‘ನೀನು ಎಲ್ಲಾದ್ರೂ ಇರು.. ಹಿಂದಿಯಲ್ಲಿ ಮಾತನಾಡು..’ ಬೆಂಗಳೂರಲ್ಲಿ ಕನ್ನಡಿಗನಿಗೆ ವಲಸಿಗ ಬೆದರಿಕೆ: VIDEO

author-image
Ganesh
Updated On
‘ನೀನು ಎಲ್ಲಾದ್ರೂ ಇರು.. ಹಿಂದಿಯಲ್ಲಿ ಮಾತನಾಡು..’ ಬೆಂಗಳೂರಲ್ಲಿ ಕನ್ನಡಿಗನಿಗೆ ವಲಸಿಗ ಬೆದರಿಕೆ: VIDEO
Advertisment
  • ರೊಟ್ಟಿ, ಬೆಣ್ಣೆ ಆಸೆಗೆ ಕರ್ನಾಟಕಕ್ಕೆ ಬಂದು ನಮಗೇ ಧಮ್ಕಿ
  • ಹಿಂದಿಯಲ್ಲಿ ಮಾತನಾಡುವಂತೆ ಕನ್ನಡಿಗರಿಗೆ ಬೆದರಿಕೆ
  • ಮತ್ತೆ ಬೆಂಗಳೂರಲ್ಲಿ ಕನ್ನಡಿಗರ ಕೆರಳಿಸಿದ ವಲಸಿಗ

ಕನ್ನಡ ನೆಲದಲ್ಲಿ ಕನ್ನಡಿಗರೇ ಸಾರ್ವಭೌಮ.. ಆದರೆ ಎಲ್ಲಿಂದಲೂ ಬಂದು, ಕನ್ನಡಿಗರ ಮೇಲೆ ದಬ್ಬಾಳಿ ನಡೆಯುತ್ತಿರೋದು ಇದೇ ಮೊದಲಲ್ಲ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗ್ತಿದ್ದು, ಕನ್ನಡಿಗರನ್ನ ಮತ್ತೆ ಕೆರಳಿಸುವಂತೆ ಮಾಡಿದೆ.

ವಿಡಿಯೋದಲ್ಲಿ ಏನಿದೆ..?

ವಿಡಿಯೋದಲ್ಲಿ ಧಿಮಾಕಿನ ವ್ಯಕ್ತಿಯೊಬ್ಬ ಮಹಿಳೆಯೊಬ್ಬರ ಕೈಹಿಡಿದು ಹೋಗುತ್ತಿದ್ದಾನೆ. ಹಿಂದಿನಿಂದ ಕನ್ನಡಿಗನೊಬ್ಬ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾನೆ. ಅದಕ್ಕೆ ಕೋಪಿಸಿಕೊಂಡು ಬರುವ ಆತ, ರೆಕಾರ್ಡ್ ಮಾಡಬೇಡ ನೀನು. ಕನ್ನಡದಲ್ಲಾದ್ರೂ ಇರು, ಬೆಂಗಳೂರಲ್ಲಾದ್ರೂ ಇರು. ನೀನು ಹಿಂದಿಯಲ್ಲಿ ಮಾತನಾಡು. ಹಿಂದಿ, ಹಿಂದಿಯಲ್ಲಿ ಮಾತನಾಡು.. ಎಂದು ಧಮ್ಕಿ ಹಾಕಿದ್ದಾನೆ. ಅಲ್ಲಿಗೆ ಓಡಿ ಬರುವ ಮಹಿಳೆ ಆತನನ್ನು ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದಾಳೆ. ಆದರೂ ಕನ್ನಡಿಗನ ಜೊತೆ ವಾಗ್ವಾದಕ್ಕೆ ಮುಂದಾಗಿದ್ದಾನೆ.

ಇದನ್ನೂ ಓದಿ: ಆರ್​ಸಿಬಿಗೆ ಬಿಗ್ ಶಾಕ್ ನೀಡಿದ ಲಕ್ನೋ ಸೂಪರ್ ಜೈಂಟ್ಸ್​.. ಆಗಿದ್ದೇನು..?

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗ್ತಿದೆ. ರೊಟ್ಟಿ, ಬೆಣ್ಣೆ ಸಂಪಾದಿಸಲು ಕರ್ನಾಟಕಕ್ಕೆ ವಲಸೆ ಬಂದಿರುವ ವಲಸಿಗನ ಸೊಕ್ಕು ನೋಡಿ. ಕನ್ನಡಿಗರಿಗೆ ಬೆದರಿಕೆ ಹಾಕ್ತಿದ್ದಾನೆ. ಬೆಂಗಳೂರಿಗೆ ಬಂದು ಹಿಂದಿ ಮಾತನಾಡುವಂತೆ ಧಮ್ಕಿ ಹಾಕಿದ್ದಾನೆ ಅಂತಾ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಬೆಂಗಳೂರಲ್ಲಿ ನಡೆದಿರುವ ಘಟನೆ ಇದಾಗಿದೆ. ಯಾವ ದಿನ ನಡೆದಿದೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.

ಇದನ್ನೂ ಓದಿ: RCB ಪಾಲಿಗೆ 4 ಬಿಗ್ ಸ್ಟಾರ್ ಕಂಟಕ​.. ಗೆಲುವಿನ ಕನಸಿಗೆ ನಮ್ಮವರೇ ವಿಲನ್​..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment