newsfirstkannada.com

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಇಲಾಖೆಯಲ್ಲಿ ಕೋಟಿ, ಕೋಟಿ ಭ್ರಷ್ಟಾಚಾರ; ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು!

Share :

Published November 27, 2023 at 2:51pm

    ಸಚಿವೆ ಲಕ್ಷ್ಮಿ ಹೆಬ್ವಾಳ್ಕರ್ ವಿಶೇಷ ಕರ್ತವ್ಯ ಅಧಿಕಾರಿಯಿಂದ ಭಾರೀ ಅಕ್ರಮ

    ರಾಜ್ಯಪಾಲರಿಗೆ, ಲೋಕಾಯುಕ್ತರಿಗೆ ನೀಡಿದ ದೂರಿನಲ್ಲಿ ಇಬ್ಬರ ಹೆಸರು ಇದೆ

    ಅನೇಕ ಲೋಪ & ಭ್ರಷ್ಟಾಚಾರದ ಮೂಲಕ ಹಣ ಸಂಗ್ರಹಿಸಿರೋ ಆರೋಪ

ಬೆಳಗಾವಿ: ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ನಡೆದಿರೋ ಗಂಭೀರ ಆರೋಪ ಕೇಳಿ ಬಂದಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿಶೇಷ ಕರ್ತವ್ಯ ಅಧಿಕಾರಿ ಬಿ.ಹೆಚ್.ನಿಶ್ಚಲ್ ಅವರು ಭಾರೀ ಹಗರಣ ಮಾಡಿ ಕೋಟಿ, ಕೋಟಿ ರೂಪಾಯಿ ಗುಳಂ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.

ಬಿ.ಹೆಚ್.ನಿಶ್ಚಲ್ ವಿರುದ್ಧ ಸಾಲು ಸಾಲು ಆರೋಪ‌ ಕೇಳಿ ಬಂದಿದ್ದು ಅದೇ ಇಲಾಖೆಯ ಅಧಿಕಾರಿ ಎಸ್​​.ಸಿ ಪದ್ಮರಾಜು ಅವರು ದಾಖಲೆಗಳ ಸಮೇತ ರಾಜ್ಯಪಾಲರು, ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಸಚಿವೆ & ಸಚಿವೆ ಸಹೋದರ ಹೆಸರಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಸಚಿವರು ಹೇಳಿದ್ದಾರೆಂದು ಕೋಟ್ಯಂತರ ರೂಪಾಯಿ ಹಣ ಸಂಗ್ರಹ ಮಾಡಿದ್ದಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು MLC ಹಟ್ಟಿಹೊಳಿ ಹೆಸರನ್ನು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ನಿಶ್ಚಲ್ ವಿರುದ್ಧ ಆರೋಪಗಳ ಸುರಿಮಳೆ

ಆರೋಪ- 01

ಲಕ್ಷ್ಮಿ ಹೆಬ್ಬಾಳ್ಕರ್ ಪ್ರಭಾವದಿಂದ 3 ಹುದ್ದೆ ಹೊಂದಿರುವ ಬಿ.ಹೆಚ್ ನಿಶ್ಚಲ್
ಸಚಿವೆ ಲಕ್ಷಿ ಹೆಬ್ಬಾಳ್ಕರ್​ ವಿಶೇಷಾಧಿಕಾರಿ, ಐಸಿಡಿಎಸ್​ ಉಪನಿರ್ದೇಶಕ
ಬಾಲಭವನ ಸೊಸೈಟಿ ಕಾರ್ಯದರ್ಶಿ ಆಗಿರುವ ಆರೋಪಿ ಬಿ.ಹೆಚ್ ನಿಶ್ಚಲ್

ಆರೋಪ- 02

ಮಹಿಳಾ & ಮಕ್ಕಳ ಇಲಾಖೆಯಲ್ಲಿ ನಿಶ್ಚಲ್​ರಿಂದ ಟ್ರಾನ್ಸ್​​ಫರ್​ ದಂಧೆ
ಗ್ರೂಪ್-ಡಿಯಿಂದ ಗ್ರೂಪ್-ಎ ತನಕ ₹2 ರಿಂದ ₹80 ಲಕ್ಷ ಟ್ರಾನ್ಸ್​​ಫರ್​ ದಂಧೆ
ಜನರಲ್ ಟ್ರಾನ್ಸ್​​ಫರ್​​ನಲ್ಲಿರುವ ನಿಯಮ ಉಲ್ಲಂಘಿಸಿ ಹಣ ಸುಲಿಗೆ
ಶೇಕಡಾ 6% ಮೀರದಂತೆ ಸೂಚನೆಯಿದ್ದರೂ ವರ್ಗಾವಣೆಗೆ ಸುಲಿಗೆ
ಮಂತ್ರಿ ಗಮನಕ್ಕೆ ತರದೆ ಲಂಚ ಪಡೆದು ಮೇಲ್ದರ್ಜೆ ಹುದ್ದೆಗೆ ಟ್ರಾನ್ಸ್​​ಫರ್​ ​

ಆರೋಪ- 03

ಲಂಚ ನೀಡದ ಅಧಿಕಾರಿಗಳಿಗೆ ಅರ್ಹತೆ ಇರುವವರಿಗೆ ವರ್ಗಾವಣೆ ಇಲ್ಲ
ಅರ್ಹತೆ ಇಲ್ಲದಿದ್ರೂ ಹಣಕ್ಕಾಗಿ ಸಚಿವರಿಗೆ ತಪ್ಪು ಸಲಹೆ ನೀಡಿ ವರ್ಗಾವಣೆ
ಲಂಚ ಕೊಟ್ಟಿಲ್ಲ ಅಂದ್ರೆ ಟ್ರಾನ್ಸಫರ್ ತಾರತಮ್ಯ, ಮುಂಬಡ್ತಿಯಲ್ಲಿ ವಿಳಂಬ
ತನ್ನ ಕಡೆಯವರಿಗೆ ನೀಡಿ, ದಲಿತ ಅಧಿಕಾರಿಗೆ ಮುಂಬಡ್ತಿ ನೀಡದೆ ಕಿರುಕುಳ

ಆರೋಪ- 04

ನಿವೃತ್ತಿ ಅಂಚಿನಲ್ಲಿದ್ದರೂ ಸಹ ಹಣ ಕೊಟ್ಟಿಲ್ಲ ಅಂತ ಮುಂಬಡ್ತಿ ಮಾಡಿಲ್ಲ
ಮುಂಬಡ್ತಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಅಧಿಕಾರಿ ಮಂಜುನಾಥ್​ಗೆ ನಿತ್ಯ ಕಿರುಕುಳ
ಒಟ್ಟು 50 ಲಕ್ಷ ರೂಪಾಯಿ ಲಂಚಕ್ಕೆ ಡಿಮ್ಯಾಂಡ್ ಇಟ್ಟಿದ್ದ ಬಿ.ಹೆಚ್ ನಿಶ್ಚಲ್
ಹಣ ಕೊಡಲು ಒಪ್ಪದ ಕಾರಣ ಮಿನಿಸ್ಟರ್ ಹೆಸರಲ್ಲಿ ಮುಂಬಡ್ತಿಗೆ ತಡೆ
ಕಾರಣವೇ ಇಲ್ಲದೆ ಅಲ್ಪಾವಧಿಯಲ್ಲಿ ಅನೇಕ ಜಿಲ್ಲೆಗಳಿಗೆ ಟ್ರಾನ್ಸ್​​ಫರ್​

ಆರೋಪ- 05

ಮಕ್ಕಳಿಗೆ ಕೊಡುವ ಪೌಷ್ಠಿಕ ಆಹಾರ ಪೂರೈಕೆಯಲ್ಲಿ ಕಮಿಷನ್
ಪಿಎಫ್​ಎಂಎಸ್ ನಿಯಮ ಮಾರ್ಗಸೂಚಿ ಉಲ್ಲಂಘಿಸಿ ಲೂಟಿ
ಪೂರೈಸಿದ ಬಿಲ್​ಗಳ ಮೇಲೆ ಬಿ.ಹೆಚ್ ನಿಶ್ಚಲ್ ಸಹಿ ಮಾಡಿ ಅಕ್ರಮ
69,000 ಅಂಗನವಾಡಿಗಳ ಆಹಾರ ಪೂರೈಕೆಯಲ್ಲಿ ಅಕ್ರಮ ಆರೋಪ
ಸಿಡಿಪಿಒ ಅಧಿಕಾರವನ್ನ ಕಿತ್ತುಕೊಂಡು ತಾನೇ ನೇರವಾಗಿ ಡೀಲ್

ಆರೋಪ- 06

ಬ್ಲಾಕ್ ಲಿಸ್ಟ್ ಕಂಪನಿಯ ಮೂಲಕ ಪೌಷ್ಠಿಕ ಆಹಾರ ಖರೀದಿ
ತಮಿಳುನಾಡು ಮೂಲದ ಕ್ರಿಷ್ಟಿ ಫೈಡ್ ಕಂಪನಿಯಿಂದ ಖರೀದಿ
ಆಹಾರ ಯೋಗ್ಯವಲ್ಲವೆಂದು ಕ್ರಿಷ್ಟಿ ಫೈಡ್ ಬ್ಲಾಕ್ ಲಿಸ್ಟ್ ಆಗಿದೆ
ಆದರೂ ಕಂಪನಿಯ 3 ಬೇನಾಮಿ ಸಂಘಗಳು ಸೃಷ್ಟಿ, ಪೂರೈಕೆ
MSPC ಗಳಲ್ಲಿ ಹಸ್ತಕ್ಷೇಪ ಮಾಡಿ ಅಕ್ರಮ ಮಾಡಿರುವ ನಿಶ್ಚಲ್
ಸಚಿವೆ ಮತ್ತು ಅವರ ಸೋದರ ಹೇಳಿದ್ದಾರೆಂದು ಆರ್ಡರ್ ರಿಲೀಸ್

ಆರೋಪ- 07

ಮಹಿಳಾ ಅಭಿವೃದ್ಧಿ ಇಲಾಖೆಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಒಎಸ್​ಡಿ ವಿರುದ್ಧ ದೌರ್ಜನ್ಯ ಆರೋಪ
ನಿಶ್ಚಲ್ ವಿರುದ್ಧ ಅನೇಕ ದೂರು ದಾಖಲಾದ್ರೂ ಯಾವುದೇ ಕ್ರಮವಿಲ್ಲ
ದೌರ್ಜನ್ಯ ಆರೋಪವಿದ್ರೂ ಆತನನ್ನ ವಿಶೇಷ ಅಧಿಕಾರಿಯಾಗಿ ನೇಮಕ
ಯಾವುದೇ ತನಿಖೆಯಾಗದಂತೆ ಕಡತವನ್ನು ತಡೆ ಹಿಡಿಸಿದ ಆರೋಪ

ಆರೋಪ- 08

ನಕಲಿ ದಾಖಲೆ ಪಡೆದು ಉದ್ಯೋಗ ನೀಡಲು ಬೃಹತ್ ಸಂಚು
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳು
ನಕಲಿ ದಾಖಲೆಯವರ ನೇಮಕಕ್ಕೆ ಶಿಫಾರಸ್ಸು ಮಾಡಿದ್ದ ಆರೋಪ
ಸದ್ಯ ಸುಳ್ಳು ಜಾತಿ, ವಾಸಸ್ಥಳ ದೃಢೀಕರಣ ಪತ್ರ ಸಲ್ಲಿಸಿರೋದು ಪತ್ತೆ
ನಿಶ್ಚಲ್ ವಿರುದ್ಧ ಮುಖ್ಯಮಂತ್ರಿಗೆ ನೀಡಿದ್ದ ಕಡತ ಮುಚ್ಚಿಟ್ಟಿ ಆರೋಪ

ಆರೋಪ- 09

ಅಕ್ರಮ ಆಸ್ತಿ ಉಳಿಸಿಕೊಳ್ಳಲು ಪತ್ನಿಗೆ ಡಿವೋರ್ಸ್ ಕೊಟ್ಟ ಕಥೆ
ಜೊತೆಯಲ್ಲಿ ಇದ್ದರೂ ದಾಖಲೆಗಳಲ್ಲಿ ಡಿವೋರ್ಸ್ ಎಂದು ಉಲ್ಲೇಖ
HRMSನಲ್ಲಿ ಹೀಗೆ ತೋರಿಸಿ ಅಕ್ರಮ ಆಸ್ತಿ ಸಂಪಾದನೆ ಆರೋಪ
ಅಕ್ರಮ ಆಸ್ತಿಯನ್ನ ದಾಖಲೆಯಲ್ಲಿ ವಿಚ್ಛೇದಿತ ಪತ್ನಿ ಹೆಸರು ನಮೂದು
ಪತ್ನಿಗೆ ಯಾವ ಆದಾಯವೂ ಇಲ್ಲದಿದ್ದರೂ ಕೋಟಿ ಕೋಟಿ ಆಸ್ತಿ
ಈ ಬಗ್ಗೆ ಮಾತನಾಡಿದ್ರೆ ಮಿನಿಸ್ಟರ್ & ಸಹೋದರರ ಹೆಸರಲ್ಲಿ ಧಮ್ಕಿ

ಆರೋಪ- 10

ಇಲಾಖೆಯಲ್ಲಿರೋ ಸಿಬ್ಬಂದಿಗೆ ಬ್ಲಾಕ್ ಮೇಲ್ ಮಾಡಿ ಕಿರುಕುಳ
ಹಿರಿಯ ಅಧಿಕಾರಿಗಳನ್ನ ಟ್ರ್ಯಾಪ್ ಮಾಡಿಸುವ ನಿಶ್ಚಲ್
ಬೇನಾಮಿ ಮತ್ತು ಸುಳ್ಳು ದೂರುಗಳನ್ನ ಕೊಡಿಸಿ ಬೆದರಿಕೆ
ಅದನ್ನ ಮಿನಿಸ್ಟರ್ ಮುಂದೆ ಇಟ್ಟುಕೊಂಡು ಬೆದರಿಕೆ ಆರೋಪ
ಹಿರಿಯ ಅಧಿಕಾರಿಗಳು, ಇವನ ಮಾತು ಕೇಳುವಂತೆ ಬೆದರಿಕೆ

ಆರೋಪ- 11

ಆದಾಯ ಮೀರಿ ಆಸ್ತಿ ಇದ್ರೂ ಲೋಕಾಯುಕ್ತ ತನಿಖೆ ಮಾಡ್ತಿಲ್ಲ
ಲೋಕಾಯುಕ್ತ ಅಧಿಕಾರಿಗಳಿಗೆ ಲಂಚ ಕೊಟ್ಟು ಕೇಸ್ ಕ್ಲೋಸ್
ದಾಖಲೆ ಸಮೇತ ಅನೇಕ ಆರೋಪಗಳನ್ನ ಮಾಡಿರುವ ಪದ್ಮರಾಜ್

ಕ್ರಿಸ್ಟಿ ಫೈಡ್ 3 ಬೇನಾಮಿ ಸಂಘಗಳು

  • 1. ಹರಿಹರೇಶ್ವರ ಮಹಿಳಾ ಉದ್ಯೋಗ & ಸೇವಾ ಸಂಘ, ಶಿವಮೊಗ್ಗ
  • 2. ರೇಣುಕಾದೇವಿ ಪ್ರಗತಿಪರ ಮಹಿಳಾ ಸೇವಾ ಸಂಘ, ಬೆಳಗಾವಿ

3. ಸಂಜೀವಿನಿ ಮಹಿಳಾ ವಿಕಾಸ ಸೇವಾ ಸಂಘ, ಕಲಬುರಗಿ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿಶೇಷ ಕರ್ತವ್ಯ ಅಧಿಕಾರಿ ಬಿ.ಹೆಚ್.ನಿಶ್ಚಲ್ ವಿರುದ್ಧ ಇಷ್ಟೆಲ್ಲಾ ಆರೋಪಗಳು ಕೇಳಿ ಬಂದಿದೆ. ಅಧಿಕಾರಿಯ ಭ್ರಷ್ಟಾಚಾರದ ಹಿಂದೆ ಯಾರಿದ್ದಾರೆ ಅನ್ನೋ ಸತ್ಯಾಂಶ ತನಿಖೆಯಿಂದಷ್ಟೇ ಬಯಲಾಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಇಲಾಖೆಯಲ್ಲಿ ಕೋಟಿ, ಕೋಟಿ ಭ್ರಷ್ಟಾಚಾರ; ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು!

https://newsfirstlive.com/wp-content/uploads/2023/11/LAXMI_HEBBALKAR-1.jpg

Load More