newsfirstkannada.com

ಮಾಯವಾದ ಮಳೆರಾಯ.. ಬೆಂಗಳೂರಿಗರಿಗೆ ಮತ್ತೆ ಶಾಕಿಂಗ್ ನ್ಯೂಸ್‌; ಹವಮಾನ ಇಲಾಖೆ ಎಚ್ಚರಿಕೆ!

Share :

Published April 22, 2024 at 5:48pm

    ಬೆಂಗಳೂರಲ್ಲಿ 23, 26 ಡಿಗ್ರಿಗೆ ಕುಸಿದಿದ್ದ ತಾಪಮಾನ ದಿಢೀರ್ ಏರಿಕೆ

    ಮೊದಲ ಮಳೆ ನೋಡಿ ಖುಷಿಯಲ್ಲಿದ್ದ ಬೆಂಗಳೂರಿಗರಿಗೆ ಈಗ ನಿರಾಸೆ

    ರಾಜ್ಯದ ಕೆಲವೆಡೆ ಇಂದೂ ಕೂಡ ಸಾಧಾರಣ ಮಳೆಯ ಮುನ್ಸೂಚನೆ

ಬೆಂಗಳೂರು: ಸಿಕ್ಕಾಪಟ್ಟೆ ಸೆಖೆ, ಬೇಸಿಗೆ ಬಿಸಿ, ಮತ್ತೆ ಹೆಚ್ಚಾಗುತ್ತಿರುವ ತಾಪಮಾನ ತಾಳಲಾರದೇ ಸಿಲಿಕಾನ್ ಸಿಟಿ ಜನ ಒದ್ದಾಡುತ್ತಿದ್ದಾರೆ. ಒಂದೆರಡು ದಿನ ಅಲ್ಲಲ್ಲಿ ಬೇಸಿಗೆ ಮಳೆ ಪ್ರತ್ಯಕ್ಷವಾದರೂ ಕಂಡೂ ಕಾಣದಂತೆ ಮಾಯವಾಗಿದೆ. 5 ತಿಂಗಳ ಬಳಿಕ ಸುರಿದ ಮೊದಲ ಮಳೆ ನೋಡಿಯೇ ಬೆಂಗಳೂರಿನ ಜನ ಸಖತ್ ಖುಷಿ ಆಗಿದ್ದರು. ಆದರೆ ಇದೀಗ ಮತ್ತೆ ಮಳೆರಾಯ ಮಾಯವಾಗಿದ್ದಾನೆ.

ಬೆಂಗಳೂರಲ್ಲಿ ಮತ್ತೆ ಬೇಸಿಗೆ ಬಿಸಿ ಜೋರಾಗಿದೆ. ಕಳೆದ ವಾರ 23, 26 ಡಿಗ್ರಿಗೆ ಕುಸಿದಿದ್ದ ತಾಪಮಾನ ಇದೀಗ ಮತ್ತೆ ಏರಿಕೆಯಾಗುತ್ತಿದೆ. ಬೆಂಗಳೂರಿನ ತಾಪಮಾನ ಭಾನುವಾರ 32 ಡಿಗ್ರಿ ಮತ್ತು ಸೋಮವಾರ 36 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಇದು ಮಳೆ ಬರುವ ನಿರೀಕ್ಷೆಯಲ್ಲಿದ್ದ ನಿವಾಸಿಗಳಿಗೆ ಅತಿ ದೊಡ್ಡ ಶಾಕಿಂಗ್ ನ್ಯೂಸ್ ಆಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಇವತ್ತು ಮತ್ತೆ ಮಳೆಯಾಗುತ್ತಾ? ರಾಜ್ಯದಲ್ಲಿ ಗುಡುಗು, ಮಿಂಚಿನ ಆರ್ಭಟ

5 ದಿನ ಬಿಸಿಗಾಳಿಯ ಎಚ್ಚರಿಕೆ!
ಭಾರತೀಯ ಹವಮಾನ ಇಲಾಖೆಯ ವರದಿ ಪ್ರಕಾರ ಮುಂದಿನ 5 ದಿನಗಳ ಕಾಲ ರಾಜ್ಯದಲ್ಲಿ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆ ಇದೆ. ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಗದಗ, ಧಾರವಾಡ, ದಾವಣಗೆರೆ, ಕೋಲಾರ, ತುಮಕೂರು, ಮತ್ತು ಚಿತ್ರದುರ್ಗದಲ್ಲಿ ಏಪ್ರಿಲ್ 26ರವರೆಗೂ ಬಿಸಿಗಾಳಿ ಹೆಚ್ಚಾಗುವ ಎಚ್ಚರಿಕೆ ನೀಡಲಾಗಿದೆ.

ಬಿಸಿಗಾಳಿಯ ಶಾಕಿಂಗ್ ಸುದ್ದಿಯ ಮಧ್ಯೆ ಮತ್ತೊಂದು ತಂಪಾದ ಮಾಹಿತಿ ಏನಂದ್ರೆ ರಾಜ್ಯದ ಕೆಲವೆಡೆ ಇಂದು ಸಾಧಾರಣ ಮಳೆಯಾಗಿದೆ. ಕೊಡಗು ಸೇರಿದಂತೆ ರಾಜ್ಯದ ಒಂದು ಅಥವಾ ಎರಡು ಕಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಯವಾದ ಮಳೆರಾಯ.. ಬೆಂಗಳೂರಿಗರಿಗೆ ಮತ್ತೆ ಶಾಕಿಂಗ್ ನ್ಯೂಸ್‌; ಹವಮಾನ ಇಲಾಖೆ ಎಚ್ಚರಿಕೆ!

https://newsfirstlive.com/wp-content/uploads/2023/06/Bangalore-Rain.jpg

Load More