/newsfirstlive-kannada/media/post_attachments/wp-content/uploads/2025/07/MG_MOTORS_NEW.jpg)
ಈ ರೋಡ್‌ಸ್ಟರ್ ಮಾದರಿ ಕಾರು ಇದೆ ಅಲ್ಲಾ, ಇದನ್ನು ನಾವು ಎಲ್ಲೇ ನೋಡಿದ್ರೂ ಒಂದು ಕ್ಷಣ ಅದನ್ನು ನಾವು ನೀಟಾಗ ಗಮನಿಸ್ತೀವಿ. ಯಾಕಂದ್ರೆ ಈ ಕಾರ್ನ ಲುಕ್ ಆ ರೀತಿ ಇರುತ್ತೆ. ಅದು ಯಾವುದೇ ಕಂಪನಿ ಕಾರ್ ಆಗಿರಬಹುದು. ಆ ರೇಂಜಿಗೆ ಅದರ ಲುಕ್ ಹಾಗೂ ಫೀಲ್ ಇರುತ್ತೆ. ಯಾಕಂದ್ರೆ ಇದರ ಕ್ಲ್ಯಾಸಿ ಡಿಸೈನ್, ಇದರಲ್ಲಿರೋ ಟೆಕ್ನಾಲಜಿ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಇದರ ರಿಚ್ನೆಸ್ ಕಾಣಿಸುತ್ತೆ.
ಮೊದಲನೇಯದ್ದಾಗಿ ಈ ರೋಡ್‌ಸ್ಟರ್ ಮಾದರಿಯ ಕಾರುಗಳು ಅಂದ್ರೆ ಓಪನ್ ಎರಡು ಸೀಟರ್ ಹೊಂದಿರುವ ಹಾಗೂ ಸ್ಪೋರ್ಟ್ಸ್ ಕಾರ್ ರೀತಿ ಇರುತ್ತೆ. ಸಖತ್ ಕ್ಲ್ಯಾಸಿ ಲುಕ್ಸ್ ಹೊಂದಿರುವ ಐಷಾರಾಮಿ ಕಾರ್ ಇದಾಗಿದೆ. ಸೋ ಇಂತಹ ಕಾರ್ಗಳನ್ನು ಯಾರೇ ನೋಡಿದ್ರೂ ಕೂಡ ಫಿದಾ ಆಗದೇ ಇರೋದಿಲ್ಲ.
ಇನ್ನು ಈ ವಿಷ್ಯವನ್ನು ಯಾಕೆ ಈಗ ಪ್ರಸ್ತಾಪ ಮಾಡ್ತಾ ಇದ್ದೀವಿ ಅಂದ್ರೆ ನಮ್ಮ ದೇಶದ EV ಸೆಗ್ಮೆಂಟ್ನಲ್ಲಿ ಬಹಳ ಚೆನ್ನಾಗಿ ಪರ್ಫಾಮ್ ಮಾಡ್ತಾ ಇರೋ MG MOTORS ಇದೀಗ ಮತ್ತೊಂದು ಹೊಸ ಕಾರನ್ನು ಮಾರುಕಟ್ಟೆಗೆ ತರೋಕೆ ಹೊರಟಿದೆ. ಮಜಾ ಏನ್ ಗೊತ್ತಾ? ಇದು ಒಂದು ರೋಡ್‌ಸ್ಟರ್ ಮಾದರಿಯ ಕಾರ್ ಆಗಿದ್ದು, ಇದು ಕೂಡ EV ಮಾಡೆಲ್ ಕಾರ್ ಆಗಿದೆ. ಇದರ ಹೆಸರು ಹಾಗೂ ಬೆಲೆ ಈಗ ರಿವೀಲ್ ಆಗಿದ್ದು, ನಿಮಗೆ ಹೆಸರನ್ನು ಈಗ ತಿಳಿಸ್ತೀವಿ, ಆಮೇಲೆ ಇದರ ಬೆಲೆನ ನಿಮ್ಮ ಮುಂದಿಡ್ತೀವಿ.
ಈ ಕಾರ್ನ ಹೆಸರೇ MG CYBERSTER.. ಇದು MG MOTORS ವತಿಯಿಂದ ಬಿಡುಗಡೆಯಾದ ಮೊದಲ EV ರೋಡ್‌ಸ್ಟರ್ ಕಾರ್ ಆಗಿದೆ. ಆಗ್ಲೇ ಹೇಳಿದ ಹಾಗೆ ಈ ರೋಡ್‌ಸ್ಟರ್ ಕಾರ್ನ ಲುಕ್ ಸಖತ್ ಸ್ಟೈಲಿಶ್. ಅದರಲ್ಲೂ MG CYBERSTER, ಒಂದು ಕೈ ಹೆಚ್ಚೇ ಅಂತ ಹೇಳಬಹುದು. ಅಷ್ಟು ಕಣ್ಣುಕುಕ್ಕೋ ಹಾಗೆ ಇದೆ. ಇನ್ನು ಇದರ ಸ್ಪೆಸಿಫಿಕೇಷನ್ಸ್ನ ನೋಡೋ ಹಾಗಿದ್ರೆ.
ರೋಡ್‌ಸ್ಟರ್ ಕಾರಿನ ಹೈಲೈಟ್ scissor doors
ಸೈಬರ್‌ಸ್ಟರ್ ಒಂದು ಕಡಿಮೆ-ಸ್ಲಂಗ್ ರೋಡ್‌ಸ್ಟರ್ ಆಗಿದ್ದು, ಕ್ಲಾಸಿಕ್ ಲಾಂಗ್ ಬಾನೆಟ್, ಶಾರ್ಟ್ ರಿಯರ್ PROPORTION ಮತ್ತು 0.269Cd ನ ಅಲ್ಟ್ರಾ-ಸ್ಲಿಪರಿ ಡ್ರ್ಯಾಗ್ COEFFICIENT ಹೊಂದಿದೆ. ಡಿಸೈನ್ನಲ್ಲಿ ಸ್ವೂಪಿ ಎಲ್‌ಇಡಿ ಹೆಡ್‌ಲೈಟ್‌ಗಳು, ಅವುಗಳ ಮೇಲೆ ಎಲ್‌ಇಡಿ ಸ್ಟ್ರಿಪ್ ಹೊಂದಿರುವ ಬಾಣದ ಆಕಾರದ ಟೈಲ್-ಲ್ಯಾಂಪ್‌ಗಳು, 20-ಇಂಚಿನ ಅಲಾಯ್ ವೀಲ್‌ಗಳು, ಸಿಲ್ವರ್ ರೋಲ್ ಹೂಪ್‌ಗಳು, 'ಸ್ಮೈಲ್'-ಆಕಾರದ ಫ್ಯಾಸಿಯಾ, ಫೋಲ್ಡ್ ಮಾಡಬಲ್ಲ ಸಾಫ್ಟ್-ಟಾಪ್ ಮತ್ತು, ಸಹಜವಾಗಿ, ರೋಡ್‌ಸ್ಟರ್ ಕಾರ್ಗಳನ್ನು ಹೈಲೈಟ್ ಮಾಡುವ scissor doorsನ ಒಳಗೊಂಡಿದೆ.
MG CYBERSTERನಲ್ಲಿ ಎಕ್ಸ್ಟೀರಿಯರ್ ಬಣ್ಣವು, ಡ್ಯೂಯಲ್ ಪೇಂಟ್ಗಳಿಂದ ಮೂಡಿಬಂದಿದೆ. ಅಂದ್ರೆ Andes Grey ಹಾಗೂ Red Roof, Flare Red ಹಾಗೂ Black Roof, Modern Beige ಹಾಗೂ Red Roof, ಮತ್ತು Nuclear Yellow ಹಾಗೂ Black Roof. ಈ ನಾಲ್ಕು ಬಣ್ಣಗಳಲ್ಲಿ ಲಭ್ಯ.
ಇದನ್ನೂ ಓದಿ:ಬ್ಯಾಟಿಂಗ್ನಲ್ಲಿ ಸೈಲೆಂಟ್ ಆದ ಶುಭ್ಮನ್ ಗಿಲ್.. ಮೂರು ಇನ್ನಿಂಗ್ಸ್ನಲ್ಲಿ ಕ್ಯಾಪ್ಟನ್ ರನ್ ಇಷ್ಟೇನಾ?
ಈ ಕಾರಿನ ಬೆಲೆ ಎಷ್ಟು?
ಇನ್ನು ಕಾರ್ನ ಒಳಗೆ, ಸೈಬರ್‌ಸ್ಟರ್, ಡ್ಯಾಶ್ಬೋರ್ಡ್ನ ಮೇಲ್ಭಾಗದಲ್ಲಿ ಮೂರು ಬೆಂಟ್ಸ್ಕ್ರೀನ್ಗಳಿವೆ. 3-ಸ್ಪೋಕ್ ಫ್ಲಾಟ್-ಬಾಟಮ್ಡ್ ಸ್ಟೀರಿಂಗ್ ವೀಲ್‌ನ ಮುಂದೆ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಎರಡು 7-ಇಂಚಿನ ಸ್ಕ್ರೀನ್ನಿಂದ ಸುತ್ತುವರೆದಿದೆ. ಕುತೂಹಲಕಾರಿಯಾಗಿ, ಌಂಗುಲಾರ್ ಸೆಂಟರ್ ಕನ್ಸೋಲ್‌ನಲ್ಲಿ ಡ್ರೈವ್ ಸೆಲೆಕ್ಟರ್‌ನ ಪಕ್ಕದಲ್ಲಿ ಮತ್ತೊಂದು 7-ಇಂಚಿನ ಟಚ್‌ಸ್ಕ್ರೀನ್ ಕೂಡ ಇದೆ.
ಇನ್ನೂ ಮುಖ್ಯವಾದ ಇದರ ಬೆಲೆ, ನಮಗೆಲ್ಲಾ ಗೊತ್ತಿರೋ ಹಾಗೇ ಈ ರೋಡ್‌ಸ್ಟರ್ ಕಾರುಗಳು ಯಾವತ್ತೂ ಕೂಡ ಮಧ್ಯಮ ವರ್ಗದ ಕೈಗೆಟುಕುವುದು ಸ್ವಲ್ಪ ಕಷ್ಟಾನೇ. ಅದ್ರೂ ನೀವೇನಾದ್ರೂ ಈ ರೋಡ್‌ಸ್ಟರ್ ಕಾರ್ಗಳ ಕ್ರೇಝಿ ಫ್ಯಾನ್ ಆಗಿದ್ರೆ, ಖಂಡಿತವಾಗ್ಲೂ ಈ MG CYBERSTERನ ಕೊಂಡುಕೊಳ್ಳಬಹುದು. ರಿಲೀಸ್ ಆಗಿರೋ ಈ ಕಾರ್ನ ಬೆಲೆ 74.99 ಲಕ್ಷ ಅಂದ್ರೆ ಸಿಂಪಲ್ಲಾಗ್ ಹೇಳಬೇಕು ಅಂದ್ರೆ ಮುಕ್ಕಾಲು ಕೋಟಿ. ಪ್ರೈಸ್ ಕೇಳಿ, ಅಯ್ಯೋ ಇಷ್ಟೊಂದಾ ಅಂದ ಹೌಹಾರಬೇಡಿ.. TRUST ME. ಈ ಕಾರ್ ನಿಜವಾಗ್ಲೂ IT'S WORTH IT.
ವಿಶೇಷ ವರದಿ:ರಾಹುಲ್ ದಯಾನ್,ನ್ಯೂಸ್ ಫಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ