ರಾಜ್ಯದಲ್ಲಿ ಮಿತಿ ಮೀರಿದ ಮೈಕ್ರೋ ಫೈನಾನ್ಸ್​ ಹಾವಳಿ.. ಇದು ಹೇಗೆ ಕಾರ್ಯ ನಿರ್ವಹಿಸುತ್ತೆ? ಸಾಲ-ಬಡ್ಡಿ ಎಷ್ಟಿರುತ್ತೆ?

author-image
admin
Updated On
ರಾಜ್ಯದಲ್ಲಿ ಮಿತಿ ಮೀರಿದ ಮೈಕ್ರೋ ಫೈನಾನ್ಸ್​ ಹಾವಳಿ.. ಇದು ಹೇಗೆ ಕಾರ್ಯ ನಿರ್ವಹಿಸುತ್ತೆ? ಸಾಲ-ಬಡ್ಡಿ ಎಷ್ಟಿರುತ್ತೆ?
Advertisment
  • ಜಿಲ್ಲೆ, ಜಿಲ್ಲೆಗಳಲ್ಲೂ ಮೈಕ್ರೋ ಫೈನಾನ್ಸ್ ಸಾಲದ ಸಂತ್ರಸ್ತರು
  • ಪೋಸ್ಟ್ ಮೂಲಕ ತಾಳಿ ಮುಖ್ಯಮಂತ್ರಿಗೆ ಕಳುಹಿಸಿದ ಮಹಿಳೆ
  • ಮನೆ ಮುಂದೆ ಬೆಳಗ್ಗೆ, ಸಂಜೆ ಬಂದು ಕಿರುಕುಳ ಕೊಡುತ್ತಾರೆ

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಾಲ, ಬಡ್ಡಿಯ ಹಾವಳಿ ತಾಳಲಾರದಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿದವರು ಬಡ್ಡಿಯ ಕಿರುಕುಳ ತಾಳಲಾರದೇ ಊರೇ ಬಿಟ್ಟು ಹೋಗುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಾಟಕ್ಕೆ ಕೆಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಜಿಲ್ಲೆ, ಜಿಲ್ಲೆಗಳಲ್ಲೂ ಮೈಕ್ರೋ ಫೈನಾನ್ಸ್ ಸಾಲದ ಸಂತ್ರಸ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

publive-image

‘ಮಾಂಗಲ್ಯ ಉಳಿಸಿ’ ಸಿಎಂ ಸಾರ್!
ಈ ಫೋಟೋ ಒಮ್ಮೆ ನೋಡಿದ್ರೆ ಕರುನಾಡಿಗೆ ಎಂತಹ ಗತಿ ಬಂತಪ್ಪಾ ಅನ್ನಿಸುತ್ತೆ. ಕೈಯಲ್ಲಿ ಮಾಂಗಲ್ಯ ಸರ ಹಿಡಿದಿರುವ ಮಹಿಳೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶೇಷ ಮನವಿ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ಮಹಿಳೆಯರು ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮಾಂಗಲ್ಯ ಸರವನ್ನು ಸಿಎಂಗೆ ಕಳುಹಿಸಲು ಮುಂದಾಗಿದ್ದಾರೆ. ಅಂಚೆ ಕಚೇರಿಯಲ್ಲಿ ಪೋಸ್ಟ್ ಬಾಕ್ಸ್‌ಗೆ ತಾಳಿ ಹಾಕಿ ರಾಣೆಬೆನ್ನೂರಿನ ಮಹಿಳೆಯೊಬ್ಬರು ಮುಖ್ಯಮಂತ್ರಿಗೆ ಕಳುಹಿಸಿದ್ದಾರೆ.

publive-image

ಹಾವೇರಿ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಕಾಟ ತಡೆಯಲು ಆಗುತ್ತಿಲ್ಲ ಅಂತ ಹೆಣ್ಮಕ್ಕಳು ಆಕ್ರೋಶ ವ್ಯಕ್ತಪಡಿಸಿದ್ದು, ಮಾಂಗಲ್ಯ ಸರ ಉಳಿಸಿ ಅಭಿಯಾನ ಆರಂಭಿಸಿದ್ದಾರೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮನೆ ಮುಂದೆ ಬೆಳಗ್ಗೆ, ಸಂಜೆ ಬಂದು ಕಿರುಕುಳ ಕೊಡ್ತಾರೆ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ, ಡಿಸಿ, ಎಸ್​ಪಿ ಕಚೇರಿಗೆ ಮನವಿ ಮಾಡಿದ್ದಾರೆ. ನಮಗೆ ಸಾಲ ಮರುಪಾವತಿಗೆ ಕಾಲಾವಕಾಶ ಕೊಡಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕೇಳಿ ಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ಶ್ರೀರಾಮುಲು ರಾಜೀನಾಮೆ ಹೇಳಿಕೆಗೆ ಡಿಕೆಶಿ ನಂಟು? ಜನಾರ್ದನ ರೆಡ್ಡಿ ಸ್ಫೋಟಕ ಹೇಳಿಕೆ 

ರಾಣೆಬೆನ್ನೂರು ನಗರದಲ್ಲಿ ಇಂದು ನ್ಯೂಸ್ ​​​ಫಸ್ಟ್ ಕ್ಯಾಮೆರಾ ಕಂಡು ಫೈನಾನ್ಸ್ ಸಿಬ್ಬಂದಿ ಓಡಿದ್ದು ಹೈಡ್ರಾಮಾವೇ ನಡೆದಿದೆ. ಇದೇ ವೇಳೆ ನ್ಯೂ ಅಂಬಿಕಾ ಸಾವಜಿ ಹೋಟೆಲ್​ ನಡೆಸ್ತಿದ್ದ ಕುಟುಂಬ ನ್ಯೂಸ್ ​​ಫಸ್ಟ್​ ಮುಂದೆ ಕಣ್ಣೀರು ಹಾಕಿದ್ದಾರೆ. ಮುಂದಿನ ತಿಂಗಳು ಕಟ್ಟುತ್ತೀವಿ ಅಂದ್ರೂ ಕೇಳದೇ ಟಾರ್ಚರ್ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

publive-image

ಹೇಗೆ ಕಾರ್ಯನಿರ್ವಹಿಸುತ್ತೆ ಫೈನಾನ್ಸ್​?
RBI ನಿಯಮದಡಿ ಮೈಕ್ರೋ ಫೈನಾನ್ಸ್​ಗಳ ಕಾರ್ಯ
NBFC-MFIs ಕಾಯ್ದೆ 1934 ಅಡಿಯಲ್ಲಿ ಕಾರ್ಯ ನಿರ್ವಹಣೆ
ಸಾಲದ ಮಿತಿ & ಬಡ್ಡಿದರದ ಮಿತಿಯನ್ನ ನಿಗದಿ ಪಡಿಸಲಾಗಿದೆ
ಫೇರ್ ಪ್ರಾಕ್ಟೀಸ್, ಗ್ರಾಹಕರ ರಕ್ಷಣೆಯ ಬಗ್ಗೆ ನಿಯಮಗಳಿವೆ
ಕಂಪನೀಸ್ ಆ್ಯಕ್ಟ್ ಸೆ.8 ಅಡಿಯಲ್ಲಿ ಫೈನಾನ್ಸ್ ರಿಜಿಸ್ಟರ್ ಆಗುತ್ತೆ
ಮೈಕ್ರೋ ಫೈನಾನ್ಸ್ 24%-27%ಗಿಂತ ಹೆಚ್ಚು ಬಡ್ಡಿ ಪಡೀಬಾರದು
ಸ್ಥಳೀಯ ಮಾರುಕಟ್ಟೆ & ಆರ್ಥಿಕ ಪರಿಸ್ಥಿತಿ ಆಧಾರದ ಮೇಲೆ ನಿಗದಿ
MFISಗೆ ಅನುದಾನದ ವೆಚ್ಚ, ಮಾರ್ಜಿನ್ ಕ್ಯಾಪ್ ನಿಗದಿ ಅಧಿಕಾರ
ಒಟ್ಟು ಸಾಲದ 12% ಮಾರ್ಜಿನ್ ಕ್ಯಾಪ್ ನಿಗದಿ ಮಾಡಬಹುದು
ಚಿಕ್ಕ ಮೈಕ್ರೋ ಫೈನಾನ್ಸ್ ಮಾರ್ಜಿನ್ ಕ್ಯಾಪ್ 10% ಮಾಡಬಹುದು
ಫೈನಾನ್ಸ್ ಕಂಪನಿಗಳು ಗ್ರಾಹಕರಿಗೆ ಪೂರ್ವ ಮಾಹಿತಿ ನೀಡಬೇಕು
ಬಡ್ಡಿಯದರ, ದಂಡದ ಮೊತ್ತ, ಬಡ್ಡಿದರ ಬದಲಾವಣೆಗಳ ಮಾಹಿತಿ
ಫೈನಾನ್ಸ್​ಗಳು ನಿಯಮ ಮೀರಿದ್ರೆ ದೂರು ದಾಖಲಿಸಲು ಅವಕಾಶ
ಜಿಲ್ಲಾ ಮಟ್ಟದ ಮಾನಿಟರಿಂಗ್ ಕಮಿಟಿಗೆ ದೂರು ನೀಡಬಹುದು
ಅಥವಾ RBIಗೆ ನೇರವಾಗಿಯೇ ಹೋಗಿ ದೂರು ನೀಡಬಹುದು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment