/newsfirstlive-kannada/media/post_attachments/wp-content/uploads/2025/03/Kn-Rajanna-Parameshwar-honey-trap-1.jpg)
ಬೆಂಗಳೂರು: ರಾಜ್ಯ, ದೇಶದಲ್ಲಿ ಸಂಚಲನ ಸೃಷ್ಟಿಸಿರುವ ಹನಿಟ್ರ್ಯಾಪ್ ಆರೋಪಕ್ಕೆ ಕೊನೆಗೂ ಸಚಿವ ಕೆ.ಎನ್ ರಾಜಣ್ಣ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ. ವಿಧಾನಸಭೆಯಲ್ಲಿ ನುಡಿದ ಮಾತಿನಂತೆ ಹನಿಟ್ರ್ಯಾಪ್ ಯತ್ನದ ಕುರಿತು ತನಿಖೆ ನಡೆಸಲು ಒತ್ತಾಯಿಸಿದ್ದಾರೆ. ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿಯಾಗಿರುವ ಕೆ.ಎನ್ ರಾಜಣ್ಣ ಅವರು ತಮ್ಮ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.
ಕಳೆದ ಮಾರ್ಚ್ 20ರಂದು ವಿಧಾನಸಭೆಯ ಅಧಿವೇಶನದಲ್ಲಿ ಹನಿಟ್ರ್ಯಾಪ್ ಕುರಿತಂತೆ ಬಿಸಿ, ಬಿಸಿ ಚರ್ಚೆಯಾಗಿತ್ತು. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸದನದಲ್ಲಿ ಸಚಿವ ಕೆ.ಎನ್. ರಾಜಣ್ಣ ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸದನಕ್ಕೆ ಕೆ.ಎನ್ ರಾಜಣ್ಣ ಉತ್ತರಿಸಿದ್ದು, ತನ್ನ ವಿರುದ್ಧ ಹನಿಟ್ರ್ಯಾಪ್ ಯತ್ನ ನಡೆದಿರೋ ಸತ್ಯ ಒಪ್ಪಿಕೊಂಡಿದ್ದರು. ಈ ಸಂಬಂಧ ಲಿಖಿತ ರೂಪದಲ್ಲಿ ದೂರು ನೀಡುವುದಾಗಿ ತಿಳಿಸಿದ್ದರು.
/newsfirstlive-kannada/media/post_attachments/wp-content/uploads/2025/03/Kn-Rajanna-Parameshwar-honey-trap.jpg)
ವಿಧಾನಸಭೆಯಲ್ಲಿ ಹೇಳಿದ ಮಾತಿನಂತೆ ಸಚಿವ ಕೆ.ಎನ್ ರಾಜಣ್ಣ ಅವರು ಇಂದು ಗೃಹ ಸಚಿವರ ಸರ್ಕಾರಿ ನಿವಾಸಕ್ಕೆ ತೆರಳಿ ತಮ್ಮ ದೂರು ದಾಖಲಿಸಿದ್ದಾರೆ. ಕೆಲ ದಾಖಲೆಗಳೊಂದಿಗೆ ಸಚಿವ ರಾಜಣ್ಣ ಅವರು ಮನವಿ ಸಲ್ಲಿಸಿರೋದು ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ಒಬ್ಬರು, ಇಬ್ಬರೂ ಅಲ್ಲ.. 48 ನಾಯಕರ ಹನಿಟ್ರ್ಯಾಪ್; ಸಚಿವ ಕೆ.ಎನ್ ರಾಜಣ್ಣ ಸ್ಫೋಟಕ ಹೇಳಿಕೆ VIDEO
ಕೆ.ಎನ್. ರಾಜಣ್ಣ ಹೇಳಿದ್ದೇನು?
ಹನಿಟ್ರ್ಯಾಪ್ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎನ್ ರಾಜಣ್ಣ ಅವರು ತಮ್ಮ ವಾದವನ್ನು ರಾಜ್ಯದ ಜನತೆಯ ಮುಂದಿಟ್ಟಿದ್ದಾರೆ. ಬೆಂಗಳೂರು ಮನೆಯಲ್ಲಿ ಸಿಸಿಟಿವಿ ಇರಲಿಲ್ಲ. ಹಾಗಾಗಿ ಸಿಸಿಟಿವಿ ವಿಡಿಯೋ ಇಲ್ಲ. ಯಾರು ಬಂದು ಹೋಗಿರ್ತಾರೆ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಕೇಳಿ ಕೊಂಡಿದ್ದೇನೆ. ಅಪರಿಚಿತರು ಅಂತ ದೂರಿನಲ್ಲಿ ದಾಖಲಿಸಿದ್ದೇನೆ. ಎರಡು ಸಲ ಒಬ್ಬನೇ ಹುಡುಗ ಇದ್ದ. ಆದರೆ ಮತ್ತೆ ಬಂದಾಗ ಬೇರೆ ಹುಡುಗಿಯರಿದ್ದರು. ಮೊದಲ ಸಲ ಹೈಕೋರ್ಟ್ ಲಾಯರ್ ಅಂತ ಬಂದರು, ಎರಡನೇ ಸಲ ಕೂಡ ಜೀನ್ಸ್ ಹಾಗೂ ಬ್ಲೂ ಟಾಪ್ ಹಾಕಿಕೊಂಡಿದ್ದ ಹುಡುಗಿ ಬಂದು ಪರಿಚಯ ಮಾಡಿಕೊಂಡಿದ್ರು. ಅವರ ಫೋಟೋ ತೋರಿಸಿದ್ರೆ ಗುರುತು ಹಿಡಿಯುತ್ತೇನೆ. ಈ ಸಂಬಂಧ 3 ಪುಟಗಳ ದೂರು ಕೊಡುತ್ತಿದ್ದೇನೆ ಎಂದು ರಾಜಣ್ಣ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us