Advertisment

ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಗೂಡ್ಸ್ ವಾಹನ ಡಿಕ್ಕಿ.. ಸ್ಥಳದಲ್ಲೇ ಸಾವು, ಚಾಲಕ ಪರಾರಿ

author-image
AS Harshith
Updated On
ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಗೂಡ್ಸ್ ವಾಹನ ಡಿಕ್ಕಿ.. ಸ್ಥಳದಲ್ಲೇ ಸಾವು, ಚಾಲಕ ಪರಾರಿ
Advertisment
  • ವ್ಯಕ್ತಿಗೆ ಮಹಿಂದ್ರಾ ಮಿನಿ ಗೂಡ್ಸ್ ವಾಹನ ಡಿಕ್ಕಿ
  • ವೇಗವಾಗಿ ಬಂದು ನಿಯಂತ್ರಣ ಕಳೆದುಕೊಂಡ ವಾಹನ
  • ರಭಸವಾಗಿ ಬಂದು ಅಂಗಡಿಗೆ ನುಗ್ಗಿದ ಮಹಿಂದ್ರಾ ಮಿನಿ ಗೂಡ್ಸ್

ಚಿಕ್ಕಬಳ್ಳಾಪುರ: ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಪೋಶೆಟ್ಟಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಈ ದುರ್ಘಟನೆ ಸಂಭವಿಸಿದೆ.

Advertisment

ತಿನಕಲ್ಲು ಗ್ರಾಮದ ನರಸಿಂಹಮೂರ್ತಿ (45) ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ನರಸಿಂಹಮೂರ್ತಿ ರಸ್ತೆ ಬದಿ ಅಂಗಡಿ ಬಳಿ ನಿಂತಿದ್ದ ವೇಳೆ ಮಹಿಂದ್ರಾ ಮಿನಿ ಗೂಡ್ಸ್ ಏಕಾಏಕಿ ಬಂದು ಅಂಗಡಿಗೆ ನುಗ್ಗಿದೆ. ವಾಹನ ಗುದ್ದಿದ ರಭಸಕ್ಕೆ ನರಸಿಂಹಮೂರ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

publive-image

ಇದನ್ನೂ ಓದಿ: ತಾಯಿಯನ್ನು ಕಳೆದುಕೊಂಡ A4 ಆರೋಪಿ ರಘು.. ಅಂತ್ಯ ಸಂಸ್ಕಾರಕ್ಕೂ ವ್ಯವಸ್ಥೆಯಿಲ್ಲದೆ ಕಣ್ಣೀರು ಹಾಕುತ್ತಿದೆ ಕುಟುಂಬ

ಅತಿ ವೇಗವಾಗಿ ಬರುತ್ತಿದ್ದ ಮಹಿಂದ್ರಾ ಮಿನಿ ಗೂಡ್ಸ್ ನಿಯಂತ್ರಣ ಕಳೆದುಕೊಂಡು ಡಿಕ್ಕಿ ಹೊಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಅಪಘಾತದ ನಂತರ ಚಾಲಕ ಪರಾರಿಯಾಗಿದ್ದಾನೆ.

Advertisment

ಅಪಘಾತದ ಬಳಿಕ ಸ್ಥಳೀಯರು ರಸ್ತೆ ತಡೆದು ಪ್ರತಿಭಟಿಸಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment