/newsfirstlive-kannada/media/post_attachments/wp-content/uploads/2025/01/Delhi-Metro-News.jpg)
ದೆಹಲಿ: ಮೆಟ್ರೋದಲ್ಲಿ ಕೆಲಸ ಮಾಡಬೇಕು ಎಂದು ಎದುರು ನೋಡುತ್ತಿರೋರಿಗೆ ಭರ್ಜರಿ ಆಫರ್ ಒಂದಿದೆ. ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ ಖಾಲಿ ಇರೋ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಿದೆ. ಅರ್ಜಿ ಸಲ್ಲಿಕೆಗೆ ಜನವರಿ 28 ಕೊನೆಯ ದಿನಾಂಕ ಆಗಿದೆ. ಹಾಗಾಗಿ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬಹುದು.
ಯಾವ್ಯಾವ ಹುದ್ದೆಗಳು?
ಸಿಸ್ಟಮ್ ಸೂಪರ್‌ವೈಸರ್, ಸಿಸ್ಟಮ್ ಟೆಕ್ನಿಷಿಯನ್
ಹುದ್ದೆಗಳು ಎಷ್ಟು?
ಒಟ್ಟು 13 ಹುದ್ದೆಗಳಿಗೆ ನೇಮಕಾತಿ
ಗರಿಷ್ಠ ವಯಸ್ಸು ಎಷ್ಟು?
40 ವರ್ಷಗಳು
ಅರ್ಜಿ ಸಲ್ಲಿಕೆ ಹೇಗೆ?
ಅಂಚೆ ಅಥವಾ ಇ-ಮೇಲ್ ಮಾಡಬಹುದು
ಸ್ಯಾಲರಿ ಎಷ್ಟು?
ತಿಂಗಳಿಗೆ 46,000 ರೂ.ನಿಂದ 65,000 ರೂ. ವೇತನ
ವಿದ್ಯಾರ್ಹತೆ ಏನು?
ಐಟಿಐ, ಡಿಪ್ಲೊಮಾ, ಬಿಇ/ಬಿ.ಟೆಕ್ ಆಗಿರಬೇಕು
ನೇಮಕಾತಿ ಪ್ರಕ್ರಿಯೆ ಹೇಗೆ?
ಅರ್ಜಿ ಸಲ್ಲಿಸಿದವರಿಗೆ ನೇರ ಸಂದರ್ಶನ ಇರಲಿದೆ. ಸಂದರ್ಶನದಲ್ಲಿ ಆಯ್ಕೆ ಆದವರಿಗೆ ಉದ್ಯೋಗಕ್ಕೆ ಹಾಜರಾಗಬಹುದು. ಇದಕ್ಕೂ ಮುನ್ನ ಅಭ್ಯರ್ಥಿಗಳಿಗೆ ವೈದ್ಯಕೀಯ ಫಿಟ್ನೆಸ್ ಪರೀಕ್ಷೆ ನಡೆಸಲಾಗುವುದು. ಆಸಕ್ತರು ಕೂಡಲೇ ಅರ್ಜಿಯನ್ನು ದೆಹಲಿ ಮೆಟ್ರೋ ವಿಳಾಸಕ್ಕೆ ಕಳಿಸಬಹುದು ಅಥವಾ ಇಮೇಲ್ ಮಾಡಬಹುದು.
ಇದನ್ನೂ ಓದಿ:AAI Recruitment; ಅರ್ಜಿ ಆಹ್ವಾನ.. ಇವರಿಗೆ ಮಾತ್ರ ಅವಕಾಶ, ಸಂಬಳ ಎಷ್ಟಿದೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ