/newsfirstlive-kannada/media/post_attachments/wp-content/uploads/2025/04/instagram.jpg)
ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಳಕೆಗೆ ಲಿಮಿಟ್ ಇರಬೇಕು. ಮಿತಿ ಮೀರಿದರೆ ಅನಾಹುತಗಳೇ ಹೆಚ್ಚು. ಹೀಗಾಗಿ ಕೆಲವು ದೇಶಗಳಲ್ಲಿ ಮಕ್ಕಳು ಸೋಶಿಯಲ್ ಮೀಡಿಯಾ ಬಳಕೆಗೆ ನಿಷೇಧ ಇದೆ. ಇದೀಗ ಜನಪ್ರಿಯ ಸೋಶಿಯಲ್ ಮೀಡಿಯಾ ವೇದಿಕೆ ಮೆಟಾ ವಯಸ್ಸಿನ ಆಧಾರದ ಮೇಲೆ ಫೇಸ್ಬುಕ್, ಇನ್‌ಸ್ಟಾಗ್ರಾಮ್ ಹಾಗೂ ಮೆಸೇಂಜರ್ಗಳ ಬಳಕೆಗೆ ಒಂದಷ್ಟು ನಿರ್ಬಂಧ ವಿಧಿಸಲು ಮುಂದಾಗಿದೆ.
ಆರಂಭದಲ್ಲಿ ಅಮೆರಿಕ, ಬ್ರಿಟನ್, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ಜಾರಿಗೆ ಬರಲಿದ್ದು, ಮುಂಬರುವ ತಿಂಗಳುಗಳಲ್ಲಿ ಭಾರತ ಸೇರಿ ಇತರೆಡೆ ಜಾರಿಗೆ ಬರಲಿದೆ. ಪೋಷಕರ ನಿಯಂತ್ರಣ (ಪೇರೆಂಟಲ್‌ಕಂಟ್ರೋಲ್) ಜಾರಿಗೆ ತರಲಾಗಿದೆ. ಅದರ ಪ್ರಕಾರ, 16 ವರ್ಷಕ್ಕಿಂತ ಕೆಳಗಿನ ಮಕ್ಕಳು ಇನ್ನು, ಲೈವ್ ಸ್ಟ್ರೀಂಗೆ ಬರಲು ಪೋಷಕರ ಒಪ್ಪಿಗೆ ಕಡ್ಡಾಯವಾಗಿರುತ್ತದೆ. ಮಾತ್ರವಲ್ಲ, ಅಶ್ಲೀಲ ಚಿತ್ರಗಳನ್ನು ಅನ್ಬ್ಲರ್ ಮಾಡಲು ಪೋಷಕರ ಅನುಮತಿ ಕಡ್ಡಾಯವಾಗಿದೆ.
ಇದನ್ನೂ ಓದಿ: RCB ಕ್ಯಾಪ್ಟನ್ ರಜತ್ ಪಾಟೀದಾರ್ಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ..!
ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಮಕ್ಕಳು ಅನಾಹುತ ಮಾಡಿಕೊಳ್ತಿದ್ದಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ ಮೆಟಾ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಸುರಕ್ಷಿತ ಮತ್ತು ಜವಾಬ್ದಾರಿಯುತ ಡಿಜಿಟಲ್ ಪರಿಸರ ಸೃಷ್ಟಿಸುವ ಗುರಿ ಇಟ್ಟಕೊಂಡಿದೆ. ಅದರಂತೆ ಭಾರತಕ್ಕೆ ಇನ್‌ಸ್ಟಾಗ್ರಾಮ್ ಹದಿಹರೆಯದ ಖಾತೆಗಳ ವಿಸ್ತರಣೆಯೊಂದಿಗೆ, ಸೆಫ್ಟಿ ಅನುಭವ ನೀಡುವ ನಿಟ್ಟಿನಲ್ಲಿ ಮೆಟಾ ಪ್ಲಾನ್ ಮಾಡಿದೆ.
ಏನೆಲ್ಲ ನಿಯಮ..?
- 18 ವರ್ಷದೊಳಗಿನ ಮಕ್ಕಳ ಬಳಕೆಗಾಗಿ ಇನ್‌ಸ್ಟಾಗ್ರಾಮ್ ಖಾತೆಗಳ ವಿಸ್ತರಣೆ
- ಇನ್ಮುಂದೆ ಹದಿಹರೆಯದವರೂ ಕೂಡ ಇನ್‌ಸ್ಟಾಗ್ರಾಮ್ ಖಾತೆ ತೆರೆಯಬಹುದು
- ಪೋಷಕರ ಒಪ್ಪಿಗೆ ಮೇಲೆ ಖಾತೆ ಓಪನ್, ಪೋಷಕರ ಸಂಪೂರ್ಣ ನಿಯಂತ್ರಣ
- ತಾವು ಫಾಲೋ ಮಾಡುವ ಮತ್ತು ಹಿಂದೆ ಕಳುಹಿಸಿದ ಜನರಿಂದ ಮಾತ್ರ ಮೆಸೇಜ್
- ಅಪರಿಚಿತ ವ್ಯಕ್ತಿಗಳ ಮೆಸೇಜ್ ಸ್ವೀಕಾರಕ್ಕೆ ಅವಕಾಶ ಇರುವುದಿಲ್ಲ
- ಒಂದು ಗಂಟೆ ಮಾತ್ರ ಬಳಕೆಗೆ ಅವಕಾಶ, ಅದಾದ ನಂತರ ಅಪ್ಲಿಕೇಷನ್ ವರ್ಕ್ ಆಗಲ್ಲ
- ರಾತ್ರಿ ವೇಳೆ ಈ ಖಾತೆಗಳು ಕ್ವೈಟ್ ಮೂಡ್ನಲ್ಲಿ ಇರುತ್ತವೆ
- ಸೆಟ್ಟಿಂಗ್ಸ್ಗಳನ್ನು ಬದಲಾಯಿಸಲು ಪೋಷಕರ ಅನುಮತಿ ಕಡ್ಡಾಯ
- ಲೈವ್ ಸ್ಟ್ರೀಂಗೆ ಬರಲು ಪೋಷಕರ ಒಪ್ಪಿಗೆ ಕಡ್ಡಾಯ
- ಅಶ್ಲೀಲ ಚಿತ್ರಗಳನ್ನು ಅನ್ಬ್ಲರ್ ಮಾಡಲು ಪೋಷಕರ ಅನುಮತಿ ಕಡ್ಡಾಯ
- ಅಮೆರಿಕ, ಬ್ರಿಟನ್, ಯುಕೆ, ಆಸ್ಟ್ರೇಲಿಯಾ, ಕೆನಡಾದಲ್ಲಿ ಪ್ರಾಯೋಗಿಕ ಜಾರಿ
- ಕೆಲವು ತಿಂಗಳ ನಂತರ ಭಾರತದಲ್ಲೂ ಇದು ಜಾರಿಗೆ ಬರಲಿದೆ
ಇದನ್ನೂ ಓದಿ: ಇಂದಿನಿಂದ ಈ ಕಂಪನಿ ಕಾರುಗಳ ಬೆಲೆ ಭಾರೀ ಏರಿಕೆ.. 62,000 ರೂಪಾಯಿ ಹೆಚ್ಚಳವಾದ ಕಾರು ಯಾವುದು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ