Advertisment

ತಪ್ಪಿದ ಭಾರೀ ಅನಾಹುತ.. 173 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ -ಮುಂದೆ ಏನಾಯ್ತು..?

author-image
Ganesh
Updated On
ತಪ್ಪಿದ ಭಾರೀ ಅನಾಹುತ.. 173 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ -ಮುಂದೆ ಏನಾಯ್ತು..?
Advertisment
  • ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುರ್ಘಟನೆ
  • ಟೇಕ್​-ಆಫ್ ಆದ ಕೆಲವೇ ಕ್ಷಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ
  • ತುರ್ತು ದ್ವಾರದ ಮೂಲಕ ಸುರಕ್ಷಿತವಾಗಿ ಇಳಿದ ಪ್ರಯಾಣಿಕರು

ಅಮೆರಿಕ ಏರ್‌ಲೈನ್ಸ್‌ ವಿಮಾನವು ಟೇಕಾಫ್‌ ಆದ ಕೆಲಹೊತ್ತಿನಲ್ಲೇ ಬೆಂಕಿ ಕಾಣಿಸಿಕೊಂಡು ಕೆಲ ಕಾಲ ಆತಂಕ ಸೃಷ್ಟಿಸಿತ್ತು. ತಕ್ಷಣ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್‌ ಮಾಡಲಾಗಿದ್ದು, 173 ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ.

Advertisment

ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ( Denver airport ) ಅಮೆರಿಕನ್ ಏರ್​ ವಿಮಾನದ ಎಡಭಾಗದ ಮುಖ್ಯ ಲ್ಯಾಂಡಿಂಗ್ ಗೇರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಮಿಯಾಮಿಗೆ ತೆರಳುತ್ತಿದ್ದ AA3023 ವಿಮಾನವು (AA-3023) ಟೇಕಾಫ್‌ ಆದ ಸ್ವಲ್ಪ ಸಮಯದ ನಂತರ ರನ್‌ವೇಯಲ್ಲಿದ್ದಾಗಲೇ ಬೆಂಕಿ ಕಾಣಿಸಿಕೊಂಡಿತು.

ಇದನ್ನೂ ಓದಿ: ಥಾಯ್ಲೆಂಡ್‌-ಕಾಂಬೋಡಿಯಾ ಮಧ್ಯೆ ಯುದ್ಧ.. ಇಲ್ಲಿಯೂ ನಂದೆಲ್ಲಿ ಇಡಲಿ ಅಂದ್ರು ಟ್ರಂಪ್..!

ವಿಮಾನದ ಕೆಳಗೆ ಹೊಗೆ ಆವರಿಸಿದ್ದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ತುರ್ತು ಸ್ಲೈಡ್‌ಗಳ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಪ್ರಯಾಣಿಕರು ಗಾಬರಿಯಿಂದ ತುತ್ತು ಬಾಗಿಲಿನಿಂದ ಜಾರುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೈಲಟ್​​ ಹಾಗೂ ವಿಮಾನ ಸಿಬ್ಬಂದಿಯ ಜಾಗೃತೆಯಿಂದ ಅನಾಹುತ ತಪ್ಪಿದೆ.

Advertisment

ಇದನ್ನೂ ಓದಿ: ಮತ್ತೆ ಆಸರೆಯಾದ ಕನ್ನಡಿಗ KL ರಾಹುಲ್.. ಇವತ್ತು ಕೊನೆಯ ದಿನ, ಮತ್ತಷ್ಟು ಕುತೂಹಲ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment