ಗೋವಾ ಪ್ರವಾಸೋದ್ಯಮದ ಕುಸಿತಕ್ಕೆ ಕಾರಣವಾಯ್ತಾ ಇಡ್ಲಿ, ಸಾಂಬಾರ್​? ಬಿಜೆಪಿ ಶಾಸಕರ ಶಾಕಿಂಗ್ ಹೇಳಿಕೆ

author-image
Gopal Kulkarni
Updated On
ಗೋವಾ ಪ್ರವಾಸೋದ್ಯಮದ ಕುಸಿತಕ್ಕೆ ಕಾರಣವಾಯ್ತಾ ಇಡ್ಲಿ, ಸಾಂಬಾರ್​? ಬಿಜೆಪಿ ಶಾಸಕರ ಶಾಕಿಂಗ್ ಹೇಳಿಕೆ
Advertisment
  • ಇಡ್ಲಿ ಸಾಂಬರ್​ನಿಂದ ಗೋವಾ ಪ್ರವಾಸೋದ್ಯಮ ಕುಸಿತ
  • ಬಿಜೆಪಿ ಶಾಸಕ ಮೈಕೆಲ್ ಲೋಬೊ ಗಂಭೀರ ಆರೋಪ
  • ಏಷ್ಯಾದ ಪ್ರವಾಸಿ ತಾಣಗಳಿಗೆ ಹೋಲಿಸಿದರೆ ಗೋವಾ ದುಬಾರಿ

ಬೆಂಗಳೂರಿನ ಹಲವು ಹೋಟೆಲ್‌ಗಳಲ್ಲಿ ತಯಾರಿಸುವ ಇಡ್ಲಿಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿವೆ ಎನ್ನುವ ಆಘಾತಕಾರಿ ವಿಚಾರ ಪತ್ತೆಯಾಗಿದೆ. ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಕವರ್ ಬಳಕೆ, ಇದಕ್ಕೆ ಕಾರಣವೇ ಹೊರತು, ಇಡ್ಲಿಯಿಂದ ಕ್ಯಾನ್ಸರ್ ಬರುವುದಿಲ್ಲ ಎನ್ನುವ ಸ್ಪಷ್ಟನೆ ಕೂಡ ಸಿಕ್ಕಿದೆ. ಆದರೆ ಗೋವಾದ ಬಿಜೆಪಿ ಶಾಸಕರೊಬ್ಬರು ನಮ್ಮ ರಾಜ್ಯಕ್ಕೆ ಪ್ರವಾಸಿಗರು ಕಡಿಮೆಯಾಗಲು ಇಡ್ಲಿ-ಸಾಂಬಾರ್ ಕಾರಣ ಎಂದು ದೂರಿದ್ದಾರೆ..

ಗೋವಾ, ಪ್ರವಾಸಿಗರ ಹಾಟ್​ಸ್ಪಾಟ್​​. ಪಡ್ಡೆ ಹುಡುಗರು ಜಾಲಿ ಸ್ಪಾಟ್​, ಕಡಲ ತೀರ, ಸುಂದರವಾದ ತಾಣ. ಯಾವುದೇ ಸೆಲೆಬ್ರೇಷನ್​ ಆಗಲಿ. ಗೋವಾದಲ್ಲಿ ಆಚರಣೆ ಮಾಡಲು ಪ್ರವಾಸಿಗರು ಮುಗಿಬೀಳ್ತಿದ್ರು. ಆದ್ರೆ ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಗೋವಾದ ಬೀಚ್​ಗಳು ಬಿಕೋ ಅಂತಿವೆ. ಕೋವಿಡ್​ ಬಳಿಕ ಗೋವಾದ ಪ್ರವಾಸೋದ್ಯಮ ಇಳಿಕೆಯತ್ತ ಮುಖ ಮಾಡಿದೆ. ಪ್ರವಾಸಿಗ ಸಂಖ್ಯೆ ಇಳಿಕೆಗೆ ಗೋವಾದ ಬಿಜೆಪಿ ಶಾಸಕರೊಬ್ಬರು ಕೊಟ್ಟಿರುವ ಕಾರಣ ಕೇಳಿದ್ರೆ ನಿಜಕ್ಕೂ ಶಾಕ್​ ಜೊತೆಗೆ ನಗು ಕೂಡ ಬರುತ್ತೆ.

publive-image

ಪ್ರವಾಸೋದ್ಯಮಕ್ಕೆ ಹೆಸರಾಗಿರುವ ಗೋವಾ ರಾಜ್ಯದಲ್ಲಿ ಪ್ರವಾಸಿಗರು ಕಡಿಮೆಯಾಗಿದ್ದು, ಇದಕ್ಕೆ ಪಾಪದ ಇಡ್ಲಿ - ಸಾಂಬಾರ್ ಅನ್ನು ದೂಷಿಸಲಾಗುತ್ತಿದೆ. ಬಿಜೆಪಿ ಶಾಸಕ ಮೈಕೆಲ್ ಲೋಬೊ ಮಾತನಾಡಿ, ಗೋವಾದ ಪ್ರವಾಸೋದ್ಯಮ ಉದ್ಯಮವು ಇಲ್ಲಿನ ಸ್ಥಳೀಯ ಸಂಸ್ಕೃತಿ ಮತ್ತು ಪಾಕಪದ್ಧತಿಯಲ್ಲಿ ಪ್ರದರ್ಶಿಸಲು ವಿಫಲವಾಗಿದ್ದು, ಬೀಚ್‌ಗಳಲ್ಲಿ ಇಡ್ಲಿ ಸಾಂಬಾರ್ ಮಾರಾಟ ಮಾಡುತ್ತಿರುವುದೇ ವಿದೇಶಿ ಪ್ರವಾಸಿಗರ ಕುಸಿತಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ. ನಾನು ಇಲ್ಲಿ ಇಡ್ಲಿ ಸಾಂಬಾರ್ ಅನ್ನು ವಿರೋಧಿಸುತ್ತಿಲ್ಲ. ಆದರೆ ಗೋವಾದ ಪಾಕಪದ್ಧತಿಯನ್ನು ನಾವು ಉತ್ತೇಜಿಸಬೇಕು ಎಂದು ಹೇಳಿದ್ದಾರೆ.

publive-image

ಗೋವಾದ ಬಿಜೆಪಿ ಶಾಸಕ, ಪ್ರವಾಸಿಗರ ಇಳಿಕೆಗೆ ಇಡ್ಲಿ-ಸಾಂಬರ್​ನ ದೂಷಿಸ್ತಿದ್ದಾರೆ. ಆದ್ರೆ ಗೋವಾದಲ್ಲಿ ಪ್ರವಾಸೋದ್ಯಮ ಕುಸಿತಕ್ಕೆ ದುಬಾರಿ ಕಾರಣಗಳೂ ಇವೆ.
ಏಷ್ಯಾದ ಕೆಲ ಪ್ರವಾಸಿ ತಾಣಗಳಿಗೆ ಹೋಲಿಸಿದರೆ ಗೋವಾ ಪ್ರವಾಸ ಇತ್ತೀಚಿನ ದಿನಗಳ ದುಬಾರಿ ಆಗಿದೆ. ಗೋವಾದಲ್ಲಿ ಬೀಚ್​ಗಳು ಮಾಲಿನ್ಯವಾಗಿದ್ದು ಸರಿಯಾಗಿ ಶುಚಿ ಆಗಿಲ್ಲ. ಇನ್ನು ಪ್ರವಾಸಿಗರನ್ನು ಟ್ರಾಪ್ ಮಾಡಲಾಗ್ತಿದ್ದು, ಟ್ಯಾಕ್ಸಿ ಸೇವೆಗೆ ಹೆಚ್ಚಿನ ಹಣ ವಸೂಲಿ ಮಾಡ್ತಿದ್ದಾರೆ. ಇನ್ನೂ ಗೋವಾದಲ್ಲಿ ಕ್ಲಬ್‌ ಪ್ರವೇಶಕ್ಕೆ ದುಬಾರಿ, ಹೊಟೇಲ್, ಹೋಮ್​ ಸ್ಟೇ, ರೆಸಾರ್ಟ್ ಎಲ್ಲಾ ಕಡೆಗಳಲ್ಲೂ ಹಚ್ಚಿನ ಹಣದ ಮೂಲಕ ಪ್ರವಾಸಿಗರ ಲೂಟಿ ಆಗ್ತಿದೆ.

ಇದನ್ನೂ ಓದಿ:ಫೇಕ್​ ಮಾರ್ಕ್ಸ್ ಕಿಂಗ್‌ಪಿನ್‌ ಅರೆಸ್ಟ್​.. 522 ಅಂಕಪಟ್ಟಿ, 122 ಸೀಲ್‌, 85 ಅಕೌಂಟ್ ಸೇರಿ ಇತರೆ ವಸ್ತುಗಳು ಸೀಜ್

ರಾಜ್ಯದಲ್ಲಿ ಕಸ ಸಂಗ್ರಹಣೆ, ಬೀದಿ ನಾಯಿಗಳು ಮತ್ತು ಟ್ಯಾಕ್ಸಿ ನಿರ್ವಾಹಕರ ಸಮಸ್ಯೆಗಳನ್ನು ಬಗೆಹರಿಸದೇ ಇದ್ದರೆ ಗೋವಾದ ಪ್ರವಾಸೋದ್ಯಮಕ್ಕೆ ಕರಾಳ ದಿನಗಳು ಕಾದಿವೆ ಎಂದು ಬಿಜೆಪಿ ಶಾಸಕ ಲೋಬೊ ಎಚ್ಚರಿಸಿದ್ದಾರೆ. ಅದೇನೆ ಇರಲಿ. ಉತ್ತಮ ಸೇವೆ.. ಆಫರ್​ಗಳ ಮೂಲಕ ಪ್ರವಾಸಿಗರನ್ನು ಸೆಳೆಯುವ ಬದಲು.. ಇಡ್ಲಿ ಸಾಂಬರ್​, ವಡಾಪಾವ್​ ಕಾರಣ ಅನ್ನೋದು ಎಷ್ಟು ಸರಿ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment