/newsfirstlive-kannada/media/post_attachments/wp-content/uploads/2023/06/Nandini.jpg)
ಬೆಂಗಳೂರು: ನಾಳೆ ರಾಜ್ಯದಲ್ಲಿ ನಂದಿನಿ ಹಾಲು ಮೊಸರು ಸಿಗೋದು ಡೌಟ್. ಕೆಎಂಎಫ್ ಆಡಳಿತ ಮಂಡಳಿ ವಿರುದ್ಧ ಅಧಿಕಾರಿಗಳು ಹಾಗೂ ನೌಕರರ ಸಮರ ಸಾರಿರುವ ಹಿನ್ನೆಲೆಯಲ್ಲಿ ಹಾಲು, ಮೊಸರು ಸೇವೆಯಲ್ಲಿ ಅಡಚಣೆ ಆಗಲಿದೆ.
ಇದನ್ನೂ ಓದಿ: ಸಾರ್ವಜನಿಕರೇ ಗಮನಿಸಿ.. ನಾಳೆ ರಾಜ್ಯದಲ್ಲಿ ಹಾಲು, ಮೊಸರು ಎಂದಿನಂತೆ ಸರಬರಾಜು; ಮುಷ್ಕರ ಯಾವಾಗ?
ಆರ್ಥಿಕ ಹೊರೆ ಕಾರಣ ವೇತನ ಪರಿಷ್ಕರಣೆಗೆ ಕೆಎಂಎಫ್ ಹಿಂದೇಟು ಹಾಕಿದೆ. ನೌಕರರು, ಅಧಿಕಾರಿಗಳ ಮನವಿಗೆ ಕೆಎಂಎಫ್ ಆಡಳಿತ ಮಂಡಳಿ ಸ್ಪಂದಿಸಿಲ್ಲ. ಹೀಗಾಗಿ ನಾಳೆ ಕೆಎಂಎಫ್ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ನಿರ್ಧಾರ ಮಾಡಿದ್ದಾರೆ. ರಾಜ್ಯಾದ್ಯಂತ 1300ಕ್ಕೂ ಹೆಚ್ಚು ಅಧಿಕಾರಿ-ನೌಕರರು ಕೆಎಂಎಫ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: ಬೆಳಗ್ಗೆ 6 ಗಂಟೆಯಿಂದ ‘Q’.. ವಿರಾಟ್ ಕೊಹ್ಲಿ ನೋಡಲು ಸ್ಟೇಡಿಯಂಗೆ ಬಂದ ಯುವಕರಿಗೆ ಬಿಗ್ ಶಾಕ್
ಏಳನೇ ವೇತನ ಜಾರಿ ಮಾಡುವಂತೆ 2-3 ತಿಂಗಳಿಂದ ಒತ್ತಡ ಹೇರಿದರೂ ಮಂಡಳಿ ತಲೆ ಕೆಡಿಸಿಕೊಂಡಿಲ್ಲ ಅನ್ನೋದು ಅಧಿಕಾರಿಗಳ ಆರೋಪ. ಪರಿಷ್ಕೃತ ಶ್ರೇಣಿ- ವೇತನ ಸೌಲಭ್ಯಗಳನ್ನು ಅಕ್ಟೋಬರ್ 1 ರಿಂದ ಜಾರಿಗೊಳಿಸಲು ಸರ್ಕಾರ ಆದೇಶ ನೀಡಿದೆ. ತಾಂತ್ರಿಕ ನೆಪವೊಡ್ಡಿ ಕೆಎಂಎಫ್ ಹಾಗೂ ಒಕ್ಕೂಟಗಳು ಯಥಾವತ್ ಯೋಜನೆ ಜಾರಿ ಮಾಡಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ನಾಳೆಯಿಂದ ಕೆಎಂಎಫ್ ಚಟುವಟಿಕೆ ಸ್ಥಗಿತಗೊಳಿಸಲು ಕೆಎಂಎಫ್ ಅಧಿಕಾರಿ ಮತ್ತು ನೌಕರರ ಸಂಘ ಒಮ್ಮತದ ನಿರ್ಧಾರ ತೆಗೆದುಕೊಂಡಿದೆ.
ಇದನ್ನೂ ಓದಿ: Gold rate: ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ.. ಮಹಿಳೆಯರ ಆಸೆಗೆ ಮತ್ತೆ ಮತ್ತೆ ತಣ್ಣೀರು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ