newsfirstkannada.com

LSG vs MI; ಮುಂಬೈ ಇಂಡಿಯನ್ಸ್​ಗೆ ಬೃಹತ್ ಟಾರ್ಗೆಟ್​ ಕೊಟ್ಟ ಕನ್ನಡಿಗ KL ರಾಹುಲ್​ ಪಡೆ; ಪ್ಲೇ ಆಫ್ ಕನಸು? 

Share :

Published May 17, 2024 at 9:55pm

Update May 17, 2024 at 9:57pm

    ಮುಂಬೈ ವಿರುದ್ಧದ ಪಂದ್ಯವನ್ನು ಭಾರೀ ಅಂತರದಿಂದ ಗೆಲ್ಲಬೇಕು

    ಕೆ.ಎಲ್​ ರಾಹುಲ್​ ಪಡೆಗೂ ಇದೆ ಪ್ಲೇ ಆಫ್​ ಚಾನ್ಸ್​, ಅದು ಹೇಗೆ?

    ನಿಕೋಲಸ್ ಪೂರನ್, ಕೆ.ಎಲ್​ ರಾಹುಲ್ ಭರ್ಜರಿ ಹಾಫ್​ಸೆಂಚುರಿ

ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ 215 ರನ್​ಗಳ ಬೃಹತ್ ಟಾರ್ಗೆಟ್​ ನೀಡಿದೆ.

ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡರು. ಲಕ್ನೋ ಟೀಮ್ ಅನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ಬ್ಯಾಟಿಂಗ್ ಮಾಡಲು ಕ್ರೀಸ್​ಗೆ ಆಗಮಿಸಿದ ಕೆ.ಎಲ್ ರಾಹುಲ್ ಹಾಗೂ ಪಡಿಕ್ಕಲ್ ಆರಂಭೀಕ ಆಘಾತಕ್ಕೆ ಒಳಗಾದರು. ಮೊದಲ ಓವರ್​​ನಲ್ಲೇ ದೇವದತ್ತ ಪಡಿಕ್ಕಲ್​ ಡಕೌಟ್ ಆಗಿದ್ದು ತಂಡಕ್ಕೆ ಭಾರೀ ಹೊಡೆತ ಬಿದ್ದಿತ್ತು. ಇವರ ನಂತರ ಬ್ಯಾಟಿಂಗ್​ಗೆ ಬಂದ ಸ್ಟೋನೀಸ್​ 28 ರನ್​ ಬಾರಿಸಿ ಆಟ ಮುಗಿಸಿದರು. ದೀಪಕ್ ಹೂಡ ಕೂಡ ಕೇವಲ 11 ರನ್​ಗೆ ಗಂಟು ಮೂಟೆ ಕಟ್ಟಿದರು. ಒಂದು ಕಡೆ ಮೈದಾನದಲ್ಲಿ ಕ್ರೀಸ್ ಕಾಯ್ದುಕೊಂಡಿದ್ದ ಕ್ಯಾಪ್ಟಲ್​ ರಾಹುಲ್​ಗೆ ನಿಕೋಲಸ್ ಪೂರನ್ ಜೊತೆಯಾದರು.

ರಾಹುಲ್ ಹಾಗೂ ಪೂರನ್​ ತಂಡಕ್ಕೆ ಒಳ್ಳೆಯ ತಿರುವು ತಂದುಕೊಟ್ಟರು. ತಂಡದ ಮೊತ್ತ 178 ರನ್​ಗಳು ಆಗುವರೆಗೆ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ್ದರು. ರಾಹುಲ್​ 41 ಎಸೆತದಲ್ಲಿ 3 ಫೋರ್, 3 ಸಿಕ್ಸರ್ ಸಮೇತ 55 ರನ್ ಗಳಿಸಿದರು. ಹೊಡಿಬಡಿಯಾಟ ಆಡಿದ ನಿಕೋಲಸ್ ಪೂರನ್ ಕೇವಲ 29 ಎಸೆತದಲ್ಲಿ 5 ಬೌಂಡರಿ ಹಾಗೂ ಭರ್ಜರಿ 8 ಸಿಕ್ಸರ್ ಸಮೇತ 75 ರನ್​ಗಳನ್ನು ಸಿಡಿಸಿ ತಂಡಕ್ಕೆ ನೆರವಾದರು.

ಆಯುಷ್ ಬದೋನಿ 22, ಕೃನಾಲ್ ಪಾಂಡ್ಯ 12 ರನ್​ ಗಳಿಸಿದರು. ಈ ಮೂಲಕ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ ಎಲ್​ಎಸ್​ಜಿ 215 ರನ್​ಗಳ ಬೃಹತ್​ ಮೊತ್ತದ ಟಾರ್ಗೆಟ್ ಅನ್ನು ಮುಂಬೈ ಇಂಡಿಯನ್ಸ್​ ತಂಡಕ್ಕೆ ನೀಡಿದೆ. ಇನ್ನು ಮುಂಬೈ ಇಂಡಿಯನ್ಸ್ ಪರ ನುವಾನ್ ತುಷಾರ ಹಾಗೂ ಪಿಯೂಷ್ ಚಾವ್ಲಾ ತಲಾ ಮೂರು ವಿಕೆಟ್​ ಕಿತ್ತು ಮಿಂಚಿದರು. ಇನ್ನು ಈ ತಂಡದಲ್ಲಿ ಕಡಿಮೆ ಮೊತ್ತಕ್ಕೆ ಮುಂಬೈ ಅನ್ನು ಆಲೌಟ್ ಮಾಡಿದರೆ ರಾಹುಲ್​ ಟೀಮ್​ಗೆ ಕೊಂಚ ಪ್ಲೇ ಆಫ್ ಚಾನ್ಸ್​ ನಾಳೆವರೆಗೆ ಇರಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

LSG vs MI; ಮುಂಬೈ ಇಂಡಿಯನ್ಸ್​ಗೆ ಬೃಹತ್ ಟಾರ್ಗೆಟ್​ ಕೊಟ್ಟ ಕನ್ನಡಿಗ KL ರಾಹುಲ್​ ಪಡೆ; ಪ್ಲೇ ಆಫ್ ಕನಸು? 

https://newsfirstlive.com/wp-content/uploads/2024/05/KL_RAHUL_POORAN.jpg

Load More