/newsfirstlive-kannada/media/post_attachments/wp-content/uploads/2025/06/DK-SHIVAKUMAR-3.jpg)
ರಾಜ್ಯದಲ್ಲಿ ಸೆಪ್ಟೆಂಬರ್ ಕ್ರಾಂತಿ ಎಂಬ ಭವಿಷ್ಯ ಸ್ಫೋಟಗೊಂಡಿದೆ. ಜುಲೈ ಒಂದೇ ತಿಂಗಳು ಮಧ್ಯದಲ್ಲಿದೆ. ಆಗಸ್ಟ್-ಸೆಪ್ಟೆಂಬರ್ ನಂತ್ರ ಬದಲಾವಣೆ ಗಾಳಿ ಬೀಸುತ್ತೆ ಅಂತ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಇದ್ರ ಮಧ್ಯೆ ಕೆಪಿಸಿಸಿ ಕಥಾನಕವನ್ನ ಮತ್ತೆ ಮುನ್ನೆಲೆಗೆ ತಂದಿದ್ದಾರೆ. ಕೆ.ಎನ್.ರಾಜಣ್ಣ ಬೆಂಕಿಯಂತ ಭವಿಷ್ಯದ ಬಳಿಕ ಮತ್ತೆ ಕೈ ಕ್ಯಾಪ್ಟನ್ ಕಿಡಿ ಹೊತ್ತಿಸಿದ್ದಾರೆ.
ರಾಜಣ್ಣ ಹೇಳಿದ್ದೇನು..?
ರಾಜಕೀಯದಲ್ಲಿ ಸೆಪ್ಟೆಂಬರ್ನಲ್ಲಿ ಕ್ರಾಂತಿ ಆಗಲಿದೆ. ಅದು ಪಕ್ಷದ ವಿಚಾರದಲ್ಲೋ ಸರ್ಕಾರದ ವಿಚಾರದಲ್ಲೋ ಎಂಬುದನ್ನು ಕಾದು ನೋಡಿ. ಮೇ ಕ್ರಾಂತಿ, ಆಗಸ್ಟ್ ಕ್ರಾಂತಿ ಎಂದೆಲ್ಲ ಕೇಳಿಲ್ಲವೇ? ಅದೇ ರೀತಿ ಇದು ಸೆಪ್ಟೆಂಬರ್ ಕ್ರಾಂತಿ. ಏನಾಗಲಿದೆ ಎಂಬುದನ್ನು ಈಗ ಹೇಳಿದರೆ ಆಸಕ್ತಿ ಹೋಗಿಬಿಡುತ್ತದೆ. ಏನು ಬೇಕಿದ್ದರೂ ಊಹೆ ಮಾಡಿಕೊಳ್ಳಿ. ರಾಜಕಾರಣ ಎಂದೂ ನಿಂತ ನೀರಲ್ಲ, ಹರಿಯುವ ನೀರು. ಅದು ಎತ್ತರಕ್ಕೆ ಏರಲ್ಲ. ಹಳ್ಳ ಇದ್ದ ಕಡೆಗೆ ಹರಿಯುತ್ತದೆ. ಯಾವ್ಯಾವ ಘಟನಾವಳಿಗಳು ಯಾವ್ಯಾವ ಸಂದರ್ಭದಲ್ಲಿ ಆಗುತ್ತವೆಯೋ ಅದನ್ನು ಆಧರಿಸಿ ಮುಂದಿನ ಕಾರ್ಯಚಟುವಟಿಕೆ ಗಳು ರಾಜಕಾರಣದಲ್ಲಿ ನಡೆಯುತ್ತವೆ.
ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ನಾಯಕರಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನೂ ಭೇಟಿ ಮಾಡಿ ರಾಜ್ಯ ರಾಜಕೀಯ ಚಟುವಟಿಕೆಯ ಕುರಿತು ಚರ್ಚಿಸಿದ್ದಾರೆ. ರಾಹುಲ್ ಗಾಂಧಿ ವಿದೇಶದಲ್ಲಿ ಇರುವ ಕಾರಣ ಸದ್ಯಕ್ಕೆ ಇದಕ್ಕೆಲ್ಲ ಮಹತ್ವ ಕೊಡುವ ಅಗತ್ಯವಿಲ್ಲ. ಅವರು ಬಂದ ನಂತರ ಕೆಲವು ರಾಜಕೀಯ ಬದಲಾವಣೆಯ ತೀರ್ಮಾನ ಆಗುತ್ತದೆ ಎಂದು ನಿರೀಕ್ಷೆ ಮಾಡಿದ್ದೇನೆ.ಕಾಂಗ್ರೆಸ್‌ನಲ್ಲಿ ಪವರ್ ಸೆಂಟರ್‌ಗಳು ಜಾಸ್ತಿ ಆಗಿವೆ. 2013-2018ರಲ್ಲಿ ಪವರ್ ಸೆಂಟರ್ ಒಂದೇ ಇದ್ದದ್ದು. ಈಗ ಎರಡು-ಮೂರು ಎಷ್ಟು ಬೇಕಿದ್ದರೂ ಹೇಳಿಕೊಳ್ಳಬಹುದು. ಪವರ್ ಸೆಂಟರ್ ಜಾಸ್ತಿ ಇದ್ದಾಗ ಜಂಜಾಟವೂ ಜಾಸ್ತಿ ಆಗುತ್ತದೆ. ಅದಕ್ಕೆ ಅನುಗುಣವಾಗಿ ಸಿದ್ದರಾಮಯ್ಯ ಸರ್ಕಾರವನ್ನು ನಡೆಸಬೇಕಾಗುತ್ತದೆ. 2013-18ರ ಸಿದ್ದರಾಮಯ್ಯ ಈಗ ಇಲ್ಲ ಎಂಬುದು ಜನರ ಅಭಿಪ್ರಾಯ. ಪವರ್ ಸೆಂಟರ್ ಬಹಳಷ್ಟು ಇರುವುದರಿಂದಲೇ ಹೀಗಾಗಿರುವುದು-ಕೆಎನ್ ರಾಜಣ್ಣ
ಇದನ್ನೂ ಓದಿ: ಸಿದ್ದು ಮುಂದೆ ಶಾಸಕರ ಸಿಟ್ಟು ಸ್ಫೋಟ.. BR ಪಾಟೀಲ್, ರಾಜು ಕಾಗೆಗೆ ಸಿಎಂ ಬುದ್ಧಿಮಾತು..!
ಕೆಪಿಸಿಸಿ ಪಟ್ಟದ ಮೇಲೆ ಕಣ್ಣು!
ಕೇವಲ ಸೆಪ್ಟೆಂಬರ್ ಕ್ರಾಂತಿ ಅಷ್ಟೇ ಅಲ್ಲ. ಕೆಪಿಸಿಸಿ ಪಟ್ಟದ ಮೇಲೂ ಸಚಿವ ಕೆ.ಎನ್.ರಾಜಣ್ಣ ಕಣ್ಣಿಟ್ಟಿದ್ದಾರೆ. ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕ್ಷಾಂಕ್ಷಿ ಎಂದಿದ್ದು ಸತ್ಯ ಮತ್ತೆ ಪುನರುಚ್ಚರಿಸಿದ್ದಾರೆ. ಈಗಲೂ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನ ಕೊಟ್ಟರೆ ಸಚಿವ ಸ್ಥಾನ ಬಿಡ್ತೀನಿ ಅಂತ ಸಹಕಾರ ಸಚಿವ ಮತ್ತೊಂದು ವರಸೆ ಶುರು ಮಾಡಿದ್ದಾರೆ.
ಸೆಪ್ಟೆಂಬರ್ ಕ್ರಾಂತಿ ಬಗ್ಗೆ ಡಿಕೆಶಿ ನೋ ಟಾಕ್!
ಕೆ.ಎನ್.ರಾಜಣ್ಣರ ಸೆಪ್ಟೆಂಬರ್ ಕ್ರಾಂತಿ ಬಗ್ಗೆ ಡಿ.ಕೆ. ಶಿವಕುಮಾರ್ ನೋ ಟಾಕ್ ಎಂದಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಡಿಸಿಎಂ, ರಾಜಣ್ಣ ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ.. ಅವರನ್ನೇ ಕೇಳಿ. ಹಿರಿಯರಿದ್ದಾರೆ..ಅವರ ಅನುಭವ ಇದೆ ಎನ್ನುತ್ತಾ ತೆರಳಿದ್ದಾರೆ. ಸರ್ಕಾರದ ಮಟ್ಟದಲ್ಲಿ ದೊಡ್ಡ ಪಟಾಕಿ ಸಿಡಿಯುತ್ತೋ ಏನೋ ಅನ್ನೋ ಚರ್ಚೆ ನಡುವೆ, ಕೆಪಿಸಿಸಿ ಕ್ಯಾಪ್ಟನ್ ಬದಲಾವಣೆ ಪ್ರಹಸನ ಮತ್ತೆ ಚರ್ಚೆಗೆ ಬಂದಿದೆ. ರಾಜಣ್ಣ ಅಂತೂ ಆಗಸ್ಟ್ ಸೆಪ್ಟೆಂಬರ್ ಕ್ರಾಂತಿ ಜೊತೆಗೆ ಕೆಪಿಸಿಸಿ ಕ್ರಾಂತಿ ಅಂತಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ದೆಹಲಿ ಪ್ರವಾಸದಲ್ಲಿ ಏನೆಲ್ಲ ಆಯ್ತು..? ಹೈಕಮಾಂಡ್ ಗರಂ ಆಗಿದ್ದು ಯಾಕೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ