/newsfirstlive-kannada/media/post_attachments/wp-content/uploads/2024/11/M-F-HUSSAIN.jpg)
ಎಂ.ಎಫ್.ಹುಸೇನ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ. ಈ ಜಗತ್ತು ಕಂಡ ಸರ್ವಶ್ರೇಷ್ಠ ಚಿತ್ರಕಾರ, ಕಲೆಗಾರ ಅಷ್ಟೇ ರಸಿಕ ಕೂಡ ಹೌದು. ಭಾರತೀಯ ಚಿತ್ರಕಲಾ ಜಗತ್ತಿನಲ್ಲಿ ಎಂದು ಮರೆಯದ ಹೆಸರು ಅಂದ್ರೆ ಅದು ಎಂ ಎಫ್ ಹುಸೇನ್. ಸದ್ಯ ಭಾರತದ ಫ್ಯಾಶನ್ ಜಗತ್ತಿನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ್ದು ಶಾಲಿನಿ ಪಸ್ಸಿ. ದೆಹಲಿ ಮೂಲದ ಈ ಕಲಾವಿದೆ. ಚಿತ್ರಕಲೆಗಳ ಸಂಗ್ರಹಗಾರ್ತಿ, ಹಾಗೆಯೇ ಓಟಿಟಿ ಸ್ಟಾರ್ ಆಗಿ ಮಿಂಚುತ್ತಿರುವ ಹೀಗೆ ಹಲವು ವಿಧದಲ್ಲಿ ಗುರುತಿಸಿಕೊಳ್ಳುವ ಶಾಲಿನಿ ಪಸ್ಸಿ ಬದುಕಲ್ಲಿ ಎಂ ಎಫ್ ಹುಸೇನ್ ಎಂಬ ಮಹಾ ಕಲೆಗಾರ ಬಂದು ಹೋಗಿದ್ದರು. ಅದು ಕೂಡ ಅವರ ಮದುವೆಯ ನಿಮಿತ್ಯವಾಗಿ.
ಇದನ್ನೂ ಓದಿ:ಬಿಲಿಯನೇರ್ ಲೇಡಿ ಶಾಲಿನಿ ಪಸ್ಸಿ ಲೈಫ್ ಹೇಗಿದೆ ಗೊತ್ತಾ? ಒಂದು ಸಾರಿ ಧರಿಸಿದ ಬಟ್ಟೆ ತಿರುಗಿ ಕೂಡ ನೋಡಿಲ್ಲ ಈಕೆ!
ಶಾಲಿನಿ ಪಸ್ಸಿ ಹಾಗೂ ಸಂಜಯ್ ಪಸ್ಸಿ ಅವರ ಆಮಂತ್ರಣ ಪತ್ರಿಕೆಯನ್ನು ಡಿಸೈನ್ ಮಾಡಿದ್ದೇ ಮಹಾನ್ ಚಿತ್ರಕಲಾ ಪ್ರತಿಭೆ ಎಂ. ಎಫ್.ಹುಸೇನ್. ಇತ್ತೀಚೆಗೆ ನಡೆದ ಒಂದು ಸಂದರ್ಶನದಲ್ಲಿ ಶಾಲಿನಿ ಪಸ್ಸಿ ಈ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ. ಎಂ ಎಫ್ ಹುಸೇನ್ ಸಂಜಯ್ ಪಸ್ಸಿ ಅವರ ಕುಟುಂಬಕ್ಕೆ ತುಂಬಾ ಆಪ್ತರು. ಹೀಗಾಗಿಯೇ ನಮ್ಮ ಮದುವೆ ಪತ್ರಿಕೆಯನ್ನು ವಿನ್ಯಾಸ ಮಾಡುವಂತೆ ನನ್ನ ಪತಿಯ ಕುಟುಂಬ ಅವರನ್ನು ಕೇಳಿಕೊಂಡಿತ್ತು. ಅದಕ್ಕೆ ಒಪ್ಪಿಕೊಂಡ ಹುಸೇನ್ ಸಾಬ್, ಒಂದು ಕಂಡಿಷನ್ ಇಟ್ಟಿದ್ದರು ಎಂದು ಶಾಲಿನಿ ಹೇಳೀದ್ದಾರೆ.
ನಾನು ಮೊದಲು ಹುಡುಗಿಯನ್ನು ನೋಡಬೇಕು ಎಂದಿದ್ದ ಹುಸೇನ್ ಸಾಬ್
ಮದುವೆ ಆಮಂತ್ರಣ ಪತ್ರಿಕೆ ಮಾಡಲು ಒಪ್ಪಿಕೊಂಡಿದ್ದ ಎಂ ಎಫ್ ಹುಸೇನ್ ಒಂದೇ ಒಂದು ಕಂಡಿಷನ್ ಹಾಕಿದ್ರು ಅದು ನಾನು ಮದುವೆಯ ಕರೆಯೋಲೆಯನ್ನು ಪೇಂಟ್ ಮಾಡುವ ಮೊದಲು ಹುಡುಗಿಯನ್ನು ನೋಡಬೇಕು ಎಂದು ಷರತ್ತು ಹಾಕಿದ್ದರಂತೆ. ಅವರ ಷರತ್ತಿನಂತೆ ಶಾಲಿನಿಯನ್ನು ಎಂ ಎಫ್ ಹುಸೇನ್ಗೆ ತೋರಿಸಿದಾಗ ಅವರು ಹೇಳಿದ್ದು ಒಂದೇ ಮಾತು ಇದು ರಾಧಾ ಕೃಷ್ಣ ಜೋಡಿ ಎಂದು ಅಂತ ಶಾಲಿನಿ ಹೇಳಿದ್ದಾರೆ. ಶಾಲಿನಿ ಮದುವೆಯಾದಗ ಅವರ ವಯಸ್ಸು 20 ಇತ್ತಂತೆ. ಒಟ್ಟು ಎಂ ಎಫ್ ಹುಸೇನ್ ಅವರು 3 ಮದುವೆ ಆಮಂತ್ರಣ ಪತ್ರಿಕೆಗಳನ್ನು ಡಿಸೈನ್ ಮಾಡಿದ್ದರಂತೆ. ಒಂದು ಮಾತಾ ಕಿ ಚೌಕಿಗಾಗಿ, ಮತ್ತೊಂದು ಸಂಗೀತಗಾಗಿ ಇನ್ನೊಂದು ಜನರಿಗೆ ಆಮಂತ್ರಣ ನೀಡಲು ವಿನ್ಯಾಸ ಮಾಡಲಾಗಿತ್ತು ಎಂದು ಶಾಲಿನಿ ಹಳೆಯ ನೆನಪುಗಳನ್ನು ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ:ದಂತ, ಕೇಶ, ಚರ್ಮಕಾಂತಿಗಾಗಿ ಶಾಲಿನಿ ಪಸ್ಸಿ ಮಾಡುವುದೇನು? 49ರ ಹರೆಯದ ಟಿವಿ ಸ್ಟಾರ್ ಡಯಟ್ ಹೇಗಿದೆ?
ಸದ್ಯ 49 ವರ್ಷದ ಶಾಲಿನಿ ಇಂದಿಗೂ ಕೂಡ ತಮ್ಮ ಹಳೆಯ ಚಾರ್ಮ್ನಲ್ಲಿಯೇ ಇದ್ದಾರೆ. ಫ್ಯಾಬಲಸ್ ಲೈವ್ಸ್ ಅಂಡ್ ಬಾಲಿವುಡ್ ವೈವ್ಸ್ ಶೋ ಮೂಲಕ ಬೆಳಕಿಗೆ ಬಂದ ಶಾಲಿನಿ ಪಿಸ್ಸಿ ಈಗ ಫ್ಯಾಷನ್ ಹಾಗೂ ಲೈಫ್ಸ್ಟೈಲ್ ಜಗತ್ತಿನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ್ದಾರೆ. ಈ ಇಳಿ ವಯಸ್ಸಿನಲ್ಲಿಯೂ ಕೂಡ ಅವರು ಇಷ್ಟು ಗ್ಲಾಮರಸ್ ಆಗಿ ಇರುವುದನ್ನು ಕಂಡು ಅವರ ಆರೋಗ್ಯದ ಗುಟ್ಟೇನು ಎಂದು ಕೇಳಿದಾಗ ಅವರು ಹೇಳಿದ್ದು ತುಪ್ಪ ಹಾಗೂ ಮೇಕೆಯ ಮೊಸರು ಎಂದು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ