4, 4, 4, 4, 6, 6, 6, 6; ರೋಹಿತ್ ಶರ್ಮಾ ಅದೇ ರಾಗ, ಅದೇ ಹಾಡು.. ಭರ್ಜರಿ ಅರ್ಧಶತಕ ಸಿಡಿಸಿದ ರಯಾನ್

author-image
Bheemappa
Updated On
4, 4, 4, 4, 6, 6, 6, 6; ರೋಹಿತ್ ಶರ್ಮಾ ಅದೇ ರಾಗ, ಅದೇ ಹಾಡು.. ಭರ್ಜರಿ ಅರ್ಧಶತಕ ಸಿಡಿಸಿದ ರಯಾನ್
Advertisment
  • ಕೆಕೆಆರ್ ಬೌಲರ್​ಗಳಿಗೆ ಬೆವರಿಳಿಸಿದ ರಯಾನ್ ಬ್ಯಾಟಿಂಗ್​
  • ಫೋರ್, ಸಿಕ್ಸರ್​​ಗಳಿಂದ ಹಾಫ್​ಸೆಂಚುರಿ ಸಿಡಿಸಿದ ರಯಾನ್
  • ಬ್ಯಾಟಿಂಗ್​ನಲ್ಲಿ ಕಳಪೆಯಾಟ ಪ್ರದರ್ಶಿಸಿದ ಕೋಲ್ಕತ್ತಾ ಟೀಮ್​

ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಓಪನರ್ ಬ್ಯಾಟ್ಸ್​ಮನ್​ ರಯಾನ್ ರಿಕೆಲ್ಟನ್ ಭರ್ಜರಿಯಾದ ಹಾಫ್ ಸೆಂಚುರಿ ಸಿಡಿಸಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ಮೊದಲ ಬ್ಯಾಟಿಂಗ್ ಮಾಡಿ 117 ರನ್​ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿರುವ ಮುಂಬೈ ಇಂಡಿಯನ್ಸ್ ಒಳ್ಳೆಯ ಆರಂಭವೇನು ಪಡೆದುಕೊಂಡಿತು. ಆದರೆ ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ರೋಹಿತ್ ಶರ್ಮಾ ಮತ್ತೆ ವಿಫಲ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಕೇವಲ 13 ರನ್​ಗೆ ಕ್ಯಾಚ್ ಕೊಟ್ಟು ಔಟ್ ಆದರು. ಆದರೆ ಇನ್ನೊಂದು ಕಡೆ ರಯಾನ್ ರಿಕೆಲ್ಟನ್ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.

ಇದನ್ನೂ ಓದಿ:ಮುಂಬೈಗೆ ಆಪದ್ಬಾಂಧವನಾದ ಅಶ್ವನಿ ಕುಮಾರ್.. ಡೆಬ್ಯೂ ಪಂದ್ಯದಲ್ಲೇ KKRಗೆ ಟಕ್ಕರ್, ಆಲೌಟ್

publive-image

ಕೆಕೆಆರ್ ಬೌಲರ್​ಗಳ ಆಕ್ರಮಣಕಾರಿಯನ್ನು ಮೆಟ್ಟಿನಿಂತ ರಯಾನ್ ರಿಕೆಲ್ಟನ್ ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಹೀಗಾಗಿಯೇ ಕೇವಲ 33 ಎಸೆತಗಳಲ್ಲಿ 4 ಅಮೋಘವಾದ ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್​​ಗಳಿಂದ ಅರ್ಧಶತಕ ಪೂರೈಸಿದ್ದಾರೆ. ಸತತ ಸೋಲಿನಿಂದ ಬೇಸರದಲ್ಲಿದ್ದ ಮುಂಬೈ ಇಂಡಿಯನ್ಸ್​ ಸುಲಭವಾದ ಗುರಿ ಮುಟ್ಟಿದೆ.

ಇದಕ್ಕೂ ಮೊದಲು ಮುಂಬೈ ಪರ ಪಂದ್ಯಕ್ಕೆ ಪದಾರ್ಪಣೆ ಮಾಡಿದ ಅಶ್ವನಿ ಕುಮಾರ್ ಅವರು ಕೆಕೆಆರ್ ಬ್ಯಾಟರ್​ಗಳನ್ನು ಮೂಲೆಗುಂಪು ಮಾಡಿದರು. ಅಜಿಂಕ್ಯಾ ರಹಾನೆ, ರಿಂಕು ಸಿಂಗ್, ಮನೀಶ್ ಪಾಂಡ್ಯ, ಆ್ಯಂಡ್ರೆ ರಸೆಲ್ ಅವರ ವಿಕೆಟ್​ಗಳನ್ನು ಕಬಳಿಸಿ ಸಂಭ್ರಮಿಸಿದರು. ಚೊಚ್ಚಲ ಪಂದ್ಯದಲ್ಲೇ ಪ್ರಮುಖ 4 ಕಿತ್ತು ತಂಡಕ್ಕೆ ಬಹುದೊಡ್ಡ ತಿರುವು ತಂದುಕೊಟ್ಟರು ಎನ್ನಬಹುದು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment