ಮೆಗಾ ಹರಾಜಿನಲ್ಲಿ ಮುಂಬೈ ಜತೆ ಒಳ ಒಪ್ಪಂದ ಮಾಡಿಕೊಂಡಿತಾ RCB? ಫ್ಯಾನ್ಸ್ ಭಾರೀ ಆಕ್ರೋಶ!

author-image
Ganesh Nachikethu
Updated On
RCB ಈ ಚಾನ್ಸ್​ ಬಳಸಿದ್ರೆ ಬಲಿಷ್ಠ ಟೀಮ್ ಕಟ್ಟಬಹುದಿತ್ತು.. ಫ್ರಾಂಚೈಸಿ ಮಾಡಿದ ತಪ್ಪು ಯಾವುದು?
Advertisment
  • 2ನೇ ದಿನದ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜು
  • ಫ್ಯಾನ್ಸ್​ಗೆ ಶಾಕ್​ ಕೊಟ್ಟ ರಾಯಲ್​ ಚಾಲೆಂಜರ್ಸ್​ ಬೆಂಗಳೂರು!
  • ವಿಲ್​ ಜಾಕ್ಸ್ ವಿಚಾರದಲ್ಲಿ ಮುಂಬೈ ಜತೆ RCB ಒಳ ಒಪ್ಪಂದ..?

ಬಹುನಿರೀಕ್ಷಿತ ಇಂಡಿಯನ್​ ಪ್ರೀಮಿಯರ್​ ಲೀಗ್​ 2025ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ ಹೆಚ್ಚು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಆಲ್​ರೌಂಡರ್​ ಅವರಿಗೆ ಮಣೆ ಹಾಕಿದೆ. ಆರ್​​ಸಿಬಿ ಆಟಗಾರನಿಗೆ ಬರೋಬ್ಬರಿ 5.25 ಕೋಟಿ ನೀಡಿ ಖರೀದಿ ಮಾಡಿದೆ.

ವಿಲ್​ ಜಾಕ್ಸ್​ ಕೈ ಬಿಟ್ಟ ಆರ್​​ಸಿಬಿ

ಕಳೆದ ಸೀಸನ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಸ್ಟಾರ್​ ಆಲ್​ರೌಂಡರ್​ ವಿಲ್​ ಜಾಕ್ಸ್​ ಮಿಂಚಿದ್ರು. ಆರ್​​ಸಿಬಿ ತಂಡ ಪ್ಲೇ ಆಫ್​​ಗೆ ಹೋಗಲು ತಂಡದಲ್ಲಿ ಪ್ರಮುಖ ಪಾತ್ರವಹಿಸಿದ್ರು. ಮೆಗಾ ಹರಾಜಿಗೆ ಮುನ್ನ ಆರ್​ಸಿಬಿ ಇವರನ್ನು ತಂಡದಿಂದ ರಿಲೀಸ್​ ಮಾಡಿತ್ತು. ಮೆಗಾ ಹರಾಜಿನಲ್ಲಿ ಆರ್​ಟಿಎಂ ಕಾರ್ಡ್​ ಬಳಸಬಹುದು ಎಂದು ಹೇಳಲಾಗಿತ್ತು. ಆದರೆ, ಆರ್​​ಸಿಬಿ ಫ್ಯಾನ್ಸ್​ ಕನಸಿಗೆ ತಣ್ಣೀರೆರಚಿದ ಫ್ರಾಂಚೈಸಿ ಮುಂಬೈ ಇಂಡಿಯನ್ಸ್​ಗೆ ವಿಲ್​ ಜಾಕ್ಸ್​ ಅವರನ್ನು ಆರ್​ಟಿಎಂ ಕಾರ್ಡ್​ ಬಳಸದೆ ಬಿಟ್ಟುಕೊಟ್ಟಿದೆ.

ಮುಂಬೈ, ಆರ್​​ಸಿಬಿ ಮಧ್ಯೆ ಒಳ ಒಪ್ಪಂದ

ಇನ್ನು ವಿಲ್‌ ಜ್ಯಾಕ್ಸ್‌ ಖರೀದಿ ಮಾಡುತ್ತಿದ್ದಂತೆ ಮುಂಬೈ ಇಂಡಿಯನ್ಸ್‌ ಮಾಲೀಕ ಆಕಾಶ್ ಅಂಬಾನಿ ಎದ್ದು ಹೋಗಿ ಆರ್‌ಸಿಬಿ ತಂಡದ ಅಧ್ಯಕ್ಷ ಪ್ರಥಮೇಶ್‌ ಮಿಶ್ರಾರ ಕೈ ಕುಲುಕಿ ಧನ್ಯವಾದ ಹೇಳಿದ್ರು. ಇದು ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ. ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳ ಮಾಲಿಕರ ನಡುವೆ ಒಳ ಒಪ್ಪಂದ ಆಗಿದೆಯೇ ಎನ್ನುವ ಅನುಮಾನ ಮೂಡಿದೆ.

ಈಗಾಗಲೇ ಸ್ಟಾರ್ ಆಟಗಾರರನ್ನು ಮುಂಬೈ ಉಳಿಸಿಕೊಂಡಿದೆ. ಸ್ಟಾರ್‌ ಆಟಗಾರರೊಂದಿಗೆ ಆಡುವ ಕೆಲವೇ ಆಟಗಾರರನ್ನು ಮಾತ್ರ ಹುಡುಕಿ ಮುಂಬೈ ಬಿಡ್ ಮಾಡಿದೆ. ಇದರಲ್ಲಿ ನ್ಯೂಜಿಲೆಂಡ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಅವರಿಗೆ 12.50 ಕೋಟಿ ರೂ. ನೀಡುವ ಮೂಲಕ ಖರೀದಿಸಿದೆ. ಬಳಿಕ ಆರ್‌ಸಿಬಿ ಬಿಡುಗಡೆ ಮಾಡಿದ ವಿಲ್ ಜ್ಯಾಕ್ ಅವರಿಗೆ 5.25 ಕೋಟಿ ರೂಗೆ ಮುಂಬೈ ಗಾಳ ಹಾಕಿದೆ.

ಇದನ್ನೂ ಓದಿ: IPL 2025: ಆರ್​​ಸಿಬಿ ತಂಡದಿಂದ ಈ ಸ್ಟಾರ್​ ಆಟಗಾರನನ್ನು ಕೈ ಬಿಡಲು ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment