ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಪ್ರಸಂಗ.. ಮೀಟರ್​ ಬಡ್ಡಿ ಹಾವಳಿಗೆ ಊರು ಬಿಟ್ಟ ಕುಟುಂಬ..!

author-image
Veena Gangani
Updated On
ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಪ್ರಸಂಗ.. ಮೀಟರ್​ ಬಡ್ಡಿ ಹಾವಳಿಗೆ ಊರು ಬಿಟ್ಟ ಕುಟುಂಬ..!
Advertisment
  • ಮೈಕ್ರೋ ಫೈನಾನ್ಸ್ ಹಾವಳಿ ಜೊತೆ ಮೀಟರ್ ಬಡ್ಡಿ ದಂಧೆ
  • ರಾಜ್ಯದಲ್ಲಿ ಬೆಚ್ಚಿ ಬೀಳಿಸಿದ ಮೈಕ್ರೋಫೈನಾನ್ಸ್ ಸಂಸ್ಥೆಗಳ ಹಾವಳಿ
  • ಸಾಲಗಾರರ ಕಿರಕುಳಕ್ಕೆ ಬೇಸತ್ತು ಊರನ್ನೇ ಬಿಟ್ಟ ಕುಟುಂಬ

ಗದಗ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್​​ ಕಿರುಕುಳಕ್ಕೆ ಪ್ರಾಣ ಕಳೆದುಕೊಳ್ಳುತ್ತಿರೋರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.  ಆದ್ರೆ, ಇದೇ ಹೊತ್ತಲ್ಲಿ ಮತ್ತೊಂದು ಜಿಲ್ಲೆಯಲ್ಲಿ ಮೀಟರ್ ಬಡ್ಡಿ ಧಂದೆಗೆ ಇಡೀ ಕುಟುಂಬವೇ ಊರು ಬಿಟ್ಟು ಓಡಿ ಹೋದ ಘಟನೆ ಬೆಳಕಿಗೆ ಬಂದಿದೆ. ಹೌದು, ಗದಗ ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆ ಮಿತಿಮೀರಿದೆ. ಬಡ್ಡಿ ದಂಧೆಕೋರರು ಆತ್ಮಹತ್ಯೆ ಮಾಡಿಕೊಳ್ಳುಷ್ಟು‌ ಕಿರುಕುಳ ನೀಡುತ್ತಿದ್ದಾರಂತೆ.

ಇದನ್ನೂ ಓದಿ:ಮೈಕ್ರೋ ಫೈನಾನ್ಸ್​​ ಕಿರುಕುಳಕ್ಕೆ ಹೋಯ್ತು ನಾಲ್ವರ ಪ್ರಾಣ.. ಇದಕ್ಕೆ ಕೊನೆ ಯಾವಾಗ..?

publive-image

ಪರಶುರಾಮ ಹಬೀಬ್ ಎಂಬುವವರ ಬಳಿ ಬಡ್ಡಿದಾರರ 50 ಸಾವಿರ ರೂಪಾಯಿ ಸಾಲಕ್ಕೆ 1 ಲಕ್ಷ 50 ರೂಪಾಯಿ ಬಾಂಡ್ ಮಾಡಿಸಿಕೊಂಡಿದ್ದಾರಂತೆ. ಹೀಗಾಗಿ ಒಂದು ಸಾಲ ತೀರಿಸೋಕೆ ಹೋಗಿ ಮತ್ತೊಂದು ಕಡೆ ಚಕ್ರ ಬಡ್ಡಿಗೆ ಸಾಲ ಮಾಡಿಕೊಂಡು ಇಡೀ ಕುಟುಂಬದ ಜೊತೆಗೆ ಇಡೀ ಊರನ್ನೇ ಬಿಟ್ಟು ಹೋಗಿದ್ದಾರೆ. ಅಲ್ಲದೇ ಬಡ್ಡಿದಾರರ ಕಿರುಕುಳಕ್ಕೆ ತತ್ತರಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರಂತೆ. ಆದರೆ ಮಕ್ಕಳ ಮುಖ ನೋಡಿ, ಆತ್ಮಹತ್ಯೆ ಮಾಡಿಕೊಳ್ಳೋದನ್ನು ಬಿಟ್ಟಿದೇನೆ ಎಂದು ನಿಗೂಢ ಸ್ಥಳದಿಂದ ವಿಡಿಯೋ ಮಾಡಿ ಕಣ್ಣೀರು ಹಾಕಿದ್ದಾರೆ.

publive-image

ಪರಶುರಾಮ ಹಬೀಬ್ ಹಲವಾರು ಕಡೆ ಸುಮಾರು 60 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದಾರಂತೆ. ಬಡ್ಡಿ ದಂಧೆಕೋರರು ಕಿರುಕುಳಕ್ಕೆ ಬೆಸತ್ತು ಕ್ಯಾಂಟೀನ್​ಗೆ ಬೀಗ ಹಾಕಿ ಜೀವ ಭಯದಿಂದ ಕುಟುಂಬ ಸಮೇತ ಊರು ಬಿಟ್ಟ ಹೋಗಿದ್ದಾರೆ. ಇನ್ನೂ ಈ ಬಗ್ಗೆ ನ್ಯೂಸ್​​ಫಸ್ಟ್​ನೊಂದಿಗೆ ಪರಶುರಾಮ ಸಹೋದರ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment