/newsfirstlive-kannada/media/post_attachments/wp-content/uploads/2025/03/MES-Arrest3.jpg)
ಸದಾ ಒಂದಿಲ್ಲೊಂದು ಗಡಿ ವಿವಾದ ಕೆದಕುವ ಎಂಇಎಸ್ ಪುಂಡನೊಬ್ಬನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಕನ್ನಡದ ನೆಲದಲ್ಲಿ ಬದುಕು ಕಟ್ಟಿಕೊಂಡ ಎಂಇಎಸ್ ಪುಂಡರು ಸದಾ ಕನ್ನಡಿಗರು ಕನ್ನಡದ ನೆಲದ ವಿರುದ್ಧ ನಾಡದ್ರೋಹಿ ಕೃತ್ಯ ಎಸಗುತ್ತಿದ್ದರು. ಕನ್ನಡಿಗರ ಹೋರಾಟವನ್ನೇ ಅಪಹಾಸ್ಯ ಮಾಡ್ತಿದ್ದ ಎಂಇಎಸ್ ಪುಂಡನಿಗೆ ಬೆಳಗಾವಿ ಪೊಲೀಸರು ಹಿಂಡಲಗಾ ಜೈಲು ದಾರಿ ತೋರಿಸಿದ್ದಾರೆ.
ಇದನ್ನೂ ಓದಿ:MLA ಮಗನ ಜೊತೆ ಭಾರ್ಗವಿ ರೊಮ್ಯಾಂಟಿಕ್ ಡ್ಯಾನ್ಸ್.. ಇಲ್ಲಿದೆ ತೆರೆ ಹಿಂದಿನ ಸಖತ್ ವಿಡಿಯೋ!
ಎಂಇಎಸ್ ಚೇಲಾ, ನಾಡದ್ರೋಹಿ ಶುಭಂ ಶಳಕೆ ಶಾಂತಿ ಪ್ರಿಯ ಕನ್ನಡಿಗರನ್ನು ಕೆರಳಿಸಿದ್ದಾನೆ. ಮರಾಠಿ ಪುಂಡರ ವಿರುದ್ಧ ಪ್ರತಿಭಟನೆ ಮಾಡಿದ್ದ ಕನ್ನಡಪರ ಹೋರಾಟಗಾರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಈ ಕುರಿತು ಮಾಳಮಾರುತಿ ಪೊಲೀಸ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಈ ಬೆನ್ನಲ್ಲೇ ಈತ ಜಾಮೀನಿನ ಮೇಲೆ ಹೊರ ಬಂದಿದ್ದ. ಆದ್ರೆ ಈತನ ನಾಡದ್ರೋಹಿ ಕಿರಿಕ್ ಕೆಲಸ ಮಾತ್ರ ಮುಂದುವರಿದಿತ್ತು.
ಜಾಲತಾಣದಲ್ಲೂ ಕನ್ನಡ ಹಾಗೂ ಕನ್ನಡಮ್ಮನ ಕುರಿತು ಅಪಹಾಸ್ಯ ಮಾಡುವ ಮೂಲಕ ಶಾಂತಿ ಸೌಹಾರ್ದತೆಗೆ ಧಕ್ಕೆ ತರುವ ಯತ್ನ ಮಾಡುತ್ತಿದ್ದ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ವಿಡಿಯೋ ಹೇಳಿಕೆ ಹರಡುವ ಮೂಲಕ ಶಾಂತಿ-ಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನ ಮಾಡಿದ್ದನು. ಅಹಿತಕರ ಘಟನೆ ನಡೆಯುವ ಸಾಧ್ಯತೆ ಇರೋ ಕಾರಣಕ್ಕೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಸದ್ಯ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇನ್ನೊಂದೆಡೆ ಮರಾಠಿ ಭಾಷೆಯಲ್ಲೇ ಮಾತನಾಡುವಂತೆ ಪಿಡಿಓ ಮೇಲೆ ದರ್ಪ ಮೆರೆದಿದ್ದ ಕಿಣೆಯ ತಿಪ್ಪಣ್ಣ ಡೋಕ್ರೆ ಎಂಬಾತನನ್ನು ಸನ್ಮಾನಿಸಿದ್ದು ಇದೇ ಶುಭಂ ಶಳಕೆ. ಅಷ್ಟೇ ಅಲ್ಲ ಭಾಷಾ ಸಾಮರಸ್ಯ ಕದಡುವ ಪ್ರಚೋದನಕಾರಿ ಹೇಳಿಕೆಗಳು ಹಾಗೂ ಕನ್ನಡಿಗರ ವಿರುದ್ಧ ಮರಾಠಿಗರನ್ನು ಎತ್ತಿಕಟ್ಟುವಂತಹ ನಾಡದ್ರೋಹಿ ಕೃತ್ಯಗಳನ್ನ ಎಸಗುತ್ತಿದ್ದ. ಸದ್ಯ ಆರೋಪಿ ಶುಭಂ ಶೆಳಕೆಯನ್ನ ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ. ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ಕರೆತಂದು ಕೋರ್ಟ್ಗೆ ಹಾಜರುಪಡಿಸಿ ಹಿಂಡಲಗಾ ಜೈಲಿಗೆ ಅಟ್ಟಿದ್ದಾರೆ.
ಒಟ್ಟಾರೆ, ತಡವಾಗಿಯಾದರೂ ಬೆಳಗಾವಿ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ನಾಡದ್ರೋಹಿ ಎಂಇಎಸ್ ಪುಂಡನ ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಪದೇ ಪದೇ ಬೆಳಗಾವಿ ಗಡಿ ವಿಚಾರದಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದ ಆರೋಪಿ ಶುಭಂ ಶಳಕೆ ಜೈಲು ಸೇರಿದ್ದಾನೆ. ಪೊಲೀಸರು ಇಷ್ಟಕ್ಕೆ ಸುಮ್ಮನಾಗದೇ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಗಟ್ಟಿತನ ಪ್ರದರ್ಶನ ಮಾಡಬೇಕಿದೆ. ಇನ್ಮುಂದೆ ಇಂತಹ ಪುಂಡರು ಬಾಲ ಬಿಚ್ಚದಂತೆ ಮಾಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ