newsfirstkannada.com

ವಾಂಖೆಡೆಯಲ್ಲಿ ವಿರಾಟ್​ V/S ರೋಹಿತ್​ ಬ್ಯಾಟಲ್.. ಹಿಟ್​ ಮ್ಯಾನ್​ ಸಾಮ್ರಾಜ್ಯದಲ್ಲಿ ಕಿಂಗ್ ಕೊಹ್ಲಿ ಆರ್ಭಟ ಹೇಗಿರುತ್ತೆ?

Share :

Published April 10, 2024 at 11:26am

    ವಾಂಖೆಡೆಯಲ್ಲಿ ರೋಹಿತ್, ವಿರಾಟ್​ ರೆಕಾರ್ಡ್ಸ್​ ಏನು ಹೇಳುತ್ತವೆ..?

    ರಾಜಸ್ಥಾನ ವಿರುದ್ಧ RCB ಸೋತ್ರೂ ಕಿಂಗ್ ಕೊಹ್ಲಿ ಅಮೋಘ ಶತಕ

    ಡೆಲ್ಲಿ ವಿರುದ್ಧ ಅಬ್ಬರಿಸಿ ತಂಡಕ್ಕೆ ಗೆಲುವಿನ ಗಿಫ್ಟ್ ನೀಡಿದ ರೋಹಿತ್

ಐಪಿಎಲ್​​​​​​​​ ಸಂಗ್ರಾಮದಲ್ಲಿ ನಾಳೆ ಬಲಾಢ್ಯ ತಂಡಗಳು ತೊಡೆ ತಟ್ಟಲಿವೆ. ಮಾಜಿ ಚಾಂಪಿಯನ್​​​​​ ಮುಂಬೈಗೆ ಬಲಿಷ್ಠ ಆರ್​ಸಿಬಿ ಸವಾಲೆಸೆಯಲಿದೆ. ಈ ಬಿಗ್ ಗೇಮ್​ ಕಿಂಗ್ ಕೊಹ್ಲಿ ಹಾಗೂ ರೋಹಿತ್​​ ಶರ್ಮಾಗೆ ಪ್ರತಿಷ್ಠೆಯ ಕದನ. ವಾಂಖೆಡೆಯಲ್ಲಿ ಇಬ್ಬರೂ ಸೆನ್ಷೆಷನಲ್ ರೆಕಾರ್ಡ್ಸ್ ಹೊಂದಿದ್ದು, ಫ್ಯಾನ್ಸ್​​ಗೆ ಪೈಸಾ ವಸೂಲಿ ಟ್ರೀಟ್ ಪಕ್ಕಾ.

ಬಲಿಷ್ಠ ಆರ್​​ಸಿಬಿ ಮೊದಲ ಪಂದ್ಯ ಜಯಿಸಿ, ಬಳಿಕ ಹ್ಯಾಟ್ರಿಕ್ ಸೋಲಿನ ಅವಮಾನಕ್ಕೀಡಾಗಿದೆ. ಮುಂಬೈ ಇಂಡಿಯನ್ಸ್ ಹ್ಯಾಟ್ರಿಕ್ ಸೋಲುಂಡು ಡೆಲ್ಲಿ ವಿರುದ್ಧ ಗೆಲುವಿನ ಟ್ರ್ಯಾಕ್​​ಗೆ ಮರಳಿದೆ. ತಲಾ ಒಂದು ಗೆಲುವನ್ನ ಸಾಧಿಸಿರೋ ಉಭಯ ತಂಡಗಳು ನಾಳೆ ಐಪಿಎಲ್ ದಂಗಲ್​​ನಲ್ಲಿ ಎದುರಾಗಲಿವೆ. ಎರಡೂ ತಂಡಕ್ಕೂ ಗೆಲುವು ಬಹುಮುಖ್ಯ. ಹೀಗಾಗಿ ಬಿಗ್ ಮ್ಯಾಚ್​ ಸಾಕಷ್ಟು ಕ್ಯೂರಿಯಾಸಿಟಿ ಬೀಲ್ಡ್ ಮಾಡಿದೆ.

ಇದನ್ನೂ ಓದಿ: 75KG ವೇಟ್​ ಲಿಫ್ಟಿಂಗ್​ ಮಾಡಿದ 9 ವರ್ಷದ ಬಾಲಕಿ; ಈಕೆ ಸಾಧನೆ ಕೇಳಿದ್ರೆ ಶಾಕ್​ ಆಗ್ತೀರಾ!

ದಿಗ್ಗಜರ ಸೆನ್ಷೆಷನಲ್ ರೆಕಾಡ್ಸ್​​​..ರನ್ ಭರಾಟೆ ಫಿಕ್ಸ್​​..!

ಲೆಜೆಂಡ್ರಿ ಕಿಂಗ್ ಕೊಹ್ಲಿ ಹಾಗೂ ರೋಹಿತ್​ ಶರ್ಮಾ. ವರ್ಷದ ಬಳಿಕ ವಾಂಖೆಡೆ ಮೈದಾನದಲ್ಲಿ ಮಾಜಿ ಸೂಪರ್​​ ಸ್ಟಾರ್ಸ್​ ಪ್ಯಾಡ್ ಕಟ್ಟಿ ಕಣಕ್ಕಿಳಿಯುತ್ತಿದ್ದಾರೆ. ಮಾಜಿ ಕ್ಯಾಪ್ಟನ್​ಗಳೇ ಪಂದ್ಯದ ಸೆಂಟರ್​​ ಆಫ್ ಅಟ್ರ್ಯಾಕ್ಷನ್​​. ಯಾಕಂದ್ರೆ ಇಬ್ಬರು ಸಾಧ್ಯ ಸಾಲಿಡ್​ ಫಾರ್ಮ್​ನಲ್ಲಿದ್ದಾರೆ. ಅದ್ರಲ್ಲೂ ವಾಂಖೆಡೆ ಮೈದಾನದಲ್ಲಂತೂ ಕೊಹ್ಲಿ ಹಾಗೂ ರೋಹಿತ್ ಸೆನ್ಷೆಷನಲ್ ರೆಕಾರ್ಡ್ಸ್ ಹೊಂದಿದ್ದು, ರನ್ ಭರಾಟೆ ನಿರೀಕ್ಷಿಸಲಾಗಿದೆ. ಹೇಳಿಕೇಳಿ ವಾಂಖೆಡೆ ರೋಹಿತ್ ಕಿಂಗ್​ಡಮ್​​​​​​​​​​​​​ ನಿಜ. ಆದ್ರೆ ಹಿಟ್​​ಮ್ಯಾನ್​ ಸಾಮ್ರಾಜ್ಯದಲ್ಲಿ ಕೊಹ್ಲಿ ಕಮ್ಮಿ ಹವಾ ಏನೂ ಕಮ್ಮಿ ಇಲ್ಲ. ಅವಕಾಶ ಸಿಕ್ಕಾಗಲೆಲ್ಲಾ ವಿರಾಟ್​ ವಿರಾಜಿಸಿದ್ದಾರೆ.

ಇದನ್ನೂ ಓದಿ: ದುಬಾರಿ ರೋಲ್ಸ್​​ ರಾಯ್ಸ್​ ಕಾರ್​​ ಖರೀದಿಸಿದ ನೀತಾ ಅಂಬಾನಿ; ಅಬ್ಬಬ್ಬಾ! ಇದರ ಬೆಲೆ ಎಷ್ಟು ಗೊತ್ತಾ?

ವಾಂಖೆಡೆ ಮೈದಾನದಲ್ಲಿ ಕಿಂಗ್ ಕೊಹ್ಲಿ

ಕಿಂಗ್ ಕೊಹ್ಲಿ ವಾಂಖೆಡೆ ಮೈದಾನದಲ್ಲಿ 17 ಪಂದ್ಯಗಳನ್ನ ಆಡಿದ್ದು, 138.25ರ ಉತ್ತಮ ಸ್ಟ್ರೈಕ್​ರೇಟ್​ನಲ್ಲಿ 571 ರನ್ ಚಚ್ಚಿದ್ದಾರೆ. ವಿರಾಟ್ ಬ್ಯಾಟ್​​ನಿಂದ 5 ಅರ್ಧಶತಕಗಳು ಮೂಡಿ ಬಂದಿವೆ. ಆದ್ರೆ ಇಲ್ಲಿತನಕ ಒಂದೂ ಶತಕ ಹೊಡೆದಿಲ್ಲ. ಇನ್ನೂ ಕೊಹ್ಲಿನೇ ರೋಹಿತ್ ಅಡ್ಡಾದಲ್ಲಿ ಹೀಗೆ ಆರ್ಭಟಿಸಬೇಕಾದ್ರೆ ಹಿಟ್​​ಮ್ಯಾನ್ ಹೇಗೆಲ್ಲ ರೌದ್ರವತಾರ ತಾಳಿರ್ಬೇಕು ಅಲ್ವಾ?. ಖಂಡಿತ ರೋಹಿತ್ ವಾಂಖೆಡೆಯಲ್ಲಿ ಮ್ಯಾಸಿವ್ ರೆಕಾರ್ಡ್ಸ್ ಹೊಂದಿದ್ದಾರೆ.

ವಾಂಖೆಡೆ ಮೈದಾನದಲ್ಲಿ ರೋಹಿತ್​ ಶರ್ಮಾ

ಹೋಮ್​ಗ್ರೌಂಡ್​​​​ನಲ್ಲಿ ರೋಹಿತ್​ ಶರ್ಮಾ 75 ಪಂದ್ಯಗಳನ್ನ ಆಡಿದ್ದಾರೆ. 134.70ರ ಸ್ಟ್ರೈಕ್​ರೇಟ್​ನಲ್ಲಿ ಬರೋಬ್ಬರಿ 2,069 ರನ್ ಕೊಳ್ಳೆ ಹೊಡೆದಿದ್ದಾರೆ. ಒಂದೂ ಶತಕ ಮೂಡಿಬರದಿದ್ರೂ 15 ಹಾಫ್​​ಸೆಂಚುರಿ ಹೊಡೆದಿದ್ದಾರೆ. ರೋಹಿತ್ ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಅಬ್ಬರಿಸಿ ತಂಡಕ್ಕೆ ಗೆಲುವಿನ ಗಿಫ್ಟ್ ನೀಡಿದ್ರು. ಅತ್ತ ರಾಜಸ್ಥಾನ ವಿರುದ್ಧ ಆರ್​ಸಿಬಿ ಸೋತ್ರೂ ಕಿಂಗ್ ಕೊಹ್ಲಿ ಅಮೋಘ ಶತಕ ಸಿಡಿಸಿ ಮೆರೆದಾಡಿದ್ರು. ಹೀಗಾಗಿ ವಾಂಖೆಡೆ ಕದನದಲ್ಲಿ ಸೂಪರ್ ಸ್ಟಾರ್​ಗಳಿಂದ ಸೂಪರ್ ಡೂಪರ್​ ಆಟ ಮೂಡಿ ಬಂದ್ರೂ ಅಶ್ಚರ್ಯವೇನಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಾಂಖೆಡೆಯಲ್ಲಿ ವಿರಾಟ್​ V/S ರೋಹಿತ್​ ಬ್ಯಾಟಲ್.. ಹಿಟ್​ ಮ್ಯಾನ್​ ಸಾಮ್ರಾಜ್ಯದಲ್ಲಿ ಕಿಂಗ್ ಕೊಹ್ಲಿ ಆರ್ಭಟ ಹೇಗಿರುತ್ತೆ?

https://newsfirstlive.com/wp-content/uploads/2024/04/ROHIT_VIRAT.jpg

Load More