/newsfirstlive-kannada/media/post_attachments/wp-content/uploads/2025/05/AXAR_PATEL_HARDHIK.jpg)
ಸೀಸನ್​-18ರ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ತಂಡಗಳು ಪ್ಲೇ ಆಫ್​ಗೆ ಪ್ರವೇಶಿಸಿದೆ. ಇನ್ನುಳಿದಿರುವುದು ಒಂದೇ ಸ್ಲಾಟ್. ಈ ಒಂದು ಸ್ಲಾಟ್​​ಗಾಗಿ 2 ತಂಡಗಳ ನಡುವೆ ಜಂಗಿ ಕುಸ್ತಿ ನಡೀತಿದೆ. ಆ ಕುಸ್ತಿಗೆ ಇವತ್ತೊಂದು ಕ್ಲಾರಿಟಿ ಸಿಗಲಿದೆ. ಮುಂಬೈ ಹಾಗೂ ಡೆಲ್ಲಿ ನಡುವಿನ ಡು ಆರ್ ಡೈ ಮ್ಯಾಚ್​ನಲ್ಲಿ ಯಾರಿಗೆ ಅದೃಷ್ಟ ಖುಲಾಯಿಸುತ್ತೆ?.
ಐಪಿಎಲ್​ನ ಲೀಗ್ ಮ್ಯಾಚ್​ಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 62 ಪಂದ್ಯಗಳು ಮುಗಿದಿದ್ದು, ಇನ್ನುಳಿದಿರುವುದು ಕೇವಲ 8 ಪಂದ್ಯಗಳು ಮಾತ್ರ. ಈ 8 ಮ್ಯಾಚ್​ಗಳ ಪೈಕಿ ಇವತ್ತಿನ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ದಂಗಲ್ ಭಾರೀ ಕ್ಯೂರಿಯಾಸಿಟಿ ಹುಟ್ಟಿಹಾಕಿದೆ. ಇದಕ್ಕೆಲ್ಲಾ ಕಾರಣ ಪ್ಲೇ ಆಫ್ ಭವಿಷ್ಯ..
/newsfirstlive-kannada/media/post_attachments/wp-content/uploads/2025/05/AXAR_PATEL-2.jpg)
ಇವತ್ತು ಮುಂಬೈನ ವಾಂಖೆಡೆಯಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ ಆಗ್ತಿವೆ. ಪ್ಲೇ ಆಫ್​ ಕನಸಿನಲ್ಲಿರುವ ಉಭಯ ತಂಡಗಳ ಪಾಲಿಗೆ ಇವತ್ತಿನ ಮ್ಯಾಚ್ ಮಹತ್ವದ್ದಾಗಿದೆ. ಇವತ್ತು ಗೆಲುವಿಗಾಗಿ ಉಭಯ ತಂಡಗಳು ಜಿದ್ದಾಜಿದ್ದಿ ಹೋರಾಟ ನಡೆಸಲಿದ್ದು ಪಂದ್ಯ ಹೈವೋಲ್ಟೇಜ್ ಟಚ್ ಸಿಕ್ಕಿದೆ.
ಮುಂಬೈ ಇಂಡಿಯನ್ಸ್​ ಗೆದ್ದರೆ ಪ್ಲೇ ಆಫ್​​​ ಫಿಕ್ಸ್..!
ಸದ್ಯ ಪಾಯಿಂಟ್ ಟೇಬಲ್​ನಲ್ಲಿ 4ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ 14 ಅಂಕಗಳಿಸಿದೆ. ಇನ್ನು ಡೆಲ್ಲಿ 13 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿ ಉಳಿದಿದೆ. ಹೀಗಾಗಿ ಇವತ್ತಿನ ಪಂದ್ಯ ಪ್ಲೇ ಆಫ್ ದೃಷ್ಟಿಯಿಂದ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳ ಪಾಲಿಗೆ ಡು ಆರ್ ಡೈ ಮ್ಯಾಚ್. ಆದ್ರೆ, ಮುಂಬೈ ಇಂಡಿಯನ್ಸ್​ಗೆ ಇವತ್ತು ಸೋತರೂ ಒನ್ ಲೈಫ್ ಲೈನ್ ಇದೆ.
ಇವತ್ತು 5ನೇ ಸ್ಥಾನದಲ್ಲಿರೋ ಡೆಲ್ಲಿ ವಿರುದ್ಧ ಮುಂಬೈ ಗೆದ್ದರೆ, 16 ಅಂಕಗಳೊಂದಿಗೆ ನೇರವಾಗಿ ಪ್ಲೇಆಫ್​ಗೆ ಎಂಟ್ರಿ ಕೊಡಲಿದೆ. ಅದೇ ಮುಂಬೈ ಇಂಡಿಯನ್ಸ್​ ಸೋತರೆ, ಪಂಜಾಬ್ ಎದುರಿನ ಕೊನೆ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್​ ತನ್ನ ಲೀಗ್​ ಮ್ಯಾಚ್​ನ ಕೊನೆಯ ಪಂದ್ಯದಲ್ಲಿ ಪಂಜಾಬ್​ ಎದುರು ಸೋಲಬೇಕಾಗುತ್ತದೆ. ಆಗ ಮುಂಬೈ ಇಂಡಿಯನ್ಸ್​ ಪ್ಲೇ ಆಫ್ಗೆ ಎಂಟ್ರಿ ಕೊಡಲಿದೆ.
ಸೋತರೆ ಡೆಲ್ಲಿ ಕ್ಯಾಪಿಟಲ್ಸ್​ ಪ್ಲೇ ಆಫ್ ಕನಸು ಭಗ್ನ..!
ಮುಂಬೈ ಇಂಡಿಯನ್ಸ್​ಗಿಂತ ಡೆಲ್ಲಿ ಕ್ಯಾಪಿಟಲ್ಸ್​ಗೆ ಇವತ್ತು ಮಾಡು ಇಲ್ಲವೇ ಮಡಿ ಪಂದ್ಯ. ಯಾಕಂದ್ರೆ, 13 ಅಂಕ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್​, ಮುಂದಿನ ಎರಡು ಪಂದ್ಯಗಳನ್ನ ಗೆಲ್ಲಬೇಕಿದೆ. ಒಂದೇ ಒಂದು ಪಂದ್ಯ ಸೋತರು, 15 ಅಂಕಗಳಿಸಲಷ್ಟೇ ಶಕ್ತವಾಗಲಿದೆ. ಡೆಲ್ಲಿಗೆ ಪ್ಲೇ ಆಫ್ ಕನಸು ಜೀವಂತವಾಗಿರಬೇಕಾದ್ರೆ, ಮುಂಬೈ ಎದುರು ಇಂದು ಗೆಲ್ಲಬೇಕಿದೆ.
ಡು ಆರ್ ಡೈನಲ್ಲಿ ಮುಂಬೈ ವೆರಿ ವೆರಿ ಡೇಂಜರಸ್..!
ಡು ಆರ್ ಡೈ ಮ್ಯಾಚ್​ಗಳಲ್ಲಿ ಮುಂಬೈ ಇಂಡಿಯನ್ಸ್​ ನಿಜಕ್ಕೂ ಡೇಂಜರಸ್ ಟೀಮ್. ಐಪಿಎಲ್​ನ ಇತಿಹಾಸವೇ ಮಹತ್ವದ ಪಂದ್ಯಗಳಲ್ಲಿ ಮುಂಬೈ, ಎಷ್ಟು ಅಗ್ರೆಸ್ಸಿವ್ ಬ್ರ್ಯಾಂಡ್​ ಆಫ್ ಕ್ರಿಕೆಟ್ ಆಡುತ್ತೆ ಅನ್ನೋದನ್ನ ಸಾರಿ ಸಾರಿ ಹೇಳುತ್ತೆ. ಅಂತಿಮ ಘಟ್ಟಗಳಲ್ಲಿ ಒಗ್ಗಟ್ಟಿನ ಆಟವಾಡುವ ಮುಂಬೈ ಇಂಡಿಯನ್ಸ್​, ಬಿಗ್ ಟಾರ್ಗೆಟ್​ ಚೇಸ್ ಮಾಡೋದ್ರಲ್ಲಿ ಪಂಟರ್. ಇಂಥಹ ಡೇಂಜರಸ್ ಮುಂಬೈನಲ್ಲೀಗ ಇನ್​ ಫಾರ್ಮ್​ ಬ್ಯಾಟರ್​ಗಳ ದಂಡೇ ಇದೆ. ಡೆಡ್ಲಿ ಬೌಲಿಂಗ್ ಅಟ್ಯಾಕ್ ಇದೆ. ಹೀಗಾಗಿ ಕೇವಲ ಒಂದೆರೆಡು ಆಟಗಾರರನ್ನೇ ನಂಬಿಕೊಂಡಿರುವ ಡೆಲ್ಲಿ, ಮುಂಬೈಗೆ ನಿಜಕ್ಕೂ ಸವಾಲ್ ಆಗುತ್ತಾ ಅನ್ನೋದೆ ಪ್ರಶ್ನೆ.
ಮುಂಬೈಗೆ ವಿಲನ್ ಆಗ್ತಾರಾ ಕೆ.ಎಲ್.ರಾಹುಲ್..?
ಕಳೆದ ಪಂದ್ಯದ ಶತಕ ವೀರ ಕನ್ನಡಿಗ ಕೆ.ಎಲ್.ರಾಹುಲ್​, ಇವತ್ತಿನ ಪಂದ್ಯದ ಸೆಂಟರ್ ಆಫ್ ಅಟ್ರಾಕ್ಷನ್. ಯಾಕಂದ್ರೆ, ಸಾಲಿಡ್​ ಫಾರ್ಮ್​ನಲ್ಲಿರೋ ರಾಹುಲ್​ಗೆ ಮುಂಬೈ ಇಂಡಿಯನ್ಸ್​ ಹಾಗೂ ವಾಂಖೆಡೆ ಪಿಚ್ ಅಂದ್ರೆ ಒಂತಾರಾ ಲವ್​. ಹೀಗಾಗಿ ರಾಹುಲ್ ಇವತ್ತು ಮುಂಬೈಗೆ ವಿಲನ್ ಆದರು ಅಚ್ಚರಿ ಇಲ್ಲ.
ಇದನ್ನೂ ಓದಿ: KL ರಾಹುಲ್​ಗೆ ಏನಾಯಿತು.. ಇಂದಿನ ಮಹತ್ವದ ಪಂದ್ಯದಲ್ಲಿ ಆಡ್ತಾರಾ?
/newsfirstlive-kannada/media/post_attachments/wp-content/uploads/2025/04/ROHIT_SHARMA-1.jpg)
ಕೆ.ಎಲ್.ರಾಹುಲ್ ಲವ್ಸ್ ಮುಂಬೈ
ಮುಂಬೈ ಇಂಡಿಯನ್ಸ್ ಎದುರು 965 ರನ್ ಕೊಳ್ಳೆ ಹೊಡೆದಿರುವ ಕೆ.ಎಲ್.ರಾಹುಲ್, ಇದೇ ತಂಡದ ಎದುರು 3 ಶತಕ ಸಿಡಿಸಿದ್ದಾರೆ. ಇದೇ ವಾಂಖೆಡೆಯಲ್ಲಿ 12 ಪಂದ್ಯಗಳನ್ನಾಡಿರುವ ರಾಹುಲ್​, 634 ರನ್ ದಾಖಲಿಸಿದ್ದಾರೆ. 3 ಶತಕಗಳ ಪೈಕಿ 2 ಇದೇ ಸ್ಟೇಡಿಯಂನಲ್ಲಿ ಬಂದಿವೆ.
ಈ ಹಿಂದಿನ ಇತಿಹಾಸ, ಸದ್ಯದ ಫಾರ್ಮ್​ನಿಂದಾಗಿ ಡು ಆರ್ ಡೈ ಮ್ಯಾಚ್​ನಲ್ಲಿ ಕೆ.ಎಲ್.ರಾಹುಲ್, ಮತ್ತೊಮ್ಮೆ ಕಮಾಲ್ ಮಾಡೋ ನಿರೀಕ್ಷೆ ಇದೆ. ಆದ್ರೆ, ತಂಡ ಗೆಲ್ಲಬೇಕಂದ್ರೆ, ಇನ್ನಿತರ ಆಟಗಾರರ ಸಾಥ್​ ಕೂಡ ಅತಿಮುಖ್ಯವಾಗಿದೆ. ಹೀಗಾಗಿ ಡೆಲ್ಲಿ ಇಂದು ರನ್​ಭೂಮಿಯಲ್ಲಿ ವಿರೋಚಿತ ಹೋರಾಟ ನಡೆಸಿದ್ರಷ್ಟೇ ಗೆಲುವು ಸಾಧ್ಯವಾಗಲಿದೆ. ಪ್ಲೇ ಆಫ್ ಜೀವಂತವಾಗಿರಲಿದೆ. ಇಲ್ಲದಿದ್ರೆ, ಪ್ಲೇ ಆಫ್​​ನಿಂದ ಔಟ್ ಆಗೋದು ಪಕ್ಕಾ.!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us