/newsfirstlive-kannada/media/post_attachments/wp-content/uploads/2025/04/Rohit-sharma-1.jpg)
ಐಪಿಎಲ್ನಲ್ಲಿ ನಿನ್ನೆ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿ ಆಗಿದ್ದವು. ಕೊನೆಯಲ್ಲಿ ನಡೆದ ರೋಚಕ ಸೆಣಸಾಟದಲ್ಲಿ ಮುಂಬೈ ಇಂಡಿಯನ್ಸ್ 12 ರನ್ಗಳ ವಿರೋಚಿತ ಸೋಲನ್ನು ಕಂಡಿತು.
ಇನ್ನು, ಪಂದ್ಯ ಆರಂಭದಲ್ಲಿ ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿತು. ಟಾಸ್ ಬಳಿಕ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ ಅವರನ್ನು ತಂಡದಿಂದ ಹೊರಗೆ ಇಟ್ಟಿರೋ ವಿಚಾರ ಬಯಲಾಯ್ತು. ಕಳಪೆ ಫಾರ್ಮ್ನಲ್ಲಿರುವ ರೋಹಿತ್ ಅವರನ್ನು ಪಾಂಡ್ಯ ಹೊರಗಿಟ್ಟಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದೀಗ ರೋಹಿತ್ ಶರ್ಮಾ ಯಾಕೆ ನಿನ್ನೆ ಆಡಲಿಲ್ಲ ಎಂಬ ವಿಚಾರ ಬಹಿರಂಗಗೊಂಡಿದೆ.
ಇದನ್ನೂ ಓದಿ: ತಿಲಕ್ ವರ್ಮಾ ರಿಟೈರ್ಡ್ ಔಟ್ ಆಗಿದ್ಕೆ ಸೂರ್ಯ ಶಾಕ್.. ಕೋಚ್ ಜೊತೆ ಆಕ್ರೋಶ VIDEO
ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಇಂಜುರಿಗೆ ತುತ್ತಾಗಿದ್ದಾರೆ. ನೆಟ್ಸ್ನಲ್ಲಿ ಅಭ್ಯಾಸದ ವೇಳೆ ರೋಹಿತ್ ಮೊಣಕಾಲಿಗೆ ಚೆಂಡು ಬಡಿದಿದೆ. ಹೀಗಾಗಿ ನಿನ್ನೆ ನಡೆದ ಲಕ್ನೋ ವಿರುದ್ಧದ ಪಂದ್ಯದಿಂದ ರೋಹಿತ್ ಹೊರಗುಳಿದಿದ್ರು. ಇಂಜುರಿ ನೋವಲ್ಲಿ ರೋಹಿತ್ ಡ್ರೆಸ್ಸಿಂಗ್ ರೂಮ್ಗೆ ನಡೆದುಕೊಂಡು ಹೋಗ್ತಿರೋ ವಿಡಿಯೋ ಹರಿದಾಡ್ತಿದೆ.
ನಿರಂತರ ಸೋಲಿನ ಸುಳಿಗೆ ಸಿಲುಕಿರುವ ಮುಂಬೈ ಇಂಡಿಯನ್ಸ್ಗೆ ರೋಹಿತ್ ಶರ್ಮಾರ ಇಂಜುರಿ ದೊಡ್ಡ ಪೆಟ್ಟು ನೀಡಿದೆ. ಈಗಾಗಲೇ ತಂಡದ ದೈತ್ಯ ಶಕ್ತಿಯಾಗಿದ್ದ ಜಸ್ಪ್ರಿತ್ ಬುಮ್ರಾ ಕೂಡ ಆಡುತ್ತಿಲ್ಲ. ಇನ್ನು, ನಿನ್ನೆಯ ಪಂದ್ಯವನ್ನು ಸೋಲುವ ಮೂಲಕ ಮುಂಬೈ ಇಂಡಿಯನ್ಸ್, ಪಾಯಿಂಟ್ಸ್ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ. ಇಲ್ಲಿಯವರೆಗೆ ನಾಲ್ಕು ಪಂದ್ಯಗಳನ್ನು ಆಡಿರುವ ಮುಂಬೈ ಇಂಡಿಯನ್ಸ್ ಮೂರರಲ್ಲಿ ಸೋಲನ್ನು ಕಂಡಿದೆ.
ಇದನ್ನೂ ಓದಿ: CSK ತಂಡದಲ್ಲಿ ಬಿಗ್ ಚೆಂಜ್; ಇಂದು ಚೆನ್ನೈ ಸೂಪರ್ ಕಿಂಗ್ಸ್ಗೆ ಧೋನಿ ಕ್ಯಾಪ್ಟನ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್