/newsfirstlive-kannada/media/post_attachments/wp-content/uploads/2024/08/PANDYA_ROHIT-2.jpg)
ಕಳೆದ ಸೀಸನ್​ ಐಪಿಎಲ್​ಗೂ ಮುನ್ನ ಕೆಟ್ಟ ನಿರ್ಧಾರ ತೆಗೆದುಕೊಂಡು ಯಡವಟ್ಟು ಮಾಡಿಕೊಂಡಿದ್ದ ಮುಂಬೈ ಇಂಡಿಯನ್ಸ್​ಗೆ ಕೆಟ್ಟ ಮೇಲೆ ಬುದ್ಧಿ ಬಂದಂತಿದೆ. ಹಳೆ ಗಂಡನ ಪಾದವೇ ಗತಿ ಅನ್ನೋ ಮಾತಿನಂತೆ ಮಾಜಿ ನಾಯಕ ರೋಹಿತ್​ ಶರ್ಮಾ, ಮನವೊಲಿಕೆಗೆ ಮುಂದಾಗಿದೆ. ಅಂಬಾನಿ ಬ್ರಿಗೆಡ್​ ಮತ್ತೆ ರೋಹಿತ್​ ಬಳಿ ಹೋಗಿ ದುಂಬಾಲು ಬಿದ್ದಿರೋದ್ರ ಹಿಂದೆ ಸಾಕಷ್ಟು ಲೆಕ್ಕಾಚಾರವಿದೆ. ಮುಂಬೈ ರಿಟೈನ್​ ಲೆಕ್ಕಾಚಾರದ ಡಿಟೇಲ್ಸ್​ ಇಲ್ಲಿದೆ!.
ಇಂಡಿಯನ್​ ಪ್ರೀಮಿಯರ್​ ಲೀಗ್​ನ ರಿಟೈನ್​-ರಿಲೀಸ್​ ಪ್ರಕ್ರಿಯೆ ಆರಂಭವಾದ ದಿನದಿಂದಲೂ ಸಖತ್​ ಸುದ್ದಿಯಲ್ಲಿರೋ ಫ್ರಾಂಚೈಸಿ ಅಂದ್ರೆ ಅದು ಮುಂಬೈ ಇಂಡಿಯನ್ಸ್​.! ಮೊನ್ನೆ ನಡೆದ ಸಭೆಯಲ್ಲಿ ಮೆಗಾ ಆಕ್ಷನ್​ನ ರದ್ದು ಮಾಡಬೇಕು ಎಂದು ಫ್ರಾಂಚೈಸಿಗಳು ಇಟ್ಟಿದ್ದ ಬೇಡಿಕೆಯನ್ನ ಬಿಸಿಸಿಐ ಸಾರಾಸಗಟಾಗಿ ತಿರಸ್ಕರಿಸಿದೆ. ಅದ್ರ ಬದಲು 6 ಆಟಗಾರರ ರಿಟೈನ್​​ಗೆ ಅವಕಾಶ ನೀಡಲು ಬಿಸಿಸಿಐ ಮುಂದಾಗಿದೆ. ಇದ್ರ ಬೆನ್ನಲ್ಲೇ ಮುಂಬೈ ಫ್ರಾಂಚೈಸಿ ಮುಂದಿನ ನಡೆ ಏನು ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.
ಹಾರ್ದಿಕ್​ಗೆ ಗೇಟ್​ಪಾಸ್​.., ಸೂರ್ಯನಿಗೆ ತಂಡದ ಸಾರಥ್ಯ.!
ಕಳೆದ ಸೀಸನ್​ಗೂ ಮುನ್ನ ಹಾರ್ದಿಕ್​ ಪಾಂಡ್ಯನ ಕರೆ ತಂದು ಪಟ್ಟಕಟ್ಟಿ ಯಡವಟ್ಟು ಮಾಡಿಕೊಂಡಿದ್ದ ಫ್ರಾಂಚೈಸಿ ಈ ಸೀಸನ್​ಗೂ ಮುನ್ನ ಪಾಂಡ್ಯಗೆ ಗೇಟ್​ಪಾಸ್​ ನೀಡಲು ಮುಂಬೈ ತೀರ್ಮಾನಿಸಿದೆ. ಇದಕ್ಕೆ ಪಾಂಡ್ಯ ನಾಯಕನಾಗಿ ಫ್ಲಾಪ್​ ಆಗಿರೋದು ಮಾತ್ರ ಕಾರಣವಲ್ಲ. ಮಾಜಿ ನಾಯಕ ರೋಹಿತ್​ನ ತಂಡದಲ್ಲೇ ಉಳಿಸಿಕೊಳ್ಳಬೇಕು ಅನ್ನೋದು ಇದ್ರ ಹಿಂದಿರೋ ಉದ್ದೇಶ. ಕಳೆದ ಸಲ ಕೈ ಸುಟ್ಟು ಕೊಂಡಿರೋ ಫ್ರಾಂಚೈಸಿಗೆ ಕೆಟ್ಟ ಮೇಲೆ ಬುದ್ಧಿ ಬಂದಂತಿದೆ. ಇದೀಗ ರೋಹಿತ್​ ಮನವೊಲಿಕೆಗೆ ಶತಪ್ರಯತ್ನ ನಡೆಸ್ತಿದೆ. ಒಬ್ಬ ರೋಹಿತ್​ ಉಳಿದ್ರೆ, ತಂಡಕ್ಕೆ ಹಲವು ಅನುಕೂಲಗಳಿವೆ.
ಡ್ಯಾಮೇಜ್​ ಕಂಟ್ರೋಲ್​ಗೆ ಮುಂದಾದ ಮುಂಬೈ.!
ರೋಹಿತ್​ ಶರ್ಮಾನ ಕೆಳಗಿಳಿಸಿ ಹಾರ್ದಿಕ್​​ಗೆ ನಾಯಕತ್ವ ನೀಡಿದ ಮೇಲೆ ಮುಂಬೈ ಫ್ರಾಂಚೈಸಿಯಲ್ಲಿ ನಡೆದ ಅಲ್ಲೋಲ ಕಲ್ಲೋಲ ನಿಮಗೂ ಗೊತ್ತಿದೆ. ಆ ಒಂದು ನಿರ್ಧಾರದಿಂದ ಒಂದಾಗಿದ್ದ ತಂಡ ಒಡೆದ ಮನೆಯಾಯ್ತು, ಫ್ಯಾನ್ಸ್​ ರೊಚ್ಚಿಗೆದ್ರು. ಇದೀಗ ಹಾರ್ದಿಕ್​ನ ಹೊರಗಾಕಿ, ರೋಹಿತ್​ನ ಉಳಿಸಿಕೊಂಡು ಕಳೆದ ಸೀಸನ್​ನಲ್ಲಾದ ಡ್ಯಾಮೇಜ್​ ಕಂಟ್ರೋಲ್​ ಮಾಡೋದು ಫ್ರಾಂಚೈಸಿಯ ಲೆಕ್ಕಾಚಾರವಾಗಿದೆ.
ಅಂಬಾನಿ ಬ್ರಿಗೆಡ್​​ಗೆ ಬ್ಯ್ರಾಂಡ್​ ಬಿದ್ದೋಗೊ ಭಯ.!
ಚಾಂಪಿಯನ್​ ಕ್ಯಾಪ್ಟನ್​ ರೋಹಿತ್​ ಶರ್ಮಾನ ಕೆಳಗಿಳಿಸಿ, ಹಾರ್ದಿಕ್​ ಪಾಂಡ್ಯಗೆ ಪಟ್ಟ ಕಟ್ಟಿದ್ದ ಯಡವಟ್ಟು ಮುಂಬೈ ಇಂಡಿಯನ್ಸ್​ನ ಬ್ರ್ಯಾಂಡ್​​ ವ್ಯಾಲ್ಯೂಗೂ ಹೊಡೆತ ಕೊಟ್ಟಿತ್ತು. ಮುಂದಿನ ಸೀಸನ್​​ಗೂ ಮುನ್ನ ರೋಹಿತ್ ಏನಾದ್ರೂ, ಬೇರೆ ತಂಡ ಸೇರಿದ್ರೆ, ಮುಂಬೈ ಜನಪ್ರೀಯತೆಗೆ ದೊಡ್ಡ ಹೊಡೆತ ಬೀಳಲಿದೆ. ಬ್ರ್ಯಾಂಡ್​​ ವ್ಯಾಲ್ಯೂ ಬಿದ್ದೋಗೊ ಭಯ ಅಂಬಾನಿ ಬ್ರಿಗೇಡ್​​​ನ ಕಾಡ್ತಿದೆ. ಅದೇ ರೋಹಿತ್​ ತಂಡದಲ್ಲಿ ಉಳಿದ್ರೆ, ಫ್ರಾಂಚೈಸಿಗೆ ಹಳೆ ಚಾರ್ಮ್​ ಬರುತ್ತೆ.
ಭಯಾನಕ ಫಾರ್ಮ್​ನಲ್ಲಿ ಹಿಟ್​ಮ್ಯಾನ್​ ಘರ್ಜನೆ​.!
ಈ ವರ್ಷದಲ್ಲಿ ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಭಯಾನಕ ಫಾರ್ಮ್​ನಲ್ಲಿದ್ದಾರೆ. ಟಿ20 ವಿಶ್ವಕಪ್​ನಲ್ಲಿ ಆರ್ಭಟಿಸಿದ್ದ ರೋಹಿತ್​, ಕಳೆದ ಶ್ರೀಲಂಕಾ ಪ್ರವಾಸದಲ್ಲೂ ಬೌಂಡರಿ, ಸಿಕ್ಸರ್​​ಗಳ ಸುರಿಮಳೆ ಸುರಿಸಿದ್ದಾರೆ. 37ರ ವಯಸ್ಸಿನಲ್ಲೂ ಬೌಲರ್​ಗಳ ಬೆಂಡೆತ್ತಿ ಘರ್ಜಿಸಿದ್ದಾರೆ. ರೋಹಿತ್​ ಶರ್ಮಾರ ಸಾಲಿಡ್​ ಫಾರ್ಮ್​, ಅಗ್ರೆಸ್ಸಿವ್​ ಆಟ ಮುಂಬೈ ಫ್ರಾಂಚೈಸಿಯ ಕಣ್ಣು ತೆರೆಸಿದೆ.
ಮುಂಬೈ ತಂಡಕ್ಕೆ ಬೇಕಿದೆ ಅನುಭವಿಯ ಮಾರ್ಗದರ್ಶನ.!
ರೋಹಿತ್​ ಶರ್ಮಾಗಿರೋ ಅನುಭವ ಸದ್ಯ ಮುಂಬೈ ತಂಡದಲ್ಲಿರೋ ಯಾರಿಗೂ ಇಲ್ಲ. ನಾಯಕನಾಗಿ ತಂಡವನ್ನ 5 ಬಾರಿ ಚಾಂಪಿಯನ್​ ಮಾಡಿದ ಹೆಗ್ಗಳಿಕೆ ರೋಹಿತ್​ ಶರ್ಮಾದ್ದಾಗಿದೆ. ಯುವ ತಂಡವನ್ನ ಗೈಡ್​ ಮಾಡಲು ರೋಹಿತ್​​ಗಿಂತ ಒಳ್ಳೆ ಮಾರ್ಗದರ್ಶನ ಸಿಗೋದಕ್ಕೆ ಸಾಧ್ಯ ಇಲ್ಲ. ಕಳೆದ ಸೀಸನ್​ ಮೆನಿ ಫ್ಯಾಮಿಲಿಯಾಗಿರೋ ಒನ್​ ಫ್ಯಾಮಿಲಿ ಮತ್ತೆ ಒಂದಾಗಬೇಕಂದ್ರೆ, ರೋಹಿತ್​ ಶರ್ಮಾ ಡ್ರೆಸ್ಸಿಂಗ್​ ರೂಮ್​ನಲ್ಲಿರೋದು ಬಹುಮುಖ್ಯ.
‘ಸ್ವಾಭಿಮಾನಿ’ ರೋಹಿತ್​ ಮನಸ್ಸು ಬದಲಾಯಿಸ್ತಾರಾ.?
ಕಳೆದ ಸೀಸನ್​ನಲ್ಲಿ ಮುಂಬೈ ಫ್ರಾಂಚೈಸಿ ಅವಮಾನಕರ ರೀತಿಯಲ್ಲಿ ನಾಯಕತ್ವದಿಂದ ಕೆಳಗಿಳಿಸಾದಗಲೇ ರೋಹಿತ್​ ತಂಡದಿಂದ ಒಂದು ಹೆಜ್ಜೆ ಹೊರಗಿಟ್ಟಿದ್ರು. ಇದೀಗ ಆಪ್ತರ ಬಳಿಕ ತಂಡ ತೊರೆಯೋ ಮಾತನಾಡಿದ್ದು, ಬೇರೆ ಫ್ರಾಂಚೈಸಿಗಳು ಕೂಡ ರೋಹಿತ್​ನ ಸಂಪರ್ಕಿಸಿರೋ ಸುದ್ದಿ ಹೊರ ಬಿದ್ದಿದೆ. ಇದೀಗ ತನ್ನ ಲಾಭದ ಲೆಕ್ಕಾಚಾರ ಹಾಕಿರೋ ಮುಂಬೈ ಫ್ರಾಂಚೈಸಿ, ರೋಹಿತ್​ ಮನವೊಲಿಕೆಗೆ ಮುಂದಾಗಿದೆ. ಆದ್ರೆ, ಸ್ವಾಭಿಮಾನಿ ರೋಹಿತ್​ ಶರ್ಮಾ ಮನಸ್ಸು ಬದಲಾಯಿಸ್ತಾರಾ?.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ