್ನು ಈಗ ಮಾರುಕಟ್ಟೆಗೆ ಪರಿಚಯಿಸಿದೆ. ಅದರ ಜೊತೆಗೆ ಈ ಮಾಡೆಲ್ ಕಾರ್​ ಪ್ರಿಯರ ದಿಲ್ ಕದ್ದಿದೆ.

ಇದನ್ನೂ ಓದಿ:ಶೆಫಾಲಿ ಜರಿವಾಲಾ ಮಾಜಿ ಬಾಯ್​ಫ್ರೆಂಡ್.. ಬಿಗ್​ಬಾಸ್​ ವಿನ್ನರ್​ ಕೂಡ​ ಈ ಹಿಂದೆ ಹೃದಯಾಘಾತದಿಂದ ನಿಧನ!

publive-image

ಈ ಕಾರಿನ ವಿಶೇಷತೆ ಏನು..?

GT 63 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ V8 ಎಂಜಿನ್‌ ಹೊಂದಿದೆ. ಇದು 4MATIC+ ಆಲ್-ವೀಲ್-ಡ್ರೈವ್ ಸಿಸ್ಟಮ್ ಅನ್ನು ಹೊಂದಿದೆ. ಕಾರು ಅತ್ಯಂತ ಪವರ್​​ಫುಲ್​ ಆಕ್ಸಲರೇಶನ್​ ಹೊಂದಿದೆ, ಸುಮಾರು 3.4 ಸೆಕೆಂಡುಗಳಲ್ಲಿ 0-100 ಪ್ರತಿ ಗಂಟೆಗೆ ತಲುಪುತ್ತೆ. ಇದು ಆಟೋಮೇಟಿಕ್​ ಟ್ರಾನ್ಸಿಷನ್ ಬಳಸುತ್ತದೆ. GT 63 Pro 4MATIC+ ಹೆಚ್ಚು ಟ್ರ್ಯಾಕ್-ಕೇಂದ್ರಿತ ಆವೃತ್ತಿಯಾಗಿದ್ದು, ಇದು ಕಾರ್​ನ ಮೂವ್​ಮೆಂಟ್​​ನ ಇನ್ನಷ್ಟು ಸುಗಮವಾಗಿಸುತ್ತೆ. GT 63 "ಡ್ರಿಫ್ಟ್ ಮೋಡ್"ನ ನೀಡುತ್ತಿದೆ. ಇದು ರೇರ್​​ ವ್ಹೀಲ್​ಗೆ ಪ್ರತ್ಯೇಕವಾಗಿ ಪವರ್​​ನ ಒದಗಿಸುತ್ತೆ. ಪ್ಲಗ್-ಇನ್ ಹೈಬ್ರಿಡ್ ಆವೃತ್ತಿ, GT 63 S E ಕಾರ್ಯಕ್ಷಮತೆ, V8ನ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಕಂಬೈನ್ ಆಗಿದೆ. ಒಟ್ಟಾರೆಯಾಗಿ 843 ಹಾರ್ಸ್​ ಪವರ್​​ನ ಉತ್ಪಾದನೆ ಮಾಡುತ್ತೆ. ಇನ್ನೂ GTಯ ಟಾಪ್​ ಸ್ಪೀಡ್​ ಪ್ರತೀ ಗಂಟೆಗೆ 315 ಹಾಗೂ GT PROನ ಟಾಪ್​ ಸ್ಪೀಡ್​ ಪ್ರತೀ ಗಂಟೆಗೆ 317ರಷ್ಟಿದೆ. 11.9 ಇಂಚಿನ ಇನ್ಫೋಟೇನ್​ಮೆಂಟ್​​ ಸ್ಕ್ರೀನ್​ನ ಹೊಂದಿದೆ.​

publive-image

ಈ ಕಾರಿನ ಬೆಲೆ ಎಷ್ಟು ಗೊತ್ತಾ?

ಬೇಸ್​ ಮಾಡೆಲ್​ (GT 63 4MATIC+) ರೂ. 3 ಕೋಟಿಯಿಂದ ಇದರ ಬೆಲೆ ಪ್ರಾರಂಭವಾಗುತ್ತದೆ. ಆದರೆ ಟಾಪ್-ಎಂಡ್ GT 63 Pro 4MATIC+ ಬೆಲೆ ರೂ. 3.65 ಕೋಟಿಗೆ ಲಭ್ಯ. ಇದೆಲ್ಲವೂ ಕೂಡ ಎಕ್ಸ್​​-ಸೋರೂಮ್​ನ ಬೆಲೆ. ಈಗ ಆಫ್​ ಸಿಸನ್​​ನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿರೋ Mercedes-AMG GT 63 4MATIC+ ಹಾಗೂ ಪ್ರೋ ಮಾಡೆಲ್​ಗಳು ಈ ಎಲ್ಲಾ SPECIFICATIONಗಳಿಂದ ಜನರ ಮನಸ್ಸು ಗೆಲ್ಲುವಲ್ಲಿ ಸಕ್ಸ್​ಸ್​ ಆಗುತ್ತಾ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment