/newsfirstlive-kannada/media/post_attachments/wp-content/uploads/2024/11/MIG-29.jpg)
ಉತ್ತರ ಪ್ರದೇಶದ ಆಗ್ರಾ ಬಳಿ ಮಿಗ್-29 ಯುದ್ಧ ವಿಮಾನ ಪತನಗೊಂಡಿದೆ. ಇಬ್ಬರು ಪೈಲಟ್‌ಗಳು ಯುದ್ಧ ವಿಮಾನವನ್ನು ಮುನ್ನಡೆಸುತ್ತಿದ್ದು, ಆದೃಷ್ಟವಶಾತ್ ಬಚಾವ್ ಆಗಿದ್ದಾರೆ.
ಮಿಗ್-29 ಯುದ್ಧ ವಿಮಾನವು ಪಂಜಾಬ್‌ನ ಆದಂಪುರದಿಂದ ಟೇಕ್ ಆಫ್ ಆಗಿದ್ದು, ಆಗ್ರಾಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಫೈಟರ್ ಜೆಟ್ ನೆಲಕ್ಕೆ ಅಪ್ಪಳಿಸಿದ ಕೂಡಲೇ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿತು. ದುರ್ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: US Elections; ಇಂದು ಅಮೆರಿಕದಲ್ಲಿ ಮತದಾನ.. ಟ್ರಂಪ್- ಕಮಲಾ ಹ್ಯಾರಿಸ್ ಮಧ್ಯೆ ಫೈಟ್, ಗೆಲ್ಲುವುದು ಯಾರು?
ಮಿಗ್ 29 ನೆಲಕ್ಕೆ ಅಪ್ಪಳಿಸುತ್ತಿದ್ದಂತೆಯೇ ಪೈಲಟ್ ಸೇರಿ ಇಬ್ಬರು ಜೆಟ್ನಿಂದ ಹಾರುವ ಮೂಲಕ ತಮ್ಮ ಪ್ರಾಣವನ್ನ ಉಳಿಸಿಕೊಂಡಿದ್ದಾರೆ. ಇಬ್ಬರೂ ಪೈಲಟ್‌ಗಳು ಅಪಘಾತ ನಡೆದ ಸ್ಥಳದಿಂದ 2 ಕಿಲೋ ಮೀಟರ್ ದೂರದಲ್ಲಿ ಹಾರಿ ಬದುಕುಳಿದಿದ್ದಾರೆ. ಘಟನೆಗೆ ಕುರಿತು ಕೋರ್ಟ್ ತನಿಖೆಗೆ ರಕ್ಷಣಾ ಪಡೆ ಅಧಿಕಾರಿಗಳು ಆದೇಶಿಸಿದ್ದಾರೆ.
आगरा में सेना का विमान क्रैश: उड़ते वक्त आसमान में आग लगी, खेत में जलते हुए गिरा#AGRA#airforce#IndianArmypic.twitter.com/rtjrYy3SY6
— Vikash Raj (@Ssrrkkaarr)
आगरा में सेना का विमान क्रैश: उड़ते वक्त आसमान में आग लगी, खेत में जलते हुए गिरा#AGRA#airforce#IndianArmypic.twitter.com/rtjrYy3SY6
— Vikash Raj (@Ssrrkkaarr) November 4, 2024
">November 4, 2024
ಇದನ್ನೂ ಓದಿ: ಗೃಹ ಮಂತ್ರಿಗೆ ತರಾಟೆ ತೆಗೆದುಕೊಂಡ DCM ಪವನ್ ಕಲ್ಯಾಣ್; TDP, ಜನಸೇನಾ ಮೈತ್ರಿಯಲ್ಲಿ ಬಿರುಕು?
ಸೆಪ್ಟೆಂಬರ್ 2ರಂದು ರಾಜಸ್ಥಾನದ ಬಾರ್ಮರ್ನಲ್ಲಿ ಮಿಗ್ 29 ಯುದ್ಧ ವಿಮಾನ ಕೊನೆಯ ಅಪಘಾತಕ್ಕೀಡಾಯಿತು. ತಾಂತ್ರಿಕ ತೊಂದರೆಯಿಂದ ಅಪಘಾತ ಸಂಭವಿಸಿತು. ಮಿಗ್ 29 ನೆಲಕ್ಕೆ ಅಪ್ಪಳಿಸುತ್ತಿದ್ದಂತೆಯೇ ಪೈಲಟ್‌ಗಳು ಹಾರಿ ಜೀವ ಉಳಿಸಿಕೊಂಡಿದ್ದರು.
ಸೋವಿಯತ್ ರಷ್ಯಾ 1983ರಲ್ಲಿ ಮೊದಲ ಮಿಗ್ 29 ಅನ್ನು ಸಿದ್ಧಪಡಿಸಿ ಪರಿಚಯಿಸಿತು. ಭಾರತವು 1987ರಲ್ಲಿ ಅದನ್ನು ಖರೀದಿಸಿತು. ಸದ್ಯ ಅದೇ ಯುದ್ಧ ವಿಮಾನವು ಆಧುನಿಕ ತಂತ್ರಜ್ಞಾನದ ಜೊತೆಗೆ ನವೀಕರಣವನ್ನು ಪಡೆಯುತ್ತಾ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ