/newsfirstlive-kannada/media/post_attachments/wp-content/uploads/2025/05/mulana-nagaraj.jpg)
ಸ್ಯಾಂಡಲ್ವುಡ್ ಸ್ಟಾರ್ ಜೋಡಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.
ಇದನ್ನೂ ಓದಿ:ಕಮಲ್ ಹಾಸನ್ಗೆ ಟಾಂಗ್ ಕೊಟ್ಟ ರಚಿತಾ ರಾಮ್.. ಹಿರಿಯ ನಟನ ಹೆಸರು ಹೇಳದೇ ಡಿಚ್ಚಿ!
ಮುದ್ದಾದ ಹೆಣ್ಣು ಮಗಳ ಆರೈಕೆಯಲ್ಲಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ದಂಪತಿ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಮುದ್ದಾದ ಮಗಳಿಗೆ ಅತಿ ಹೆಚ್ಚು ಸಮಯ ಮೀಸಲಿಡುತ್ತಿದ್ದಾರೆ.
ಹೌದು, ಶಿವರಾತ್ರಿ ಹಬ್ಬದ ದಿನ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಅಂತ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿತ್ತು ಈ ಜೋಡಿ.
ಇದಾದ ಬಳಿಕ ಗರ್ಭಿಣಿಯಾಗಿದ್ದ ಮಿಲನಾ ನಾಗರಾಜ್ ಅವರು ಹೊಸ ಹೊಸ ಬೇಬಿ ಬಂಪ್ ಲುಕ್ನಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುವ ಮೂಲಕ ಖುಷಿ ಪಡುತ್ತಿದ್ದರು.
ಇದನ್ನೂ ಓದಿ: ಕನ್ನಡ ಕಿರುತೆರೆ ದಂಪತಿ ಮನೆಯಲ್ಲಿ ಸಂಭ್ರಮ..ನಟಿ ಶಿಲ್ಪಾ ರವಿ ಕ್ಯೂಟ್ ಮಗನಿಗೆ ಇಟ್ಟ ಹೆಸರೇನು?
ಇದಾದ ಬಳಿಕ ಸೆಪ್ಟೆಂಬರ್ 05ರಂದು ನಟಿ ಮಿಲನಾ ನಾಗರಾಜ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಖುಷಿಯನ್ನು ಡಾರ್ಲಿಂಗ್ ಕೃಷ್ಣ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು.
ಸದ್ಯ ಈ ಸ್ಟಾರ್ ಜೋಡಿ ಕ್ಯೂಟ್ ಆಗಿರೋ ಮಗಳಿಗೆ ಪರಿ ಅಂತ ಹೆಸರು ಇಟ್ಟಿದ್ದಾರೆ. ಹೆಸರಿಗೆ ತಕ್ಕಂತೆ ಪರಿ ಚಿಟ್ಟೆ ತರ ಇದ್ದಾಳೆ.
ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್ ಆಗಿರುವ ನಟಿ ಮಿಲನಾ ನಾಗರಾಜ್ ಆಗಾಗ ಮಗಳ ಫೊಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಇದೀಗ ಮಗಳ ಜೊತೆ ಕೃಷ್ಣ-ಮಿಲನಾ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ಮಿಲನಾ ನಾಗರಾಜ್ ಶೇರ್ ಮಾಡಿಕೊಂಡಿದ್ದು, ಸಖತ್ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ