/newsfirstlive-kannada/media/post_attachments/wp-content/uploads/2024/12/META.jpg)
ತಂತ್ರಜ್ಞಾನ ಲೋಕದಲ್ಲಿ ಸಂಚಲನ ಸೃಷ್ಟಿಸಲು ಫೇಸ್ಬುಕ್ನ ಮಾತೃ ಸಂಸ್ಥೆ ಮೆಟಾ ಸಿದ್ಧವಾಗಿದೆ. ರೇ-ಬ್ಯಾನ್ ಸ್ಮಾರ್ಟ್ ಗ್ಲಾಸ್‌ಗಳ (Ray-ban smart glasses) ನವೀಕರಿಸಿದ ಆವೃತ್ತಿ ಪರಿಚಯಿಸಲು ಹೊರಟಿದೆ.
ಈ ಹೊಸ ಕನ್ನಡಕವು ಆನ್-ಲೆನ್ಸ್ ಡಿಸ್ಪ್ಲೇ ಹೊಂದಿರುತ್ತದೆ. ಇದು ಬಳಕೆದಾರರ ಸಂದೇಶಗಳು, ನಿರ್ದೇಶನಗಳು ಮತ್ತು ಡಿಜಿಟಲ್ ಓವರ್‌ಲೇಗಳನ್ನು (Digital overlay) ಅವರ ಕಣ್ಣುಗಳ ಮುಂದೆ ತೋರಿಸುತ್ತದೆ. ಅಂದರೆ ಈ ಸ್ಮಾರ್ಟ್ ಡಿವೈಸ್ ಸ್ಮಾರ್ಟ್ ಫೋನ್ ನಂತೆ ಕೆಲಸ ಮಾಡಲಿದೆ. ಸಂದೇಶಗಳ ಅಲರ್ಟ್, ವಿಡಿಯೋ ಕರೆಗಳು, ಫೋಟೋಗಳನ್ನು ತೆಗೆದುಕೊಳ್ಳುತ್ತದೆ.
ಇದನ್ನೂ ಓದಿ: ಸಂಚಲನ ಸೃಷ್ಟಿಸಿದ ಶಮಿ-ಸಾನಿಯಾ AI ಫೋಟೋ; ನಕಲಿ ಚಿತ್ರ ಪತ್ತೆ ಮಾಡೋದು ಹೇಗೆ..?
ಈ ಕನ್ನಡಕ ಹಾಕಿಕೊಂಡ ಮೇಲೆ ನೀವು ನಿಮ್ಮ ಮೊಬೈಲ್ ಫೋನ್ ತೆಗೆಯುವ ಅಗತ್ಯ ಇರುವುದಿಲ್ಲ. ಆ ಮೋಲಕ ಮೆಟಾದ Apple ಮತ್ತು Google ನಂತಹ ದೈತ್ಯ ಕಂಪನಿಯೊಂದಿಗೆ ನೇರ ಸ್ಪರ್ಧೆಗೆ ಇಳಿಯಲು ಮುಂದಾಗಿದೆ. ರೇ-ಬ್ಯಾನ್ ಸಹಯೋಗದೊಂದಿಗೆ ಮೆಟಾ ಈಗಾಗಲೇ ಸ್ಮಾರ್ಟ್ ಗ್ಲಾಸ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೀಗ ಅಪ್ಡೇಟ್ ವರ್ಸನ್ ಪರಿಚಯಿಸಲು ಮುಂದಾಗಿದೆ.
ಮೆಟಾದ ಸ್ಮಾರ್ಟ್ ಗ್ಲಾಸ್‌ಗಳು ಇಲ್ಲಿಯವರೆಗೆ ಯಶಸ್ವಿ ಕಂಡಿವೆ. ಇವು ಸಾಮಾನ್ಯವಾಗಿ ಸನ್ಗ್ಲಾಸ್ಗಳಂತೆ ಕಾಣುತ್ತವೆ. ಬಳಕೆದಾರರಿಗೆ ಸುಲಭ ಮತ್ತು ಅನುಕೂಲಕರ ಫೀಚರ್ ನೀಡುತ್ತದೆ. ಈ ಗ್ಲಾಸ್‌ಗಳ AI ಫೀಚರ್ಸ್, ಸ್ಪೀಕರ್‌ಗಳೊಂದಿಗೆ ಸಂಪರ್ಕ ಸಾಧಿಸುತ್ತದೆ.
ಇದನ್ನೂ ಓದಿ:ಭಾಷೆ ಇನ್ಮುಂದೆ ಅಡ್ಡಿ ಆಗಲ್ಲ; WhatsAppನಿಂದ ಬಳಕೆದಾರರಿಗೆ ಗುಡ್ನ್ಯೂಸ್..!
ವರದಿಗಳ ಪ್ರಕಾರ.. ಈ ಸ್ಮಾರ್ಟ್ ಗ್ಲಾಸ್ 2025 ರಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ. ನಯವಾದ ವಿನ್ಯಾಸ, ಉತ್ತಮ ಬ್ಯಾಟರಿ ಸಪೋರ್ಟ್, ಕ್ವಾಲಿಟಿ ಕ್ಯಾಮೆರಾ ಹೊಂದಿದೆ. ಥರ್ಡ್-ಪಾರ್ಟಿ ಡೆವಲಪರ್‌ಗಳನ್ನು ಸೇರಿಸಲು ಮೆಟಾ ಪ್ಲಾನ್ ಮಾಡಿದೆ. ಈ ಗ್ಲಾಸ್‌ಗಳಿಗೆ ಕಸ್ಟಮ್ ಅಪ್ಲಿಕೇಶನ್‌ಗಳ ಸೌಲಭ್ಯವೂ ಲಭ್ಯವಿರುತ್ತದೆ.
ಆ ಮೂಲಕ ಮೆಟಾ ಹೊಸ ಹೆಜ್ಜೆಯನ್ನಿಟ್ಟಿದೆ. ಇದರಿಂದ ನಾವು ಜಗತ್ತನ್ನು ನೋಡುವ ವಿಧಾನ ಬದಲಾಗಬಹುದು. ತಂತ್ರಜ್ಞಾನದ ಓಟದಲ್ಲಿ ಮೆಟಾದ ಈ ದಿಟ್ಟ ನಡೆ ಎಷ್ಟು ದೂರ ಹೋಗಲಿದೆ ಅನ್ನೋದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಗ್ರಾಹಕರಿಗೆ ಗುಡ್ನ್ಯೂಸ್ ಕೊಟ್ಟ Jio.. ಬಂದಿದೆ ಹೊಚ್ಚ ಹೊಸ 3 ತಿಂಗಳ ಪ್ಲಾನ್, ಟ್ರೈ ಮಾಡಿ!