Advertisment

Meta Layoff: ಕೆಲಸ ಕಳೆದುಕೊಳ್ಳೋ ಭೀತಿಯಲ್ಲಿ 3600 ಮಂದಿ; ದೊಡ್ಡ ದೊಡ್ಡ ತಲೆಗಳೇ ಔಟ್

author-image
Ganesh Nachikethu
Updated On
Meta Layoff: ಕೆಲಸ ಕಳೆದುಕೊಳ್ಳೋ ಭೀತಿಯಲ್ಲಿ 3600 ಮಂದಿ; ದೊಡ್ಡ ದೊಡ್ಡ ತಲೆಗಳೇ ಔಟ್
Advertisment
  • ಬಿಗ್​ ಅಪ್ಡೇಟ್​ ಕೊಟ್ಟ ಫೇಸ್​ಬುಕ್​ ಸಿಇಒ ಮಾರ್ಕ್​ ಜುಕರ್​ ಬರ್ಗ್
  • ಮತ್ತೆ ಮೆಟಾದಲ್ಲಿ ವಜಾ ಪರ್ವ ಮುಂದುವರಿಸುವ ಬಗ್ಗೆ ಸುಳಿವು ಕೊಟ್ರು
  • ಮೆಟಾ ಅಭಿವೃದ್ದಿಗೆ ಸರಿಯಾಗಿ ಕೆಲಸ ಮಾಡದವರ ವಜಾ ಮಾಡಲು ನಿರ್ಧಾರ

ಫೇಸ್​ಬುಕ್​ ಸಿಇಒ ಮಾರ್ಕ್​ ಜುಕರ್​ ಬರ್ಗ್. ಇವರು ಇತ್ತೀಚೆಗಷ್ಟೇ ಮುಖ್ಯ ಹುದ್ದೆಯಿಂದ ಕೆಳಗಿಳಿಯಲಿದ್ದಾರಾ? ಎಂಬ ವಿಚಾರಕ್ಕೆ ಸುದ್ದಿಯಾಗಿದ್ದರು. ಈ ಮುನ್ನವೇ ಮತ್ತೆ ಮೆಟಾದಲ್ಲಿ ವಜಾ ಪರ್ವ ಮುಂದುವರಿಸೋ ಬಗ್ಗೆ ಮಾರ್ಕ್​ ಜುಕರ್​ ಬರ್ಗ್ ಬಿಗ್​ ಅಪ್ಡೇಟ್​ ನೀಡಿದ್ದಾರೆ.

Advertisment

ಈ ಸಂಬಂಧ ಮಾತಾಡಿರೋ ಫೇಸ್​ಬುಕ್​ ಸಿಇಒ ಮಾರ್ಕ್​ ಜುಕರ್​ ಬರ್ಗ್ ಅವರು, ಮೆಟಾದಲ್ಲಿ ಸಾಕಷ್ಟು ಬದಲಾವಣೆಗಳು ತರಲು ಮುಂದಾಗಿದ್ದೇವೆ. ನಾವು ಸರಿಯಾಗಿ ಕೆಲಸ ಮಾಡದಿದ್ರೆ ಮೆಟಾ ಸಮಸ್ಯೆಗಳನ್ನು ಸರಿಪಡಿಸಲು ಸಾಧ್ಯವಿಲ್ಲ. ಬಳಕೆದಾರರ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಹಾಗಾಗಿ ಮೆಟಾ ಅಭಿವೃದ್ದಿಗೆ ಯಾರು ಸರಿಯಾಗಿ ಕೆಲಸ ಮಾಡಲ್ಲವೋ ಅವರನ್ನು ವಜಾ ಮಾಡುತ್ತೇವೆ ಎಂದಿದ್ದಾರೆ.

3600 ಮಂದಿ ಉದ್ಯೋಗಿಗ ವಜಾ ಮಾಡಲು ನಿರ್ಧಾರ

ಸದ್ಯ ಮೆಟಾದಲ್ಲಿ ಸುಮಾರು 72 ಸಾವಿರ ಮಂದಿ ಉದ್ಯೋಗಿಗಳಿದ್ದಾರೆ. ಈ ಪೈಕಿ ಪರ್ಫಾಮೆನ್ಸ್​ ಇಲ್ಲದ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಿದ್ದೇವೆ. ಶೇ. 5ರಷ್ಟು ಎಂದರೆ 3600 ಮಂದಿಗೆ ಸಂಸ್ಥೆಯಿಂದ ವಜಾ ಮಾಡಲಾಗುವುದು ಎಂದರು ಮಾರ್ಕ್​ ಜುಕರ್​ ಬರ್ಗ್.

ಮೆಟಾ ಪ್ಲಾಟ್‌ಫಾರ್ಮ್ಸ್ ತನ್ನ ಕೆಲಸಗಾರರನ್ನು ಕೆಲಸದಿಂದ ವಜಾಗೊಳಿಸಲು ಮುಂದಾಗಿದೆ. ವ್ಯಾಪಾರ ಮತ್ತು ಕಾರ್ಯಾಚರಣೆಯ ಘಟಕಗಳಾದ್ಯಂತ ಉದ್ಯೋಗಗಳನ್ನು ಕಡಿತಗೊಳಿಸಲಿದೆ. ಈ ಹಿಂದೆ ಕೂಡ 10 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಈಗ ಮತ್ತೆ ಮೆಟಾದಲ್ಲಿ ಉದ್ಯೋಗಿಗಳನ್ನು ಕಂಪನಿಯಿಂದ ವಜಾಗೊಳಿಸುತ್ತಿರುವುದನ್ನು ಕಂಡು ಉನ್ನತ ಹುದ್ದೆಯಲ್ಲಿ ಇರೋರೆ ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದಾರೆ.

Advertisment

ಇದನ್ನೂ ಓದಿ:2ನೇ ದಿನ ದಾಖಲೆ ಬರೆದ ಮಹಾ ಕುಂಭಮೇಳ: 3.5 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment