ಮಿಲನಾ ನಾಗರಾಜ್​ ಸೀಮಂತ ಶಾಸ್ತ್ರದ ಡೆಕೋರೇಷನ್ ಮಾಡಿದ್ಯಾರು? ಸಂಭ್ರಮಕ್ಕೆ ಮೆರಗು ತಂದ ಸ್ಟಾರ್​ ನಿರೂಪಕಿ

author-image
Veena Gangani
Updated On
ಮಿಲನಾ ನಾಗರಾಜ್​ ಸೀಮಂತ ಶಾಸ್ತ್ರದ ಡೆಕೋರೇಷನ್ ಮಾಡಿದ್ಯಾರು? ಸಂಭ್ರಮಕ್ಕೆ ಮೆರಗು ತಂದ ಸ್ಟಾರ್​ ನಿರೂಪಕಿ
Advertisment
  • ಮಿಲನಾ ನಾಗರಾಜ್​ ಜೊತೆಗೆ ಡೆಕೋರೇಷನ್​ ಬಗ್ಗೆಯೂ ಜೋರು ಚರ್ಚೆ
  • ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಯ್ತು ಈ ವಿಡಿಯೋ
  • ಈವೆಂಟ್ ಫ್ಯಾಕ್ಟರಿಯಿಂದ ಹೊರ ಹೊಮ್ಮಿದ ಅದ್ಭುತ ಡೆಕೋರೇಷನ್​

ಸ್ಯಾಂಡಲ್​ವುಡ್ ಸ್ಟಾರ್​ ಜೋಡಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಕುಟುಂಬದಲ್ಲಿ ಸಂಭ್ರಮದ ಮನೆ ಮಾಡಿದೆ. ಶಿವರಾತ್ರಿ ಹಬ್ಬದ ದಿನವೇ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಅಂತ ಫ್ಯಾನ್ಸ್​ಗಳಿಗೆ ಈ ಹಿಂದೆ ಮಾಹಿತಿ ನೀಡಿದ್ದರು.

publive-image

ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಮಿಲನಾ ನಾಗರಾಜ್; ಅದ್ಧೂರಿಯಾಗಿ ನಡೆದ ಸೀಮಂತ ಶಾಸ್ತ್ರ

ಮೊನ್ನೆ ಮೊನ್ನೆಯಷ್ಟೇ ಸ್ಯಾಂಡಲ್​ವುಡ್​ ನಟಿ​ ಮಿಲನಾ ನಾಗರಾಜ್ ಅವರು ಬಹಳ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡಿಕೊಂಡಿದ್ದರು. ಅಂದು ನಟಿ ​ಮಿಲನಾ ನಾಗರಾಜ್ ಮುಖದಲ್ಲಿ ತಾಯ್ತನದ ಕಳೆ ಎದ್ದು ಕಾಣುತ್ತಿತ್ತು. ಅದರ ಜೊತೆಗೆ ಸೀಮಂತ ಶಾಸ್ತ್ರದ ಡೆಕೋರೇಷನ್ ಬಗ್ಗೆ ಕೂಡ ಸಾಕಷ್ಟು ಜನರು ಹಾಡಿ ಹೊಗಳಿದ್ದಾರೆ.

publive-image

ಒಂದು ಕಾರ್ಯಕ್ರಮ ಮಾಡಬೇಕು ಅಂದುಕೊಂಡರೆ ಅದಕ್ಕೆ ಮುಖ್ಯವಾಗಿ ಬೇಕಾಗಿದ್ದೇ ಡೆಕೋರೇಷನ್. ಸಾಕಷ್ಟು ಕಾರ್ಯಕ್ರಮದಲ್ಲಿ ಡೆಕೋರೇಷನ್ ಅನ್ನೋದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ಅದೆಷ್ಟೋ ಜನರು ಮದುವೆ, ಬರ್ತ್​ ಡೇ, ಸೀಮಂತ ಶಾಸ್ತ್ರ, ಹಳದಿ ಶಾಸ್ತ್ರ, ಮೆಹಂದಿ ಶಾಸ್ತ್ರ ಹೀಗೆ ಸಾಕಷ್ಟು ಕಾರ್ಯಕ್ರಮವನ್ನು ಈವೆಂಟ್ ಮ್ಯಾನೇಜ್ಮೆಂಟ್​ಗೆ ಕೆಲಸ ವಹಿಸಲಾಗುತ್ತದೆ. ಹೀಗೆ ಸ್ಯಾಂಡಲ್​ವುಡ್​ ಸ್ಟಾರ್​ ನಟಿ ಮಿಲನಾ ನಾಗರಾಜ್​ ಅವರ ಸೀಮಂತ ಕಾರ್ಯಕ್ರಮಕ್ಕೆ ಮೆರಗು ತಂದಿದ್ದೇ ಈವೆಂಟ್ಸ್ ಫ್ಯಾಕ್ಟರಿ.


ಈವೆಂಟ್ಸ್ ಫ್ಯಾಕ್ಟರಿ ಖ್ಯಾತ  ನಿರೂಪಕಿ ಚೈತ್ರಾ ವಾಸುದೇವನ್‌ರದ್ದು. 'ಇವೆಂಟ್ ಫ್ಯಾಕ್ಟರಿ' ಮೂಲಕ ಇವೆಂಟ್‌ಗಳನ್ನೂ ಕೂಡ ಇವರು ನಡೆಸಿಕೊಡುತ್ತಿದ್ದಾರೆ. ಮಿಲನಾ ನಾಗರಾಜ್​ ಅವರ ಸೀಮಂತ ಕಾರ್ಯಕ್ರಮದಲ್ಲೂ ಚೈತ್ರಾ ವಾಸುದೇವನ್‌ ಅವರು ಬಹಳ ಅಚ್ಚುಕಟ್ಟಾಗಿ ಡೆಕೋರೇಟ್ ಮಾಡಿದ್ದರು. ಆ ಡೆಕೋರೇಷನ್​ಗೆ ಸಾಕಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಗ್ರ್ಯಾಂಡ್​ ಡೆಕೋರೇಷನ್​ಗೆ ಮಿಲನಾ ನಾಗರಾಜ್​ ಹಾಗೂ ಡಾರ್ಲಿಂಗ್ ಕೃಷ್ಣ ಅವರು ಕೂಡ ಮೆಚ್ಚುಗೆಯ ಮಾತನಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment