Advertisment

ಸಮುದ್ರದಲ್ಲಿ ಮುಳುಗಿದ ಐಷಾರಾಮಿ ಹಡಗು; ಬ್ರಿಟನ್ ಬಿಲ್​ಗೇಟ್ಸ್ ಮೈಕ್ ಲಿಂಚ್​​​ ನಾಪತ್ತೆ!

author-image
Gopal Kulkarni
Updated On
ಸಮುದ್ರದಲ್ಲಿ ಮುಳುಗಿದ ಐಷಾರಾಮಿ ಹಡಗು; ಬ್ರಿಟನ್ ಬಿಲ್​ಗೇಟ್ಸ್ ಮೈಕ್ ಲಿಂಚ್​​​ ನಾಪತ್ತೆ!
Advertisment
  • ಇಟಲಿ ಕರಾವಳಿಯಲ್ಲಿ ಮುಳುಗಿದ ಐಷಾರಾಮಿ ವಿಹಾರ ನೌಕೆ
  • ಓರ್ವ ಸಾವು, ಬ್ರಿಟಿಷ್ ಬಿಲ್​ಗೇಟ್ಸ್​ ಖ್ಯಾತಿಯ ಮೈಕ್ ಲಿಂಚ್​ ನಾಪತ್ತೆ
  • ಪಾರ್ಟಿ ವೇಳೆ ಸುಂಟರಗಾಳಿಗೆ ಸಿಲುಕಿ ಮುಳುಗಿದ ಐಷಾರಾಮಿ ಹಡಗು

ರೋಮ್​:  ಬ್ರಿಟನ್​ನ ಖ್ಯಾತ ಸಾಫ್ಟ್​ವೇರ್ ಉದ್ಯಮಿ ಮೈಕ್ ಲಿಂಚ್​ ಐಷಾರಾಮಿ ಹಡಗಿನಲ್ಲಿ ಪಾರ್ಟಿ ಮಾಡುವಾಗ ಬಿರುಗಾಳಿ ಸಿಲುಕಿ ಮುಳುಗಿದೆ. ಮುಳುಗುತ್ತಿದ್ದ 15 ಜನರನ್ನು ರಕ್ಷಿಸಿದ್ದು ಮೈಕ್ ಲಿಂಚ್ ಸೇರಿ ನಾಪತ್ತೆಯಾಗಿರುವ 6 ಮಂದಿಗೆ ಶೋಧ ಕಾರ್ಯ ಮುಂದುವರಿದಿದೆ.

Advertisment

ಇದನ್ನೂ ಓದಿ:ಪಾಕಿಸ್ತಾನದಲ್ಲಿ ಮತ್ತೊಂದು ಅನಾಚಾರ.. ಬಾಲ್ಯ ವಿವಾಹ ದಿಢೀರ್‌ ಹೆಚ್ಚಳ; ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ!

publive-image
ಬ್ರಿಟನ್ ಬಿಲ್​ಗೇಟ್ಸ್​ ಖ್ಯಾತಿಯ ಮೈಕ್ ಲಿಂಚ್ ನಾಪತ್ತೆ..!

ಇಟಲಿಯ ಸಿಸಿಲಿ ಕರಾವಳಿಯ ಆಳ ಸಮುದ್ರದಲ್ಲಿ ವಿಹಾರನೌಕೆ ಮುಳುಗಿದ್ದು ಖ್ಯಾತ ಸಾಫ್ಟ್​ವೇರ್ ಉದ್ಯಮಿ ಮೈಕ್ ಲಿಂಚ್ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಸಮುದ್ರದಲ್ಲಿ ಭೀಕರ ಬಿರುಗಾಳಿಗೆ ಸಿಲುಕಿ ನೌಕೆ ಮುಳುಗಿದ್ದು ನೌಕೆಯಲ್ಲಿ 22 ಮಂದಿ ಇದ್ದರು ಎನ್ನಲಾಗಿದೆ. ನೌಕೆಯಲ್ಲಿ ಬ್ರಿಟನ್, ಅಮೆರಿಕ ಹಾಗೂ ಕೆನಡಾದ ಪ್ರಜೆಗಳು ಇದ್ದರು ಎನ್ನಲಾಗಿದೆ.

ಇದನ್ನೂ ಓದಿ: ಭಾರತದಿಂದ ಗಡಿಪಾರು ಆಗುತ್ತಾರಾ ಶೇಖ್ ಹಸೀನಾ? ಬಾಂಗ್ಲಾ ಸರ್ಕಾರ ಭಾರತಕ್ಕೆ ಮಾಡಿದ ಮನವಿ ಏನು..?

Advertisment

ಐರ್ಲೆಂಡ್ ಮೂಲದ ಬ್ರಿಟನ್​ನ ಉದ್ಯಮಿ ಮೈಕ್ ಲಿಂಚ್ ಬ್ರಿಟಿಷ್​​​ ಬಿಲ್​ಗೇಟ್ಸ್ ಎಂದೇ ಖ್ಯಾತರಾಗಿದ್ದಾರೆ. ಪ್ರಕರಣವೊಂದರ ತೀರ್ಪು ತಮ್ಮ ಪರ ಬಂದಿದ್ದಕ್ಕೆ ಖುಷಿಯಲ್ಲಿ ಪಾರ್ಟಿ ಆಯೋಜಿಸಿದ್ದರು. 184 ಅಡಿ ಉದ್ದದ ನೌಕೆಯಲ್ಲಿ ಸಮುದ್ರದ ಮಧ್ಯೆ ಒಟ್ಟು 22ಜನರಿಂದ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಪಾರ್ಟಿ ಮಾಡುವ ವೇಳೆ ಸುಂಟರಗಾಳಿಗೆ ಸಿಲುಕಿ ಹಡಗು ಮುಳುಗಿದೆ. ವಿಷಯ ತಿಳಿದ ಕೂಡಲೇ ಕೋಸ್ಟ್ ಗಾರ್ಡ್ ಸಿಬ್ಬಂದಿ 15 ಜನರನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಉದ್ಯಮಿ ಮೈಕ್ ಲಿಂಚ್ ಹಾಗೂ ಪುತ್ರಿ ಸೇರಿ 6 ಮಂದಿ ನಾಪತ್ತೆಯಾಗಿದ್ದು ಹುಡುಕಾಟ ಮುಂದುವರಿದಿದೆ.

publive-image

ಸದ್ಯ ಬ್ರಿಟನ್, ಅಮೆರಿಕ, ಕೆನಡಾದ 6 ಪ್ರಜೆಗಳು ನಾಪತ್ತೆಯಾಗಿದ್ದು ಹುಡುಕಾಟ ಮುಂದುವರಿದಿದೆ. ಓರ್ವನ ಮೃತದೇಹ ಪತ್ತೆಯಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಅಂದಹಾಗೆ ಈ ವಿಹಾರ ನೌಕೆ ಆಗಸ್ಟ್ 14ರಂದು ಸಿಸಿಲಿಯ ಮಿಲಾಝೋ ಬಂದರಿನಿಂದ ವಿಹಾರಕ್ಕೆ ತೆರಳಿದ್ದ ನೌಕೆ ಪಲೇಮೋ ಕರಾವಳಿ ತೀರದಲ್ಲಿ ಮುಳುಗಿದೆ ಎನ್ನಲಾಗಿದೆ. ಒಟ್ಟಾರೆ ಐಷಾರಾಮಿ ಹಡಗಿನಲ್ಲಿ ಪಾರ್ಟಿ ಮೋಜಿನಲ್ಲಿದ್ದವರಿಗೆ ಸುಂಟರಗಾಳಿ ಯಮನಂತೆ ಎರಗಿದ್ದು ದುರಂತವೇ ಸರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment