/newsfirstlive-kannada/media/post_attachments/wp-content/uploads/2025/04/Hebbalkar-car-2.jpg)
ಸಚಿವೆ ಹೆಬ್ಬಾಳ್ಕರ್ ಕಾರು ಅಪಘಾತ ಎಸಗಿದ್ದ ಆರೋಪಿಯನ್ನ ಬಂಧಿಸುವಲ್ಲಿ ಕಿತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಅಪಘಾತ ಎಸಗಿ ಲಾರಿ ಚಾಲಕ ಪರಾರಿಯಾಗಿದ್ದ.. ಆರೋಪಿಯನ್ನ ತಡಕಾಡಿದ ಪೊಲೀಸರಿಗೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರನಲ್ಲಿ ಸಿಕ್ಕಿದ್ದಾನೆ. ಆ ಮೂಲಕ ಘಟನೆ ನಡೆದು ಮೂರು ತಿಂಗಳ ಬಳಿಕ ಆ್ಯಕ್ಸಿಡೆಂಟ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಆರೋಪಿ ಕೊನೆಗೂ ಅರೆಸ್ಟ್
ಆವತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಆ್ಯಕ್ಸಿಡೆಂಟ್ ಎಸಗಿದ ಆರೋಪಿ ಕೊನೆಗೂ ಅರೆಸ್ಟ್ ಆಗಿದ್ದಾನೆ.. ಹಿಟ್ ಆ್ಯಂಡ್ ರನ್ ಕೇಸ್ನಲ್ಲಿ ಅಪಘಾತ ಎಸಗಿದ ಆರೋಪದಲ್ಲಿ ಲಾರಿ ಚಾಲಕನ ಬಂಧನ ಆಗಿದೆ.. ಬಂಧಿತ ಆರೋಪಿ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ಗ್ರಾಮದ ಮಧುಕರ ಸೋಮವಂಶಿ ಅಂತ ಗೊತ್ತಾಗಿದೆ.. ಅಷ್ಟಕ್ಕೂ 3 ತಿಂಗಳ ಕಾಲ ಪೊಲೀಸರ ನಡೆಸಿದ ತನಿಖೆ ರೋಚಕ.
ಇದನ್ನೂ ಓದಿ: ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ.. ಎಲ್ಲೆಲ್ಲಿ, ಎಷ್ಟು ದಿನ ಭರ್ಜರಿ ಮಳೆ..?
ಲಕ್ಷ್ಮೀ ಕಾರು ಆಕ್ಸಿಡೆಂಟ್ ಆರೋಪಿ ಅರೆಸ್ಟ್!
ಜನವರಿ 14.. ಬೆಳಗಿನ ಜಾವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರಿಗೆ ತಾಗಿಸಿ ಲಾರಿ ಚಾಲಕ ಪರಾರಿ ಆಗಿದ್ದ. ಬೆಂಗಳೂರಿನಿಂದ ಬೆಳಗಾವಿಗೆ ಬರುವಾಗ ಕಿತ್ತೂರಿನ ಅಂಬಡಗಟ್ಟಿ ಬಳಿ ಈ ಅಪಘಾತ ನಡೆದಿತ್ತು. ಕಾರು ಅಪಘಾತದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆನ್ನಿಗೆ ಗಂಭೀರ ಗಾಯ ಸಹ ಆಗಿತ್ತು. ಕಿತ್ತೂರು ಠಾಣೆಯಲ್ಲಿ ಸಚಿವೆಯ ಕಾರು ಚಾಲಕ ಶಿವಪ್ರಸಾದ್, ದೂರು ದಾಖಲಿಸಿದ್ದ. ಈ ದೂರಿನ ಅನ್ವಯ ಪ್ರಕರಣದ ವಿಚಾರಣೆ ನಡೆಸಿದ್ದ ಕಿತ್ತೂರು ಠಾಣೆ ಪೊಲೀಸರು, ಹಿರೇಬಾಗೇವಾಡಿ ಟೋಲ್ ಬಳಿ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದ್ದರು. ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಒಟ್ಟು 69 ಲಾರಿ ಚಾಲಕರನ್ನ ಪೊಲೀಸರು ವಿಚಾರಣೆ ನಡೆಸಿದ್ರು. ಮೊದಲು ಅಪಘಾತ ಎಸಗಿಲ್ಲ ಎಂದಿದ್ದ ಪುಣೆ ಮೂಲದ ಚಾಲಕ ಮಧುಕರ ಸೋಮವಂಶಿಯ ಫೋನ್ ಕಾಲ್ ಡಿಟೇಲ್ಸ್ ಆಧರಿಸಿ ಬಂಧನ ಮಾಡ್ಲಾಗಿದೆ.
ಇದನ್ನೂ ಓದಿ: ಮೋದಿ, ಅಮಿತ್ ಶಾ ಸೇರಿ ಸರ್ಕಾರ ಬೀಳಿಸಲು ಪ್ಲಾನ್ -ಸಿದ್ದರಾಮಯ್ಯ, ಡಿಕೆಶಿಗೆ ಖರ್ಗೆ ಎಚ್ಚರಿಕೆ
ಅಪಘಾತ ಮಾಡಿದ್ದ ವಾಹನದ ಬಣ್ಣ ಎಫ್ಎಸ್‌ಎಲ್‌ಗೆ ರವಾನೆ ಮಾಡ್ಲಾಗಿತ್ತು. ಆ ವರದಿಯಲ್ಲೂ ಅಪಘಾತ ನಡೆಸಿದ್ದು ಖಚಿತವಾಗಿದೆ. ಕಿತ್ತೂರು ಠಾಣೆ ಪೊಲೀಸ್ರು ಆಕ್ಸಿಡೆಂಟ್ ಮಾಡಿದ ಲಾರಿ ಜಪ್ತಿ ಮಾಡಿದ್ದಾರೆ.. ಒಟ್ಟಾರೆ, 3 ತಿಂಗಳ ನಂತ್ರ ಆರೋಪಿ ಪತ್ತೆ ಹಚ್ಚುವಲ್ಲಿ ಪೊಲೀಸ್ರು ಯಶಸ್ವಿ ಆಗಿದ್ದಾರೆ.
ಇದನ್ನೂ ಓದಿ: 4 ವರ್ಷಗಳ ಬಳಿಕ ಐಪಿಎಲ್ನಲ್ಲಿ ಸೂಪರ್ ಓವರ್.. ಕಾದಾಟದ ರೋಚಕ ಕ್ಷಣಗಳು ಹೇಗಿದ್ದವು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ