/newsfirstlive-kannada/media/post_attachments/wp-content/uploads/2024/08/ISREAL.jpg)
ಯುದ್ಧದಲ್ಲೇ ಮುಳುಗಿರುವ ಇಸ್ರೇಲ್ಗೆ ಮತ್ತಷ್ಟು ಭಿಕ್ಕಟ್ಟಿನ ಸ್ಥಿತಿ ನಿರ್ಮಾಣ ಆಗಿದೆ. ಇದೀಗ ತನ್ನ ಭೂಪ್ರದೇಶದ ಹಲವು ಭಾಗಗಳಲ್ಲಿ ಯುದ್ಧದ ಸಂದಿಗ್ಧತೆ ಎದುರಿಸುವಂತಾಗಿದೆ. ಒಂದ್ಕಡೆ ಗಾಜಾ, ಇನ್ನೊಂದು ಕಡೆ ರಫಾದಲ್ಲಿ ಹಮಾಸ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದೆ. ಇದೀಗ ಲೆಬನಾನ್ ಗಡಿಯಲ್ಲಿ ಹೆಜ್ಬೊಲ್ಲಾದೊಂದಿಗೆ (Hezbollah) ಸಂಘರ್ಷಕ್ಕೆ ಇಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.
ನಿನ್ನೆ ಸಂಜೆ ಲೆಬನಾನಿನ ಶಿಯಾ ಇಸ್ಲಾಮಿಸ್ಟ್ ಪೊಲಿಟಿಕಲ್ ಪಾರ್ಟಿ ಮತ್ತು ಉಗ್ರರ ಗುಂಪು ಹೆಜ್ಬುಲ್ಲಾ, ಉತ್ತರ ಇಸ್ರೇಲ್ ಮೇಲೆ ರಾಕೆಟ್ ದಾಳಿ ಮಾಡಿದೆ. ದಾಳಿಯ ಬಗ್ಗೆ ಮೊದಲೇ ಅರಿತಿದ್ದ ಇಸ್ರೇಲ್, ಹೆಜ್ಬೊಲ್ಲಾಗೆ ದಿಟ್ಟ ಉತ್ತರ ನೀಡಿದೆ ಎನ್ನಲಾಗಿದ್ದು, ರಾಕೆಟ್ಗಳನ್ನು ಮಧ್ಯದಲ್ಲಿಯೇ ತಡೆದು ಅದನ್ನು ನಾಶ ಮಾಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಇಸ್ರೇಲ್ ವಿರುದ್ಧ ಇರಾನ್ ಜಿದ್ದು.. ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ ಫಿಕ್ಸ್? ಭಾರತೀಯರಿಗೆ ಎಚ್ಚರಿಕೆ!
ದಕ್ಷಿಣ ಲೆಬನಾನ್ನ ಡೀರ್ ಸಿರಿಯಾನ್ನ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. ಈ ವೇಳೆ 17 ವರ್ಷದ ಬಾಲಕ ಸಾವನ್ನಪ್ಪಿ 6 ಜನರು ಗಾಯಗೊಂಡಿದ್ದರು. ಇದೀಗ ಹೆಜ್ಬೊಲ್ಲಾ, ಇಸ್ರೇಲ್ ಮೇಲೆ ರಾಕೆಟ್ ಉಡಾಯಿಸಿದೆ. ಇರಾನ್ ಬೆಂಬಲ ಪಡೆದಿರುವ ಹೆಜ್ಬೊಲ್ಲಾ ರಾಕೆಟ್ ದಾಳಿ ಮಾಡಿದೆ. ಕಳೆದ ಒಂದು ವಾರದ ಹಿಂದೆ ಇಸ್ರೇಲ್, ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ (Ismail Haniyeh)ಅವರನ್ನು ಹತ್ಯೆಗೈದಿತ್ತು. ಇದರಿಂದ ಇರಾನ್, ಪ್ರತೀಕಾರ ತೀರಿಸಿಕೊಳ್ಳುವ ಮಾತನ್ನಾಡಿತ್ತು.
ಇದನ್ನೂ ಓದಿ:Breaking: ಇರಾನ್ಗೆ ನುಗ್ಗಿ ಹಮಾಸ್ ಮುಖ್ಯಸ್ಥನ ಹೊಡೆದು ಹಾಕಿದ ಇಸ್ರೇಲ್..!
ಸಂಘರ್ಷ ಉಂಟಾಗಿದ್ದು ಹೇಗೆ..?
ಜುಲೈ 28 ರಂದು Hezbollah, ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್ ಮೇಲೆ ರಾಕೆಟ್ ದಾಳಿ ನಡೆಸಿತ್ತು. ದಾಳಿ ವೇಳೆ 12 ಮಕ್ಕಳು ಸಾವನ್ನಪ್ಪಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ಇಸ್ರೇಲ್, ಹಮಾಸ್ಗೆ ಪಾಠ ಕಲಿಸಿದಂತೆ ಹೆಜ್ಬೊಲ್ಲಾಗೂ ಬುದ್ಧಿ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿತ್ತು. ಹೆಜ್ಬೊಲ್ಲಾ ರಾಕೆಟ್ ದಾಳಿಯ ಎರಡು ದಿನಗಳ ನಂತರ ಜುಲೈ 30 ರಂದು ಇಸ್ರೇಲ್, ಹೆಜ್ಬೊಲ್ಲಾದ ಉನ್ನತ ಕಮಾಂಡರ್ ಫೌದ್ ಶುಕರ್ ಅವರನ್ನು ಹತ್ಯೆಗೈದಿತ್ತು. ಇಸ್ರೇಲ್ನ 12 ಮಕ್ಕಳ ಸಾವಿಗೆ ಶುಕರ್ ಕಾರಣ ಎಂದು ಇಸ್ರೇಲ್ ಆರೋಪಿಸಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ