/newsfirstlive-kannada/media/post_attachments/wp-content/uploads/2025/03/Kn-Rajanna-on-Honey-Trap.jpg)
ಇದು ರಾಜಕೀಯದಲ್ಲಿ ಹುಟ್ಟಿಕೊಂಡಿರುವ ಅಸಹ್ಯ ಸಂಸ್ಕೃತಿ. ಅನೈತಿಕ ಮಾರ್ಗದಲ್ಲಿ ವಿರೋಧಿಗಳನ್ನ ಹಣಿಯುವ ನಿರ್ಲಜ್ಜ ತಂತ್ರಗಾರಿಕೆ. ಕರ್ನಾಟಕ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ್ದ ಪ್ರಕರಣದ ಬಗ್ಗೆ ಸಚಿವ ರಾಜಣ್ಣ ಇನ್ನೂ ದೂರು ಕೊಟ್ಟಿಲ್ಲ.
ರಾಜ್ಯ ರಾಜಕಾರಣದ ಹನಿ ಪುರಾಣ ಇದೀಗ ಮತ್ತೊಂದು ಹಂತಕ್ಕೆ ಹೋಗಿದೆ. ಕಳೆದ ಮಾರ್ಚ್ 20ರಂದು ವಿಧಾನಸಭೆ ಕಲಾಪದಲ್ಲಿ ಹನಿಟ್ರ್ಯಾಪ್ ಪ್ರಸ್ತಾಪ ರಾಜಕೀಯದ ಅಸಹ್ಯ ತಂತ್ರಗಾರಿಕೆಯನ್ನು ಬೆತ್ತಲಾಗಿಸಿತ್ತು. ಸಹಕಾರ ಸಚಿವರ ಹೇಳಿಕೆ ಇಡೀ ಕಾಂಗ್ರೆಸ್ ಪಾಳಯ ಕಂಪಿಸುವಂತೆ ಮಾಡಿದೆ. ಸದನದಲ್ಲಿ ದೂರು ಕೊಡ್ತೀನಿ ಎಂದು ಗುಡುಗಿದ್ದ ಸಚಿವ ರಾಜಣ್ಣರ ದಿನಕ್ಕೊಂದು ನಡೆ ಹಲವು ಕುತೂಹಲವನ್ನು ಹುಟ್ಟು ಹಾಕಿದೆ.
ಹನಿಟ್ರ್ಯಾಪ್ ಕೇಸ್‌ನಲ್ಲಿ ಅಬ್ಬರಿಸಿದ್ದ ಸಚಿವರು ಸೈಲೆಂಟ್
ರಾಜಣ್ಣ ಮನವಿ ಬಗ್ಗೆ ಸಿಎಂ ಜೊತೆ ಚರ್ಚಿಸಿದ ಪರಮೇಶ್ವರ್
ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಅವರು ಸದನದಲ್ಲಿ ಸಿಡಿಸಿದ್ದ ಹನಿ ಬಾಂಬ್ ಕಾಂಗ್ರೆಸ್ ಪಾಳಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ನಾಲ್ಕೈದು ದಿನಗಳಲ್ಲಿ ದೂರು ಕೊಡ್ತೀನಿ ಅಂತಿದ್ದ ರಾಜಣ್ಣ ಅದ್ಯಾಕೋ ಯುಟರ್ನ್ ಹೊಡೆದಂತಿದೆ. ನಾನು ಮೂರು ಪುಟಗಳ ದೂರನ್ನು ರೆಡಿ ಮಾಡಿದ್ದೇನೆ. ಇದನ್ನು ಗೃಹ ಸಚಿವರಿಗೆ ಕೊಡ್ತೇನೆಂದು ರಾಜಣ್ಣ ಡಾ.ಜಿ ಪರಮೇಶ್ವರ್ನನ್ನು ಭೇಟಿ ಆಗಿದ್ದರು.
ಈ ಬಗ್ಗೆ ಗೃಹ ಸಚಿವರು ನೀಡಿರುವ ಹೇಳಿಕೆ ಮತ್ತಷ್ಟು ಗೊಂದಲ ಸೃಷ್ಟಿಸಿದೆ. ಜಂಟಿ ಸುದ್ದಿಗೋಷ್ಟಿ ನಡೆಸಿದ ಗೃಹಸಚಿವ ಪರಮೇಶ್ವರ್, ವಿಧಾನಸಭೆಯಲ್ಲಿ ಪ್ರಸ್ತಾಪಿಸಿದಂತೆ ರಾಜಣ್ಣ ಮನವಿ ನೀಡಿದ್ದಾರೆ ಅಂದ್ರು. ಅಲ್ಲಿಗೆ ರಾಜಣ್ಣ ಕೊಟ್ಟಿರೋದು ಮನವಿಯೇ ಹೊರತು ದೂರಲ್ಲ ಅನ್ನೋದು ಸ್ಪಷ್ಟವಾಗಿದೆ. ಇದಾದ ಬಳಿಕ ನಿನ್ನೆ ರಾತ್ರಿ 7:30ರ ಹೊತ್ತಿಗೆ ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಚಿವ ಕೆ.ಎನ್ ರಾಜಣ್ಣ ನೀಡಿದ ಮನವಿ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರು ಸಿಎಂ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ: ‘ಜೀನ್ಸ್, ಬ್ಲೂ ಟಾಪ್ ಹಾಕಿದ್ದ ಹುಡುಗಿ ಬಂದಿದ್ಲು..’ ಇವತ್ತೇ ದೂರು ಕೊಡುತ್ತೇನೆ; ಸಚಿವ ಕೆ.ಎನ್ ರಾಜಣ್ಣ!
ಹನಿಟ್ರ್ಯಾಪ್ ಕೋಲಾಹಲದ ನಡುವೆ ಸಿಎಂ ಕ್ಯಾಂಪ್ನ ಮತ್ತೋರ್ವ ನಾಯಕ ಸತೀಶ್ ಜಾರಕಿಹೊಳಿ ದಿಲ್ಲಿಯಲ್ಲಿ ಹೈಕಮಾಂಡ್ ಭೇಟಿ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರೋ ಸಾಹುಕಾರ್, ಹೈಕಮಾಂಡ್ ಬಳಿ ಹನಿಟ್ರ್ಯಾಪ್ ವಿಚಾರದ ಬಗ್ಗೆ ಚರ್ಚೆ ನಡೆಸಿಲ್ಲ ಎಂದಿದ್ದಾರೆ.
ಸಚಿವರ ಹನಿಟ್ರ್ಯಾಪ್ ವಿಚಾರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ಮಾರ್ಮಿಕ ಮಾತುಗಳನ್ನು ಮುಂದುವರಿಸಿದ್ದಾರೆ. ಗೃಹಸಚಿವರು ಅನುಭವಿಗಳು, ಸಚಿವ ರಾಜಣ್ಣ ಹಾಗೂ ಪಕ್ಷಕ್ಕೆ ನ್ಯಾಯ ಒದಗಿಸಿಕೊಡ್ತಾರೆ ಅಂತ ಡಿಸಿಎಂ ಡಿಕೆಶಿ ಹೇಳಿದ್ದಾರೆ.
ಸಚಿವರನ್ನು ಮಧುಬಲೆಯಲ್ಲಿ ಬೀಳುಸುವ ಯತ್ನ ಸದನದಲ್ಲಿ ಪ್ರಸ್ತಾಪವಾಗಿ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಆದ್ರೀಗ ದೂರು ಕೊಡುವ ವಿಚಾರದಲ್ಲಿ ಸಚಿವರು ದಿನಕ್ಕೊಂದು ಹೇಳಿಕೆಗಳನ್ನು ನೀಡ್ತಿದ್ದು, ಎಲ್ಲೋ ಏನೋ ಮಿಸ್ ಹೊಡೆಯುತ್ತಿರುವ ಸಂಶಯ ಮೂಡಿಸದೇ ಇರದು. ಹೀಗಾಗಿ ಸದನದಲ್ಲಿ ನುಡಿದಂತೆ ಸಿಎಂ ಹಾಗೂ ಗೃಹಸಚಿವರು ಉನ್ನತ ಮಟ್ಟದ ತನಿಖೆಗೆ ಆದೇಶಿಸ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ