Advertisment

ಮೈಕ್ರೋ ಫೈನಾನ್ಸ್​ಗಳ ನಿತ್ಯ ಕಿರುಕುಳ; ಬೇಸತ್ತು ಊರು ಬಿಡುತ್ತಿರುವ ಗ್ರಾಮಸ್ಥರು

author-image
Gopal Kulkarni
Updated On
ಮೈಕ್ರೋ ಫೈನಾನ್ಸ್​ಗಳ ನಿತ್ಯ ಕಿರುಕುಳ; ಬೇಸತ್ತು ಊರು ಬಿಡುತ್ತಿರುವ ಗ್ರಾಮಸ್ಥರು
Advertisment
  • ಬಲವಂತವಾಗಿ ಸಾಲ ಕೊಡೊದು ಆಮೇಲೆ ಜೀವ ತಿನ್ನೋದು
  • ಗ್ರಾಮ ತೊರೆದು ತಲೆಮರೆಸಿಕೊಂಡು ಹೋಗುತ್ತಿರುವ ಕಾರ್ಮಿಕರು
  • ಗ್ರಾಮದಲ್ಲಿ ಇರೋದು ಕೇವಲ ವಯೋವೃದ್ಧರು, ಪುಟ್ಟ ಮಕ್ಕಳು!

ಮೈಕ್ರೋ ಫೈನಾನ್ಸ್​ಗಳ ಕಿರುಕುಳ ತಾಳಲಾರದೆ ಇತ್ತೀಚೆಗೆ ಚಾಮರಾಜನಗರ, ಮೈಸೂರು ಜಿಲ್ಲೆಯ ನೂರಾರು ಕುಟುಂಬಗಳು ಗ್ರಾಮ ತೊರೆದಿದ್ದ ಘಟನೆ ಬೆಳಕಿಗೆ ಬಂದಿತ್ತು. ಈ ಮೈಕ್ರೋ ಫೈನಾನ್ಸ್ ಕಾಟ ಈಗ ಹಾವೇರಿಗೂ ಕಾಲಿಟ್ಟಿದ್ದು, ಅನೇಕರನ್ನ ಊರು ಬಿಡುವಂತೆ ಮಾಡಿದೆ.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಹೆಚ್ಚಾಗಿದೆ. ಎಲ್ಲೆಲ್ಲೂ ಸಾಲಕೊಟ್ಟು ಜನರನ್ನ ಫೈನಾನ್ಸ್ ಕಂಪನಿಗಳು ಶೂಲಕ್ಕೆ ಏರಿಸುತ್ತಿವೆ. ಇದೀಗ ಹಾವೇರಿಯಲ್ಲೂ ಮೈಕ್ರೋ ಫೈನಾನ್ಸ್‌ನ ಕಿರಿಕಿರಿ ಶುರುವಾಗಿದೆ.
ಮೈಕ್ರೋ ಫೈನಾನ್ಸ್ ಹಾವಳಿಗೆ ಊರು ಬಿಡ್ತಿರುವ ಜನರು.

Advertisment

ಇದನ್ನೂ ಓದಿ:ಮೆಟ್ರೋದಲ್ಲಿ ಜೀವಂತ ಹೃದಯ ಸಾಗಾಟ.. ಈ ಕಾರ್ಯಾಚರಣೆಯಲ್ಲಿ ಕನ್ನಡಿಗನ ವಿಶೇಷ ಪಾತ್ರ..

ಮೈಕ್ರೋ ಫೈನಾನ್ಸ್, ಇವರೇ ಬರೋದು. ನಾವ್​ ಸಾಲ ಕೊಡ್ತೀವಿ ಅಂತಾ ಬಲವಂತವಾಗಿ ಸಾಲ ಕೊಡೋದು. ಮತ್ತೆ ಸಾಲವನ್ನ ಹಿಂದಿರುಗಿಸಿ ಅಂತಾ ರೌಡಿಗಳಂತೆ ವರ್ತಿಸೋದು.. ಪಾಪ ಜನ ಇವರ ಕಾಟ ತಾಳಲಾರದೆ ಊರು ಬಿಡೋದು. ಇದು ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ನಡೀತಿರೋ ಪ್ರಕರಣ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಗುಡ್ಡದಬೇವಿನಹಳ್ಳಿ ಗ್ರಾಮದ ಜನರು ತಮ್ಮ ಜೀವನ ನಿರ್ವಹಣೆಗೆ ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಪಡೆದಿದ್ರು. ಹೀಗೆ ಸಾಲ ಪಡೆದವರು ಏನೋ ಸಮಸ್ಯೆ ಅಂತ ತೀರಿಸೋದು ಕೊಂಚ ಲೇಟ್‌ ಮಾಡಿದ್ದಾರೆ. ಇಷ್ಟಕ್ಕೆ ಸಾಲ ಕೊಟ್ಟ ಕಂಪನಿ ಅವರ ಬೆನ್ನುಬಿದ್ದು ಚಿತ್ರಹಿಂಸೆ ನೀಡಿದೆ.

ಇದನ್ನೂ ಓದಿ:ಗರ್ಭ ಧರಿಸಿದ ಹಸುವಿನ ತಲೆ ಕಡಿದು ವಿಕೃತಿ.. ರಾಜ್ಯದಲ್ಲಿ ಮತ್ತೊಂದು ಗೋಮಾತೆ ಮೇಲೆ ದೌರ್ಜನ್ಯ

Advertisment

ಮೈಕ್ರೋ ಫೈನಾನ್ಸ್‌ಗಳ ಕಾಟಕ್ಕೆ ಇಡೀ ಊರಲ್ಲಿದ್ದ ಯುವಕರು ಗ್ರಾಮಬಿಟ್ಟು ಎಸ್ಕೇಪ್ ಆಗಿದ್ದಾರೆ. ಕೂಲಿನಾಲಿ ಜೀವನ ಸಾಗಿಸ್ತಿದ್ದವರೀಗ ಸಾಲ ಕೊಟ್ಟವರ ಕಾಟ ತಾಳದೇ ಊರು ಬಿಟ್ಟಿದ್ದಾರೆ. ಈಗ ಊರಲ್ಲಿ ವಯೋವೃದ್ದರು ಮತ್ತು ಪುಟ್ಟಮಕ್ಕಳನ್ನ ಬಿಟ್ಟು ಬೇರೆ ಯಾರೂ ಕಾಣದಾಗಿದೆ. ಜಾನುವಾರುಗಳಿಗೆ ಮೇವು, ನೀರು ಕುಡಿಸುವರು ದಿಕ್ಕಿಲ್ಲಾ, ಸಾಲ ಕೊಡ್ತಾರೆ. ಕಂತು ಕಟ್ಟೋದು ಲೇಟಾದ್ರೆ ಮಾನ ಮರ್ಯಾದೆ ಹರಾಜ್ ಹಾಕ್ತಾರೆ ಅಂತಾರೆ ಊರಿನ ಗ್ರಾಮಸ್ಥರು.

publive-image

ಸಾಲಕ್ಕೆ ಇಡೀ ಊರು ಖಾಲಿ ಆಗಿದೆ. ಸಾಲದ ಹೊಡೆತಕ್ಕೆ ಮಕ್ಕಳ ವಿದ್ಯಾಭ್ಯಾಸವೇ ಮೊಟಕಾಗಿದೆ. ಕೂಲಿ ನಾಲಿ ಮಾಡಿ ಕಟ್ಟೋದಕ್ಕೂ ಆಗದೆ ಜನ ನರಳಾಟದಲ್ಲಿದ್ದಾರೆ. ಇಂತಹ ಮೈಕ್ರೋ ಫೈನಾನ್ಸ್ ದಂಧೆಗೆ ಸರ್ಕಾರ ಮೂಗುದಾರ ಹಾಕುವಂತೆ ಬಡ ಜನರ ಆಗ್ರಹವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment