/newsfirstlive-kannada/media/post_attachments/wp-content/uploads/2024/07/Microsoft-Windows-3.jpg)
ವಿಂಡೋಸ್​ 10, ಮೈಕ್ರೋಸಾಫ್ಟ್​ ಅಭಿವೃದ್ಧಿ ಪಡಿಸಿರುವ ಹೊಸ ಸಾಫ್ಟ್​ವೇರ್ ಈಗ ಜಾಗತಿಕವಾಗಿ ದೊಡ್ಡ ಸಮಸ್ಯೆಯಾಗಿ ಕಾಡಲು ಆರಂಭಿಸಿದೆ. ವಿಂಡೋಸ್ 10 ಬಳಕೆದಾರರು ಅದು ನೀಡುತ್ತಿರುವ ಹೊಸ ಸಮಸ್ಯೆಗೆ ಹೈರಾಣಾಗಿ ಹೋಗಿದ್ದಾರೆ. ವಿಶ್ವದ ಹಲವು ಕಡೆ ಬಿಎಸ್​ಒಡಿ ಅಂದ್ರೆ ಬ್ಲೂ ಸ್ಕ್ರೀನ್ ಆಪ್ ಡೆತ್ ಅನ್ನೋ ಸಮಸ್ಯೆಯೊಂದು ಸೃಷ್ಟಿಯಾಗಿದೆ.
ವಿಂಡೋಸ್ 10 ಸಾಫ್ಟ್​ವೇರ್ ಅಳವಡಿಸಿಕೊಂಡ ಜಗತ್ತಿನ ಅನೇಕ ಕಂಪ್ಯೂಟರ್​ಗಳಲ್ಲಿ ಈ ಸಮಸ್ಯೆಯೊಂದು ಕಾಡುತ್ತಿದೆ. ವಿಶ್ವಾದ್ಯಂತ ಲಕ್ಷ, ಲಕ್ಷ ಜನರು ಈ ಸಮಸ್ಯೆಯಿಂದಾಗಿ ಹೈರಾಣಾಗಿದ್ದಾರೆ.. ಅಸಲಿಗೆ ಏನಿದು ಬಿಎಸ್​ಓಡಿ ಅಂತ ನೋಡಿದ್ರೆ, ವಿಂಡೋಸ್ 10 ಅಳವಡಿಸಿಕೊಂಡ ಕಂಪ್ಯೂಟರ್​ಗಳು ಸಾಮೂಹಿಕವಾಗಿ ಸ್ಟ್ರೈಕ್​ ಆಗುತ್ತಿವೆ. ನೀಲಿ ತೆರೆಯೊಂದು ಕಂಪ್ಯೂಟರ್ ಸ್ಕ್ರೀನ್ ಮೇಲೆ ಪ್ರತ್ಯಕ್ಷವಾಗಿ ಹಲವು ಗಂಟೆಗಳ ಕಾಲ ಕಂಪ್ಯೂಟರ್ ಬಳಕೆದಾರರನ್ನು ಪೀಡಿಸುತ್ತಿದೆ. ಇದು ಕೇವಲ ಜನರಿಗೆ ಮಾತ್ರವಲ್ಲ ವಿಶ್ವಾದ್ಯಂತ ಹಲವು ಕಂಪನಿಗಳಲ್ಲೂ ಈ ಸಮಸ್ಯೆ ಶುರುವಾಗಿದೆ.
ವಿಮಾನ ಹಾರಾಟಗಳಲ್ಲಿ ತೊಂದರೆ: ಶೀಘ್ರದಲ್ಲಿಯೇ ಸಮಸ್ಯೆಗೆ ಪರಿಹಾರ..?
/newsfirstlive-kannada/media/post_attachments/wp-content/uploads/2024/07/Capture.png)
ಏರ್​ಪೋರ್ಟ್​ಗಳಲ್ಲಿ ಈ ಬಿಎಸ್​ಓಡಿ ಯಿಂದಾಗಿ ವಿಮಾನ ಹಾರಾಟಗಳ ನಿರ್ವಹಣೆಗೆ ತೊಂದರೆಯಾಗಿ ಸರ್ಕಾರಿ ಕಚೇರಿಗಳು, ಖಾಸಗಿ ಕಂಪನಿಗಳು ಯಾವೆಲ್ಲಾ ವಿಂಡೋಸ್ 10 ಅಳವಡಿಸಿಕೊಂಡಿವೆಯೋ ಅವೆಲ್ಲವೂ ಸಾಮೂಹಿಕವಾಗಿ ಇಂತಹದೊಂದು ತೊಂದರೆಯನ್ನು ಅನುಭವಿಸುತ್ತಿವೆ. ಈ ಒಂದು ಸಮಸ್ಯೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟು ಹಾಕಿದ್ದು, ಸಾಫ್ಟ್​ವೇರ್​ನಿಂದ ತೊಂದರೆ ಅನುಭವಿಸಿದವರೆಲ್ಲಾ, ಕಂಪ್ಯೂಟರ್ ಡಿಸ್ಪ್ಲೇಗಳ ಫೋಟೋ ತೆಗೆದು ಪೋಸ್ಟ್ ಮಾಡಿ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ದೆಹಲಿ ಏರ್‌ಪೋರ್ಟ್‌ನಲ್ಲೂ ವಿಮಾನ ಸಂಚಾರ ಸ್ಥಗಿತವಾಗಿದ್ದು, ವಿಸ್ತಾರ, ಇಂಡಿಗೋ ಏರ್‌ಲೈನ್ಸ್ ಸಿಬ್ಬಂದಿ ಕೈಯಲ್ಲಿ ಬರೆದ ಬೋರ್ಡಿಂಗ್ ಪಾಸ್‌ಗಳನ್ನು ನೀಡುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/07/Microsoft-Windows-1.jpg)
ವಿಂಡೋಸ್ 10 ಸರಿಯಾಗಿ ಲೋಡ್ ಆಗುತ್ತಿಲ್ಲ. ಪದೇ ಪದೇ ಕಂಪ್ಯೂಟರ್​ಗಳನ್ನ ರಿಸ್ಟಾರ್ಟ್​ ಹಾಗೂ ಶಟ್​ ಡೌನ್ ಮಾಡಿ ಮತ್ತೆ ಆನ್ ಮಾಡುವ ಅನಿವಾರ್ಯತೆಗಳು ಸೃಷ್ಟಿಯಾಗಿವೆ. ಬ್ಯಾಕ್ ಬಗ್, ಬ್ಲ್ಯೂ ಸ್ಕ್ರೀನ್​ನಂತಹ ಎರರ್​ ಸಮಸ್ಯೆಗಳು ಫಾಲ್ಕಾನ್ ಸೆನ್ಸಾರ್​ಗೆ ಸಂಬಂಧಿಸಿದ ಸಮಸ್ಯೆಗಳಾಗಿವೆ, ಸದ್ಯದಲ್ಲಿಯೇ ನಮ್ಮ ಎಂಜನೀಯರಿಂಗ್ ಟೀಮ್ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಿದೆ ಎಂದು ಮೈಕ್ರೋಸಾಫ್ಟ್​ ಕಂಪನಿ ಹೇಳಿದೆ.
ಈ ಹಿಂದೆಯೂ ಹೀಗೆ ಸಮಸ್ಯೆ ಸೃಷ್ಟಿಸಿತ್ತು ವಿಂಡೋಸ್ 10
ಕಳೆದ ನಾಲ್ಕೈದು ವರ್ಷಗಳ ಹಿಂದೆಯೂ ಕೂಡ ಇಂತಹದೊಂದು ಸಮಸ್ಯೆಯು ವಿಂಡೋ 10ನಲ್ಲಿ ಕಂಡು ಬಂದಿತ್ತು. ಇದಕ್ಕೆ ಅಸಲಿ ಕಾರಣ ಏನು ಅನ್ನೋದು ಇನ್ನೂ ಕೂಡ ತಿಳಿದು ಬಂದಿಲ್ಲ. ಅದನ್ನು ಪರಿಣಿತರು ಸದ್ಯದಲ್ಲಿಯೇ ಕಂಡು ಹಿಡಿದು, ಆಗಿರುವ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಲಿದ್ದಾರೆ ಅಂತ ಎಐ ಹಾಗೂ ಟೆಕ್​ ಎಕ್ಸಪರ್ಟ್​ ಅಂಕುಶ್ ಸಬ್ಹರ್​ವಾಲಾ ಹೇಳಿದ್ದಾರೆ.
ಭಾರತೀಯ ವಿಮಾನಯಾನ ಕಂಪನಿಗಳಿಗೂ ತೊಂದರೆ
ಆದರೂ ಕೂಡ ವಿಶ್ವದ ಅನೇಕ ಸಂಸ್ಥೆಗಳು ಅದರಲ್ಲಿಯೂ ಪ್ರಮುಖವಾಗಿ ವಿಮಾನ ಕಂಪನಿಗಳಿಗೆ ಈ ಬ್ಲ್ಯೂ ಸ್ಕ್ರೀನ್ ಆಫ್ ಡೆತ್ ಅನೇಕ ಸಂಕಷ್ಟಗಳನ್ನು ತಂದಿಟ್ಟಿದೆ. ಭಾರತದ ಪ್ರಮುಖ ಏರ್​ಲೈನ್ಸ್​ ಕಂಪನಿಗಳಲ್ಲೊಂದಾದ ಸ್ಪೈಸ್ ಜೆಟ್​ ಸಂಸ್ಥೆಯೂ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು ವಿಂಡೋಸ್ 10 ಕ್ರೌಡ್​ಸ್ಟ್ರೈಕ್​ ಬಗ್ಗೆ ಹೇಳಿಕೊಂಡಿದೆ. ಸದ್ಯ ನಾವು ಅನೇಕ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ವಿಮಾನಗಳ ಹಾರಾಟದ ಬಗ್ಗೆ ತಿಳಿಸಲು ಅನೇಕ ತೊಂದರೆಗಳು ಉಂಟಾಗುತ್ತಿದೆ, ಈ ಬಗ್ಗೆ ನಮ್ಮ ಟೆಕ್ನಿಕಲ್ ಟೀಮ್ ಕಾರ್ಯಪ್ರವೃತ್ತವಾಗಿದ್ದು, ಶೀಘ್ರದಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಲಿದೆ ಎಂದು ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ತನ್ನ ಎಕ್ಸ್​ ಖಾತೆಯಲ್ಲಿ ಹೇಳಿಕೊಂಡಿದೆ. ಅಕಾಸಾ ಏರ್ ಕೂಡ ಇದೇ ಮಾದರಿಯಲ್ಲಿಯೇ ತನ್ನ ಸಮಸ್ಯೆಗಳನ್ನು ಹೇಳಿಕೊಂಡಿದೆ, ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಆನ್​ಲೈನ್ ಸೇವೆಗಳಲ್ಲಿ ಕೊಂಚ ಸಮಸ್ಯೆಯುಂಟಾಗಿದೆ, ಹೀಗಾಗಿ ಪ್ರಯಾಣಿಕರು ದಯವಿಟ್ಟು ಸಹಕರಿಸಬೇಕು ಎಂದು ಹೇಳಿದೆ.
ಇದನ್ನೂ ಓದಿ:ಸಂಘ, ಮೋದಿ ಪರಿ‘ವಾರ್​​’.. ಬಿಜೆಪಿ, RSS ಮಧ್ಯೆ ಅಸಲಿಗೆ ಆಗಿದ್ದೇನು? ಪಿಕ್ಚರ್ ಅಭಿ ಬಾಕಿ ಹೈ!
ಆರಂಭಿಕ ಮಾಹಿತಿಯ ಪ್ರಕಾರ, ವಿಂಡೋಸ್ 10 ಸಾಫ್ಟ್​ವೇರ್ ಸದ್ಯ ಅಪ್​ಡೇಟ್ ಮಾಡಲಾಗುತ್ತಿದೆ. ಹೀಗಾಗಿಯೇ ಇಂತಹದೊಂದು ತಾಂತ್ರಿಕ ಸಮಸ್ಯೆಗಳು ಸೃಷ್ಟಿಯಾಗಿವೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಸಮಸ್ಯೆಯ ಗಂಭೀರತೆಯನ್ನು ಅರಿತಿರುವ ಮೈಕ್ರೋಸಾಫ್ಟ್ ಸಂಸ್ಥೆ ಶೀಘ್ರ ಪರಿಹಾರಕ್ಕೆ ಮುಂದಾಗಿದೆ. ಆಗಿರುವ ಸಮಸ್ಯೆಯನ್ನು ಸಾಧ್ಯವಾದಷ್ಟು ಬೇಗ ಪರಿಹರಿಸುವುದಾಗಿ ಸಂಸ್ಥೆ ಭರವಸೆಯನ್ನು ಕೊಟ್ಟಿದೆ. ಅದು ಅಲ್ಲದೇ ಈ ಜಾಗತಿಕ ಸಮಸ್ಯೆಗೆ ಕಾರಣವಾಗಿದ್ದು ಒಂದು ಬಗ್ ಹೀಗಾಗಿ ಅದನ್ನು ನಿವಾರಿಸುವತ್ತ ನಮ್ಮ ತಾಂತ್ರಿಕಪಡೆ ನಿರತವಾಗಿದೆ ಎಂದೂ ಕೂಡ ಭರವಸೆಯನ್ನು ನೀಡಲಾಗಿದೆ.
ಆಮೇಲೆ ಈ ರೀತಿಯ ಸಮಸ್ಯೆಗಳು ಆಗಾಗ ಮರುಕಳಿಸುತ್ತಲೇ ಇರುತ್ತವೆ ಅದು ಮೈಕ್ರೋಸಾಫ್ಟ್​ಗೆ ಸಂಬಂಧಿಸಿದ ಸಾಫ್ಟ್‌ವೇರ್​ಗಳೇ ಇರಲಿ ಅಥವಾ ಬೇರೆಯದ್ದೇ ಸಾಫ್ಟ್​ವೇರ್​ಗಳಿರಲಿ, ವರ್ಷದಲ್ಲಿ ಒಂದೆರೆಡು ಬಾರಿ ಈ ರೀತಿಯ ಸಮಸ್ಯೆಗಳನ್ನು ಎದುರಿಸುವ ಅನಿವಾರ್ಯತೆ ಎಲ್ಲ ಸಾಫ್ಟ್​ವೇರ್​ ಕಂಪನಿಗಳಿಗೂ ಒದಗಿ ಬರುತ್ತದೆ. ಜಾಗತಿಕವಾಗಿ ಇಂತಹದೊಂದು ಸಮಸ್ಯೆಗಳು ಆಗಾಗ ಎದುರುಗಾತ್ತವೆ. ಹೀಗಾಗಿ ಅಂತಹ ಟೆಕ್ ಕಂಪನಿಗಳು ಆಗಿರುವ ಸಮಸ್ಯೆಯನ್ನು ಬಗೆಹರಿಸಲು ಕೆಲವೊಂದಿಷ್ಟು ಸಮಯಗಳನ್ನು ತೆಗೆದುಕೊಳ್ಳುತ್ತವೆ. ಕನಿಷ್ಠ ಮೂರರಿಂದ ನಾಲ್ಕು ತಾಸುಗಳ ಮಟ್ಟಿಗೆ ಈ ಬ್ಲ್ಯೂ ಸ್ಕ್ರೀನ್ ಆಫ್​ ಡೆತ್ ಅನ್ನೋ ಸಮಸ್ಯೆಯನ್ನು ಎದುರಿಸುವುದು ಅನಿವಾರ್ಯ ಎಂದೇ ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us