ಮಂಡ್ಯ ರೈತರಿಗೆ ಸಿಹಿ ಸುದ್ದಿ.. ಕೃಷಿ ವಿಶ್ವವಿದ್ಯಾಲಯಕ್ಕೆ ಸಚಿವ ಚೆಲುವರಾಯಸ್ವಾಮಿ ಮಹತ್ವದ ಹೆಜ್ಜೆ!

author-image
Gopal Kulkarni
Updated On
ಮಂಡ್ಯ ರೈತರಿಗೆ ಸಿಹಿ ಸುದ್ದಿ.. ಕೃಷಿ ವಿಶ್ವವಿದ್ಯಾಲಯಕ್ಕೆ ಸಚಿವ ಚೆಲುವರಾಯಸ್ವಾಮಿ ಮಹತ್ವದ ಹೆಜ್ಜೆ!
Advertisment
  • ಯಾವುದೇ ವಿಶ್ವವಿದ್ಯಾಲಯಗಳನ್ನು ಮುಚ್ಚುವ, ವಿಲೀನ ಮಾಡುವ ಪ್ರಶ್ನೆಯೇ ಇಲ್ಲ
  • ಮೈಸೂರು ಮಹಾರಾಜರ ಒಂದು ದೊಡ್ಡ ಇಚ್ಛಾಶಕ್ತಿಯಿಂದ ವಿ.ಸಿ.ಫಾರ್ಮ್ ಆಗಿದೆ
  • ನಾನು ಮಂಡ್ಯದವನಾಗಿದ್ದರಿಂದ ಅಲ್ಲಿ ಕೃಷಿ ವಿಶ್ವವಿದ್ಯಾಲಯ ನೀಡುತ್ತಿದ್ದೇನೆ

ರಾಜ್ಯದಲ್ಲಿ ಕೃಷಿ ವಿಶ್ವವಿದ್ಯಾಲಯಗಳನ್ನು ಮುಚ್ಚಲಾಗುತ್ತದೆ ಮತ್ತು ವಿಲೀನಗೊಳಿಸಲಾಗುತ್ತದೆ ಎಂಬ ಸುದ್ದಿಗಳಿಗೆ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಅವರು ಉತ್ತರ ನೀಡಿದ್ದಾರೆ. ವಿಧಾನಪರಿಷತ್‌ನಲ್ಲಿ ಪ್ರಶ್ನೆಗೆ ಉತ್ತರಿಸಿದ ಅವರು ಯಾವುದೇ ವಿಶ್ವವಿದ್ಯಾಲಯಗಳನ್ನು ಅದರಲ್ಲೂ ಕೃಷಿ ವಿಶ್ವವಿದ್ಯಾಲಯ, ಪಶು ವೈದ್ಯಕೀಯ ಕಾಲೇಜು, ತೋಟಗಾರಿಕೆ ಇರಬಹುದು ಯಾವುದನ್ನೂ ಕೂಡ ವಿಲೀನ ಅಥವಾ ಮುಚ್ಚಿ ಹಾಕುವ ಕೆಲಸ ಸರ್ಕಾರ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

1931ರಲ್ಲಿ ನಮ್ಮ ಮಹಾರಾಜರು ನಾಲ್ವಡಿ ಕೃಷ್ಣರಾಜರು ಕೃಷಿ ಸಂಶೋಧನಾ ವಲಯವನ್ನ ಶುರು ಮಾಡಿದ್ದಾರೆ. ಈ ರಾಜ್ಯದಲ್ಲಿ ಯಾವುದೇ ಕೃಷಿ ವಿಶ್ವವಿದ್ಯಾಲಯ ಕೃಷಿಯದ್ದು ಆಗಬೇಕಾಗಿದ್ರೆ ಮೊದಲನೆಯದ್ದೇ ಮಂಡ್ಯದ ವಿ.ಸಿ ಫಾರ್ಮ್​ನಲ್ಲಿ ಆಗಬೇಕಿತ್ತು. ಸ್ವತಂತ್ರ ಫೂರ್ವದಲ್ಲಿ ಅಂದ್ರೆ 1931ರಲ್ಲಿ 650 ಎಕರೆ ಜಾಗವನ್ನ ಮಹಾರಾಜರು  ಕೊಟ್ಟು ಅಲ್ಲಿ ಸಂಶೋಧನೆಯನ್ನ ಶುರು ಮಾಡ್ತಾರೆ. ಅಂದು ಬ್ರಿಟಿಷ್ ಕಾಲದಲ್ಲಿದ್ದಂತ ಡಾ ರೆಸ್ಲಿ ಸಿ ಕೋಲ್​ಮಾನ್ ಅವರ ನೇತೃತ್ವದಲ್ಲಿ ಸಂಶೋಧನೆ ಶುರುವಾಗುತ್ತದೆ. ಇದು ಎಲ್ಲಾ ಯುನಿರ್ಸಿಟಿಗಿಂತ ಹೆಚ್ಚು ಇತಿಹಾಸ ಹೊಂದಿದ್ದು ವಿ.ಸಿ. ಫಾರ್ಮ್. ದುರಾದೃಷ್ಟ ಮಂಡ್ಯ ಅಂದ್ರೆ ಮಂಡ್ಯ ಅಲ್ವಾ ಅಂತ ಮಾತಾಡ್ತಾರೆ. ಆದ್ರೆ ನಮಗೆ ಸೌಕಾರ ಚೆನ್ನಯ್ಯನವರು ಮತ್ತು ವೀರಣಗೌಡರು ಆಗಲೇ ಸಿಎಂ ಆಗಬೇಕಿತ್ತು. ಆದ್ರೆ ದುರಾದೃಷ್ಟ ಆಗಲಿಲ್ಲ. ಕೆಲವರು ಮಂತ್ರಿಗಳೇ ಆಗಲಿಲ್ಲ. ಮಂಡ್ಯದ ಜನರಿಂದಲೇ ಮಾಡಲಾಗಲಿಲ್ಲ. ಅದು ನಮ್ಮ ದುರದೃಷ್ಟವಷ್ಟೇ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಹನಿಟ್ರ್ಯಾಪ್ ಗುಟ್ಟು ರಟ್ಟು.. K.N ರಾಜಣ್ಣ ಹೇಳಿಕೆ ಬೆನ್ನಲ್ಲೇ ಸ್ಫೋಟಕ ಟ್ವಿಸ್ಟ್‌; ಕಾಂಗ್ರೆಸ್‌ ಪಕ್ಷದಲ್ಲಿ ಏನಾಗ್ತಿದೆ?

ಈಗ ನನಗೆ ಹೆಸರಿಗೋಸ್ಕರ ಮಾಡ್ತಿದ್ದೀರಾ ಅಂತಿದ್ದೀರಾ ಅಂತಾರೆ. ಹೌದು, ನಾನು ಆರೋಗ್ಯ ಮಂತ್ರಿಯಾದಾಗ ಮಂಡ್ಯ ಜಿಲ್ಲೆಗೆ ಮೆಡಿಕಲ್ ಕಾಲೇಜ್ ತಂದೆ. ಸಾರಿಗೆ ಮಂತ್ರಿಯಾದಾಗ ಮಂಡ್ಯಕ್ಕಾಗಿ  ಕೆಎಸ್​ಆರ್​​ಟಿಸಿ ಡಿವಿಜನ್ ತಂದೆವು. ಈಗ ಕೃಷಿ ಮಂತ್ರಿಯಾಗಿದ್ದಾನೆ ಸಹಜವಾಗಿ ಒಂದು ಕೃಷಿ ವಿಶ್ವವಿದ್ಯಾಲಯ ತರುತ್ತಿದ್ದೇವೆ. ಮಂಡ್ಯದಿಂದ ಯಾರು ಕೃಷಿ ಸಚಿವರು ಆಗಿರಲಿಲ್ಲ. ಈ ಬಾರಿ ನಮ್ಮ ಸಿಎಂ, ಡಿಸಿಎಂ ಕಾಂಗ್ರೆಸ್ ಹೈಕಮಾಂಡ್​ ನನಗೆ ಅವಕಾಶ ಕೊಟ್ಟಿದೆ. ಈಗ ಅಲ್ಲಿ ನಾವು ಕೃಷಿ ವಿಶ್ವವಿದ್ಯಾಲಯ ತರುತ್ತಿದ್ದೇವೆ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.

ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ ಮಾಡುತ್ತಿರುವುದಕ್ಕೆ ಅದರ ಇತಿಹಾಸವೇ ಮುಖ್ಯ ಕಾರಣ. ಮಹಾರಾಜರು ಇದೇ ಸೂಕ್ತವಾದ ಜಾಗ ಎಂದು 650 ಎಕರೆ ಜಾಗ ಕೊಟ್ಟು ಅಲ್ಲೇ ಸಂಶೋಧನೆಯನ್ನು ಶುರು ಮಾಡಿದ್ದಾರೆ. ಹೀಗಾಗಿ ಇದು ವೈಯಕ್ತಿಕ ಹಿತಾಸಕ್ತಿಗಾಗಿ, ರಾಜಕೀಯ ಹಿತಾಸಕ್ತಿಗಾಗಿ ಮಾಡಿರುವುದಂತದ್ದಲ್ಲ ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ಸ್ಪಷ್ಟನೆ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment