/newsfirstlive-kannada/media/post_attachments/wp-content/uploads/2024/12/LAKSHIMI_HEBBALKAR_1.jpg)
ಬೆಳಗಾವಿ: ಎಂಎಲ್ಸಿ ಸಿಟಿ ರವಿ ಅವರ ಆಕ್ಷೇಪಾರ್ಹ ಹೇಳಿಕೆ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಈ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕಣ್ಣೀರು ಹಾಕಿದ್ದಾರೆ.
ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಿದ್ದಾರೆ ಎಂದು ನಾವು ಧರಣಿ ಮಾಡುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಡ್ರಗ್ ಅಡಿಕ್ಟ್.. ಡ್ರಗ್ ಅಡಿಕ್ಟ್ ಎಂದು ಸಿ.ಟಿ ರವಿ ಹೇಳುತ್ತಿದ್ದರು. ಡ್ರಗ್ ಅಡಿಕ್ಟ್ ಯಾಕೆ ಅಂತೀರಾ, ನೀವು ಕೂಡ ಆಕ್ಸಿಡೆಂಟ್ ಮಾಡಿದ್ದರಲ್ಲಾ, ತಾವು ಕೂಡ ಜೀವ ತೆಗೆದವರು ಆಗುತ್ತೀರಾ ಅಲ್ಲ ಅಂದೆ. ನಾನು ಹೀಗೆ ಅಂದಿದ್ದಕ್ಕೆ ತಿರುಗಿ ಅಸಹ್ಯ ಪದ ಪಳಸಿದರು. ಅದನ್ನು ನಾನು ಬಳಸಲಿಕ್ಕೆ ಅಸಹ್ಯವಾಗುತ್ತಿದೆ. ನಾಗರೀಕ ಸಮಾಜದಲ್ಲಿ, ರಾಜಕೀಯದಲ್ಲಿ ಬಹಳಷ್ಟು ಧೈರ್ಯ ಮಾಡಿ ಇಲ್ಲಿವರೆಗೆ ಬಂದಿದ್ದೇನೆ ಎಂದು ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ:₹8,000 ಸಾವಿರ ಕೋಟಿಗೂ ಹೆಚ್ಚು ಹಣ ವಸೂಲಿ.. ಈ ಘೋರ ಅನ್ಯಾಯ ಪ್ರಶ್ನೆ ಮಾಡುತ್ತೀರಾ?- ವಿಜಯ್ ಮಲ್ಯ
ಎಲ್ಲ ಮಹಿಳೆಯರನ್ನು ಪ್ರತಿನಿಧಿಸುತ್ತಿದ್ದೇನೆ. ಆದರೆ ಸಿ.ಟಿ ರವಿ ಆ ಮಾತನ್ನು ಹತ್ತು ಬಾರಿ ಹೇಳಿ ತೇಜೋವಧೆ ಮಾಡಿದರು. ಇದಕ್ಕೆಲ್ಲಾ ಹೆದರುವುದಿಲ್ಲ. ಒಬ್ಬ ತಾಯಿ, ಅಕ್ಕ, ಅತ್ತೆಯಾಗಿದ್ದೇನೆ. ಇವತ್ತು ನನ್ನ ನೋಡಿ, ಸಾವಿರಾರು ಮಹಿಳೆಯರು ರಾಜಕೀಯಕ್ಕೆ ಬರಬೇಕು ಎಂದು ಇದ್ದಾರೆ. ಸದನದಲ್ಲಿ ಈ ರೀತಿ ಮಾತನಾಡಿದರೆ ಬಹಳ ಹರ್ಟ್ ಆಗುತ್ತದೆ.
ಕೆಟ್ಟವರನ್ನ, ಕೆಟ್ಟದನ್ನ ನೋಡಿದರೆ ದೂರ ಇರುವವಳು ನಾನು. ಇದುವವೆಗೂ ಯಾರಿಗೂ ತೊಂದರೆ ಕೊಟ್ಟವಳಲ್ಲ. ಪರಿಷತ್ನಲ್ಲಿ ಯಾರೂ ಖಂಡಿಸಲಿಲ್ಲ, ಎಲ್ಲರೂ ಧೃತರಾಷ್ಟರಾದರು. ಸಭಾಪತಿಗಳಿಗೂ ಈ ಕುರಿತು ಬರೆದು ಕೊಟ್ಟಿದ್ದೇನೆ. ಸಿಟಿ ರವಿ ಅಂದ ಮಾತಿನ ಬಗ್ಗೆ ಸುಳ್ಳು ಹೇಳಿದ್ದಾರೆ. ರಾಹುಲ್ ಗಾಂಧಿಯವರ ಬಗ್ಗೆ ಮಾತನಾಡಿದ ಬಗ್ಗೆ ಖಂಡಿಸಿದೆ. ಸಿಟಿ ರವಿ ಅಮಾನತು ಬಗ್ಗೆ ಏನೂ ಮಾತಾಡಲ್ಲ. ನನಗೆ ಶಾಕ್ ಆಗಿದೆ. ದುಃಖದಲ್ಲಿ ಇದ್ದೇನೆ. ನನ್ನ ಮಗ, ಸೊಸೆ ಕಾಲ್ ಮಾಡಿ ಕ್ಷೇತ್ರದ ಜನರು ನಿಮ್ಮ ಜೊತೆ ಇದ್ದಾರೆ ಅಂತ ಧೈರ್ಯ ತುಂಬಿದ್ದಾರೆ ಎಂದು ಸಚಿವೆ ಲಕ್ಮೀ ಹೆಬ್ಬಾಳ್ಕರ್ ಅವರು ಕಣ್ಣೀರು ಹಾಕುತ್ತಲೇ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ