/newsfirstlive-kannada/media/post_attachments/wp-content/uploads/2025/04/BUMRAH.jpg)
ಮುಂಬೈನ ವಾಂಖೆಡೆ ಮೈದಾನದಲ್ಲಿ ಇವತ್ತು ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಮಧ್ಯೆ ಹೈ-ವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಮಧ್ಯೆ ಮುಂಬೈ ಇಂಡಿಯನ್ಸ್​ನಿಂದ ಬಿಗ್​ ಬ್ರೇಕಿಂಗ್ ನ್ಯೂಸ್​ ಸಿಕ್ಕಿದೆ.
ಜಸ್​ಪ್ರಿತ್ ಬುಮ್ರಾ ಕಂಬ್ಯಾಕ್..!
ಫಿಟ್ನೆಸ್​ ಸಮಸ್ಯೆಗೆ ಒಳಗಾಗಿದ್ದ ಸ್ಟಾರ್​ ವೇಗಿ ಜಸ್​ಪ್ರಿತ್ ಬುಮ್ರಾ ಮುಂಬೈ ಇಂಡಿಯನ್ಸ್​ಗೆ ಕಂಬ್ಯಾಕ್ ಮಾಡಿದ್ದಾರೆ. ಈಗಾಗಲೇ ಮುಂಬೈ ಕ್ಯಾಂಪ್ ಸೇರಿರುವ ಬುಮ್ರಾ, ನೆಟ್ಸ್​​ನಲ್ಲಿ ಬೆವರಿಳಿಸಿದ್ದಾರೆ. ಮಾತ್ರವಲ್ಲ, ಇವತ್ತು ನಡೆಯಲಿರುವ ಪಂದ್ಯಕ್ಕೆ ಲಭ್ಯ ಇರಲಿದ್ದಾರೆ ಎಂದು ಕೋಚ್ ಜಯವರ್ಧನೆ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಆರ್​​ಸಿಬಿ ಕ್ಯಾಂಪ್​​ನಲ್ಲಿ ಸಹಜವಾಗಿಯೇ ಆತಂಕ ಶುರುವಾಗಿದೆ.
JASPRIT BUMRAH IN NETS. 🐐pic.twitter.com/mkgXK6uQsV
— Mufaddal Vohra (@mufaddal_vohra) April 6, 2025
ಯಾಕೆಂದರೆ ಬುಮ್ರಾ ತಂಡದಲ್ಲಿದ್ದರೆ, ಬೌಲಿಂಗ್ ವಿಭಾಗದಲ್ಲಿ ಎಷ್ಟು ಪ್ರಬಾವ ಬೀರುತ್ತಾರೆ ಅನ್ನೋದು ಬಿಡಿಸಿ ಹೇಳಬೇಕಾಗಿಲ್ಲ. ಹಾಗಾಗಿ ಮುಂಬೈ ತಂಡಕ್ಕೆ ಸಹಜವಾಗಿಯೇ ಬಲ ಬಂದಿದೆ. ಇನ್ನು ಎರಡೂ ತಂಡಗಳು ಸೋಲನ್ನು ಕಾಣುತ್ತಿವೆ. ಆರ್​ಸಿಬಿ ಮೂರು ಪಂದ್ಯಗಳನ್ನು ಆಡಿದ್ದು, ಒಂದು ಮ್ಯಾಚ್​​ನಲ್ಲಿ ಸೋತಿದೆ. ಇವತ್ತಿನ ಪಂದ್ಯದಲ್ಲಿ ಆರ್​ಸಿಬಿ ಕಂಬ್ಯಾಕ್ ಮಾಡುವ ಹುಮ್ಮಸ್ಸಿನಲ್ಲಿದೆ.
ಇತ್ತ ಈಗಾಗಲೇ ನಾಲ್ಕು ಪಂದ್ಯಗಳನ್ನು ಆಡಿರುವ ಮುಂಬೈ ಇಂಡಿಯನ್ಸ್ ಮೂರರಲ್ಲಿ ಸೋಲನ್ನು ಕಂಡಿದೆ. ಹೀಗಾಗಿ ಎಂಐ ಕೂಡ ಗೆಲುವಿನ ಹುಡುಕಾಟದಲ್ಲಿದೆ. ಇತ್ತ ಜಸ್​ಪ್ರೀತ್ ಬುಮ್ರಾ, ಮುಂಬೈ ಇಂಡಿಯನ್ಸ್ ಸೇರಿರೋದು ಸಹಜವಾಗಿಯೇ ಆನೆಬಲ ಬಂದಂತಾಗಿದೆ.
ಇದನ್ನೂ ಓದಿ: ಹೈದ್ರಾಬಾದ್ ಟೀಮ್​ಗೆ ಸತತ 4ನೇ ಸೋಲು.. ಹ್ಯಾಟ್ರಿಕ್​ ಗೆಲುವು ಸಂಭ್ರಮಿಸಿದ ಗಿಲ್
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್