ಬೆಂಗಳೂರಿನ ಹಲವೆಡೆ ಇಂದು ಧಾರಾಕಾರ ಮಳೆ; ಈ ಒಂದು ಏರಿಯಾಗೆ ಹವಾಮಾನ ಇಲಾಖೆ ಎಚ್ಚರಿಕೆ!

author-image
admin
Updated On
ರಾಜ್ಯದ ಜನರಿಗೆ ಗುಡ್​ನ್ಯೂಸ್​.. ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ..!
Advertisment
  • ಒಂದೇ ದಿನ ಬೆಂಗಳೂರು ನಗರದಲ್ಲಿ 29.6 ಮಿಲಿ ಮೀಟರ್ ಮಳೆ‌
  • ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಅತ್ಯಧಿಕ ಮಳೆ ದಾಖಲು
  • ರಾಜ್ಯಾದ್ಯಂತ ಗುಡುಗು, ಮಿಂಚು ಮತ್ತು ಜೋರಾದ ಗಾಳಿಯೊಂದಿಗೆ ಭಾರೀ ಮಳೆ

ಬೆಂಗಳೂರು: ವೀಕೆಂಡ್ ಅಂತ ಆರಾಮಾಗಿರುವ ಸಿಲಿಕಾನ್ ಸಿಟಿ ಜನರಿಗೆ ಇಂದು ಮಳೆರಾಯನ ಶಾಕ್ ಕಾದಿದೆ. ಬೆಂಗಳೂರು ನಗರದ ಹಲವೆಡೆ ಇಂದು ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದೆ. ನಿನ್ನೆ ಸುರಿದ ಭಾರೀ ಮಳೆಗೆ ನಗರದ ಹಲವೆಡೆ ಜನರು ಪರದಾಟ ನಡೆಸಿದ್ದಾರೆ.

ಇದನ್ನೂ ಓದಿ: ಕಾರಿನಲ್ಲಿ ಲೈಂಗಿಕ ದೌರ್ಜನ್ಯ.. ವಿಡಿಯೋ ಮಾಡಿಕೊಳ್ಳುತ್ತಿದ್ದ ವಿಕೃತಕಾಮಿ ಪರಾರಿ; ಪೊಲೀಸರಿಂದ ಹುಡುಕಾಟ 

ನಿನ್ನೆ ಒಂದೇ ದಿನ ಬೆಂಗಳೂರು ನಗರದಲ್ಲಿ 29.6 ಮಿಲಿ ಮೀಟರ್ ಮಳೆ‌ ದಾಖಲಾಗಿದೆ. ಜೋರು ಮಳೆಗೆ ಸಿಲಿಕಾನ್ ಸಿಟಿ ಫುಲ್ ಕೂಲ್ ಆಗಿದೆ. ಆದರೆ, ನಿನ್ನೆಯ ಮಳೆಗೆ ಹಲವು ಏರಿಯಾದ ರಸ್ತೆಗಳು ಜಲಾವೃತವಾಗಿತ್ತು. ಸರ್ಜಾಪುರ, ಕೆಂಪಾಪುರದ ಮುಖ್ಯರಸ್ತೆಯಲ್ಲಿ ನೀರು ಹರಿದಿದ್ದು, ರಾಮಕೃಷ್ಣ ನಗರ, ಕನಕನಗರ, ಯಲಚೇನಹಳ್ಳಿ ಭಾಗದಲ್ಲಿ ಮನೆಗಳಿಗೆ ಮೋರಿ ನೀರು ನುಗ್ಗಿದೆ. ಮಾರತಳ್ಳಿ, ಹೂಡಿ ಜಂಕ್ಷನ್, ಎಲೆಕ್ಟ್ರಾನಿಕ್ ಸಿಟಿ, ಪಣತ್ತೂರು ರೇಲ್ವೆ ಬ್ರಿಡ್ಜ್ ಬಳಿ ನಿನ್ನೆ ಸುರಿದ ಮಳೆಗೆ ತತ್ತರಿಸಿ ಹೋಗಿದೆ.


">June 2, 2024

ಇನ್ನು, ಬಿಬಿಎಂಪಿ ವ್ಯಾಪ್ತಿ ದಾಸರಹಳ್ಳಿಯ ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಜೂನ್ 1 ಬೆಳಗ್ಗೆ 8.30 ರಿಂದ ಜೂನ್ 2ರ 8.30ರವರೆಗೆ 78.5 ಮಿಲಿ ಮೀಟರ್ ಮಳೆದಾಖಲಾಗಿದೆ. ಇಂದು ಮೋಡ ಕವಿದ ವಾತಾವರಣ ಮುಂದುವರಿದಿದ್ದು, ವೀಕೆಂಡ್ ಅಂತ ಮನೆಯಿಂದ ಹೊರಗೆ ಹೋಗುವವರು ಇಂದು ಸಂಜೆ ಮಳೆ ಬರುವ ಹಿನ್ನೆಲೆ ಎಚ್ಚರದಿಂದ ಇರಬೇಕಿದೆ.

ಜೂನ್ 2ರಿಂದ ಜೂನ್ 10ರವರೆಗೂ ರಾಜ್ಯಾದ್ಯಂತ ಗುಡುಗು ಮಿಂಚು ಮತ್ತು ಜೋರಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮಂಡ್ಯ ಜಿಲ್ಲೆ ನಾಗಮಂಗಲದ ಬ್ರಹ್ಮದೇವರಹಳ್ಳಿಯಲ್ಲಿ ಕಳೆದ 24 ಗಂಟೆಗಳಲ್ಲಿ ಸುಮಾರು 117 ಮಿಲಿ ಮೀಟರ್ ಮಳೆ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment