ಮಗಳನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಮಿಲನಾ ನಾಗರಾಜ್ ದಂಪತಿ; ಮುದ್ದಾದ ಹೆಸರೇನು ಗೊತ್ತಾ?​

author-image
Veena Gangani
Updated On
VIDEO: ಮುದ್ದಾದ ‘ಪರಿ’ಯನ್ನು ಎತ್ತಿಕೊಂಡು ಮುದ್ದಾಡಿದ ಸ್ಯಾಂಡಲ್​ವುಡ್​ ನಟಿ ಮಿಲನಾ ನಾಗರಾಜ್​
Advertisment
  • ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ನಟಿ ಮಿಲನಾ ನಾಗರಾಜ್ ದಂಪತಿ
  • ಸ್ಯಾಂಡಲ್​ವುಡ್​ ಸ್ಟಾರ್​ ದಂಪತಿ ನಿವಾಸದಲ್ಲಿ ಮನೆ ಮಾಡಿದ ಸಂಭ್ರಮ
  • ಅಪ್ಪನಾದ ಖುಷಿಯಲ್ಲಿರೋ ಸ್ಯಾಂಡಲ್​ವುಡ್ ನಟ ಡಾರ್ಲಿಂಗ್ ಕೃಷ್ಣ

ಸ್ಯಾಂಡಲ್​ವುಡ್ ಸ್ಟಾರ್​ ಜೋಡಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಮುದ್ದಾದ ಹೆಣ್ಣು ಮಗುವನ್ನು ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ತಮ್ಮ ಮನೆಗೆ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಮುದ್ದಾದ ಮಗುವಿಗೆ ವೆಲ್​​ಕಮ್ ಹೇಳಿದ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ

publive-image

ಹೌದು, ಶಿವರಾತ್ರಿ ಹಬ್ಬದ ದಿನ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಅಂತ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟಿತ್ತು ಈ ಜೋಡಿ. ಇದಾದ ಬಳಿಕ ಗರ್ಭಿಣಿಯಾಗಿದ್ದ ಮಿಲನಾ ನಾಗರಾಜ್ ಅವರು ಹೊಸ ಹೊಸ ಬೇಬಿ ಬಂಪ್​ ಲುಕ್​ನಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುವ ಮೂಲಕ ಖುಷಿ ಪಡುತ್ತಿದ್ದರು.

publive-image

ಇದೀಗ ಈ ಸ್ಟಾರ್​ ಜೋಡಿ ತಮ್ಮ ಮುದ್ದಾದ ಮಗಳನ್ನು ಗ್ರ್ಯಾಂಡ್​ ಆಗಿ ವೆಲ್​ಕಮ್​ ಮಾಡಿದ್ದಾರೆ. ಸೆಪ್ಟೆಂಬರ್ 05ರಂದು  ಮುಂಜಾನೆ ನಟಿ ಮಿಲನಾ ನಾಗರಾಜ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಖುಷಿಯನ್ನು ಡಾರ್ಲಿಂಗ್ ಕೃಷ್ಣ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು.

publive-image

ಸದ್ಯ ಇದೀಗ ನಟ ತಮ್ಮ ಮಗುವನ್ನು ಅದ್ಧೂರಿಯಾಗಿ ವೆಲ್​ಕಮ್​ ಮಾಡಿದ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ವೆಲ್​ಕಮ್​  ಲಿಟಲ್ ವರ್ಲ್ಡ್ ಪರಿ ಅಂತ ಬರೆದುಕೊಂಡಿದ್ದಾರೆ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ: RRR ಬಳಿಕ ದೇವರದಲ್ಲಿ ಜೂನಿಯರ್ NTR ಅಬ್ಬರ.. ಸಿನಿಮಾ ರಿವ್ಯೂ ಏನ್ ಹೇಳುತ್ತೆ?

publive-image

ವೈರಲ್​ ಆಗಿರೋ ವಿಡಿಯೋ ನೋಡಿದ ಅಭಿಮಾನಿಗಳು ಮುದ್ದಾದ ಪರಿಗೆ ಶುಭ ಹಾರೈಸುತ್ತಿದ್ದಾರೆ. ಮುದ್ದಾದ ನಿದಿಮಾ ಅಂತ ಕಾಮೆಂಟ್ಸ್​ ಹಾಕುತ್ತಿದ್ದಾರೆ. ಇನ್ನೂ ಸ್ಯಾಂಡಲ್​ವುಡ್​ ನಟಿ ಅಮೃತಾ ಅಯ್ಯಂಗಾರ್ ನನ್ನ ಮುದ್ದಿನ ಪರಿ ಸೊಸೆ ಅಂತ ಕಾಮೆಂಟ್​ ಹಾಕಿದ್ದಾರೆ. ನಟಿ ಬೃಂದಾ ಆಚಾರ್ಯ ಅವರು ಪರಿಗೆ ಈ ಜಗತ್ತಿಗೆ ಸ್ವಾಗತ ಅಂತ ಶುಭ ಹಾರೈಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment