/newsfirstlive-kannada/media/post_attachments/wp-content/uploads/2023/12/Swiggy.jpg)
ಇತ್ತೀಚಿಗೆ ಸಿಂಗಲ್ಗಳ ಸಂಖ್ಯೆ ಜಾಸ್ತಿ ಆಗುತ್ತಿದೆ. ಅನ್ಯಾಯಕಾರಿ ಬ್ರಹ್ಮ ಅನೇಕ ಸುಂದರರನ್ನು ಸನ್ಯಾಸಿಯಾಗುವಂತೆ ಮಾಡಿದ್ದಾನೆ. ಕುಳಿತರು ನಿಂತರೂ ನನಗೂ ಒಬ್ಬ ಗೆಳತಿ ಬೇಕು ಅಂತಲೇ ಕನವರಿಸುತ್ತಿರುತ್ತಾರೆ. ಸಿಂಗಲ್ಗಳ ರೀಲ್ಸ್ಗಳನ್ನು ನೋಡಿದಾಗಲಂತೂ ಎಂತವರ ಮನಸ್ಸು ಕೂಡ ಅಯ್ಯೋ ಪಾಪ ಅನಿಸಬೇಕು ಆ ರೀತಿಯ ರೀಲ್ಸ್ಗಳನ್ನು ಮಾಡುತ್ತಿದ್ದಾರೆ. ಆದ್ರೆ ಇಲ್ಲೊಬ್ಬ ಭೂಪ ತನಗಿರುವ ಕೊರತೆಯನ್ನು ನೀಗಿಸಿ ಅಂತ ಸ್ವಿಗ್ಗಿ ಮೊರೆ ಹೋಗಿದ್ದಾನೆ. ಎಕ್ಸ್ ಖಾತೆಯಲ್ಲಿ ಇಂತಹದೊಂದು ಹಾಸ್ಯಭರಿತ ಪೋಸ್ಟ್ಗಳು ವಿನಿಮಯಗೊಂಡಿವೆ.
ಈ ಒಂದು ಸಂಭಾಷಣೆ ಸ್ವಿಗ್ಗಿ ಇನ್ಸ್ಟಾಮಾರ್ಟ್ ಹಾಗೂ ಸ್ಯಾವೇಜ್ 2.0 ನಡುವೆ ನಡೆದಿದೆ. ಡಿಸೆಂಬರ್ 31ರಂದು ಸ್ವಿಗ್ಗಿ ಇನ್ಸ್ಟಾಮಾರ್ಟ್ ತನ್ನ ಎಕ್ಸ್ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿತ್ತು ಲೈವ್ ಆರ್ಡರ್ಗಳ ಬಗ್ಗೆ ಅಂದು ಮಧ್ಯಾಹ್ನದವರೆಗೆ ಬಂದ ಕಾಂಡೋಮ್ ಆರ್ಡರ್ಗಳ ಸಂಖ್ಯೆಯನ್ನು ಉಲ್ಲೇಖಿಸಿ ಒಂದು ಪೋಸ್ಟ್ ಹಾಕಿತ್ತು ಸಂಜೆ 5.30ಕ್ಕೆ ತನ್ನ ಪೋಸ್ಟ್ನಲ್ಲಿ ಇಲ್ಲಿಯವರೆಗೂ 4779 ಕಾಂಡೋಮ್ಗಳು ಆರ್ಡರ್ ಬಂದಿವೆ ಎಂದು ಹಾಕಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಸ್ಯಾವೇಜ್ 2.0 ಎಂಬ ಖಾತೆಯ ಹೊಂದಿದವರು ನನ್ನ ಪಿನ್ಕೋಡ್ಗೆ ಒಂದು ಗರ್ಲ್ಫ್ರೆಂಡ್ ಕಳಿಸಿ ಎಂದು ಹಿಂದಿಯಲ್ಲಿ ಕೇಳಿದ್ದಾನೆ ಇದಕ್ಕೆ ಸ್ವಿಗ್ಗಿ ಇನ್ಸ್ಟಾಮಾರ್ಟ್ ಸಖತ್ತಾಗಿಯೇ ತಿರುಗೇಟು ಕೊಟ್ಟಿದೆ.
ಇದನ್ನೂ ಓದಿ:VIDEO: ಭೀಕರ ಅಪಘಾತ.. ಪಾದಚಾರಿಗೆ ಗುದ್ದಿ 3 ಪಲ್ಟಿ ಹೊಡೆದ ಕಾರು; ಹಾರಿ ಬಿದ್ದ ಮಹಿಳೆ!
ಈ ಅಸಹಜ ರೀತಿಯ ಡಿಮ್ಯಾಂಡ್ ನೋಡಿದ ಸ್ವಿಗ್ಗಿ ಡೆಲಿವರಿ ಆ್ಯಪ್ ‘ಈ ರೀತಿಯಲ್ಲಿ ಯಾವುದು ಇಲ್ಲಿ ಸಿಗುವುದಿಲ್ಲ, ಏನೇ ಆಗಲಿ ನಾವು ಈಗ ಲೇಟ್ನೈಟ್ ಫೀಯನ್ನು ತೆಗೆದು ಹಾಕಿದ್ದೇವೆ, ಹೀಗಾಗಿ ನೀನು ಒಂದು ಲಾಲಿಪಾಪ್ ಆರ್ಡರ್ ಮಾಡಬಹುದು’ ಎಂದು ಪ್ರತಿಕ್ರಿಯೆ ನೀಡಿದೆ. ಈ ಒಂದು ಪ್ರತಿಕ್ರಿಯೆಗೆ 29 ಸಾವಿರದಷ್ಟು ವೀವ್ಸ್ ಬಂದಿವೆ.
ಇದನ್ನೂ ಓದಿ:₹7 ಲಕ್ಷಕ್ಕೆ ತಾಜ್ ಮಹಲ್ ಮಾರಾಟಕ್ಕೆ ಮುಂದಾಗಿದ್ದ ಬ್ರಿಟೀಷರು; ಕೊನೆಗೆ ಹಿಂದೆ ಸರಿದಿದ್ದಕ್ಕೆ ಕಾರಣ ಇಲ್ಲಿದೆ!
ಸದ್ಯ ವ್ಯಕ್ತಿಯ ಬೇಡಿಕೆ ಹಾಗೂ ಸ್ವಿಗ್ಗಿಯ ಪ್ರತಿಕ್ರಿಯೆ ಎಕ್ಸ್ ಖಾತೆಯಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿವೆ. ಇದೊಂದು ಮೇಲ್ನೋಟಕ್ಕೆ ಕಾಮಿಡಿಯಾಗಿ ಕಂಡರು ಕೂಡ ಒಂಟಿತನದ ವೇದನೆಗಳು ಹೀಗೆಲ್ಲಾ ಮಾಡಿಸುತ್ತಿವೆ ಎಂದು ಹಲವರು ಹೇಳುತ್ತಿದ್ದಾರೆ. ಇನ್ನು ಕೆಲವರು ಈ ರೀತಿಯ ಪ್ರತಿಕ್ರಿಯೆಗಳು ಇಂತಹ ವೇದಿಕೆಯಲ್ಲಿ ಸರಿಯಲ್ಲ, ಇದೊಂದು ಅಸಹಜವಾದ, ಅಸಭ್ಯವಾದ ನಡೆ ಎಂದು ಹೇಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ