newsfirstkannada.com

ಬಯಲು ಸೀಮೆಯ ಬರದ ಮಧ್ಯೆಯೂ ಹಸಿರು; ಜಾಲಿ ಪ್ರದೇಶಕ್ಕೆ ಜೀವ ತುಂಬಿದ ಸಚಿವ MB ಪಾಟೀಲ್​​

Share :

Published February 22, 2024 at 7:45pm

Update February 22, 2024 at 7:39pm

    38 ವಿವಿಧ ಜಾತಿಗಳ 60,000 ಸಸಿಗಳನ್ನು ನೆಟ್ಟು ಹಚ್ಚು ಹಸಿರು ಪ್ರದೇಶ

    ಎಂಬಿ ಪಾಟೀಲ್ ಕೋಟಿ ವೃಕ್ಷ ಅಭಿಯಾನದ ಪರಿಕಲ್ಪನೆಗೆ ಜಯಭೇರಿ

    ಬಳ್ಳಾರಿ ಜಾಲಿಯಿಂದ ತುಂಬಿದ್ದ ಪ್ರದೇಶ ಹಚ್ಚ ಹಸಿರಿನ ಅರಣ್ಯವಾಯ್ತು!

ವಿಜಯಪುರ: ಅದು ಬರದನಾಡು, ಬೇಸಿಗೆ ಬಂತೆಂದರೆ ಸಾಕು ಆ ಪ್ರದೇಶ ರಣಭೂಮಿಯಂತಾಗುತ್ತಿತ್ತು. ಬಳ್ಳಾರಿ ಜಾಲಿಯಿಂದ ತುಂಬಿದ್ದ ಆ ಪ್ರದೇಶವೀಗ ಹಚ್ಚು ಹಸಿರಿನಿಂದ ಕಂಗೊಳಿಸ್ತಿದೆ. ಮಲೆನಾಡು ಮೀರಿಸುವಂತಹ ಪರಿಸರ, ರಮ್ಯಾ ತಾಣ ರೂಪುಗೊಳ್ಳುತ್ತಿದೆ. ಇದು ಹಸಿರನ್ನೇ ಉಸಿರು ಮಾಡಲು ಹೊರಟ ಪ್ರಯತ್ನಕ್ಕೆ ಸಿಕ್ಕ ದೊಡ್ಡ ಜಯಭೇರಿಯ ಕಥೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪೂರ ಗ್ರಾಮದ ಬಳಿ ಮೀಸಲಿಟ್ಟ ಅರಣ್ಯ ಪ್ರದೇಶವೀಗ ಮಲೆನಾಡಿನಂತಾಗುತ್ತಿದೆ. ಮೊದಲೇ ವಿಜಯಪುರ ಜಿಲ್ಲೆ ಅಂದ್ರೆ ಬರದನಾಡು. ಅತೀ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ ಅಂತ ಹಣೆಪಟ್ಟಿ ಕಟ್ಟಿಕೊಂಡಿರೋ ಜಿಲ್ಲೆ.

ರಾಷ್ಟ್ರೀಯ ಅರಣ್ಯ ಪ್ರದೇಶದ ಸರಾಸರಿಗಿಂತ ತೀರಾ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ. ವಿಜಯಪುರ ಜಿಲ್ಲೆಯಲ್ಲಿ ಶೇ.0.2ರಷ್ಟು ಅರಣ್ಯವಿದ್ದು, ರಾಷ್ಟ್ರೀಯ ಸರಾಸರಿ ಅರಣ್ಯಕ್ಕೆ ಹೋಲಿಸಿದರೆ ಇದು ತೀರಾ ಕಡಿಮೆ. ಮಮದಾಪುರ ಗ್ರಾಮ ಎರಡು ವರ್ಷಗಳ ಅವಧಿಯಲ್ಲಿ ಶುಷ್ಕ ಪ್ರದೇಶದಿಂದ ಹಸಿರು ತಾಣವಾಗಿ ಗಮನಾರ್ಹ ಬದಲಾವಣೆ ಕಾಣ್ತಿದೆ. ಬಬಲೇಶ್ವರ ಕ್ಷೇತ್ರದ ಶಾಸಕ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ 150 ಹೆಕ್ಟೇರ್ ಬಂಜರು ಭೂಮಿಯಲ್ಲಿ ಅರಣ್ಯ ಬೆಳೆಸುವ ಪ್ರಯತ್ನಕ್ಕೆ ಕೈ ಹಾಕಿದೆ. ಇದು 38 ವಿವಿಧ ಜಾತಿಗಳ ಸುಮಾರು 60,000 ಸಸಿಗಳನ್ನು ನೆಟ್ಟು ಬರದ ಮಧ್ಯೆಯೂ ಹಚ್ಚು ಹಸಿರು ಪ್ರದೇಶವನ್ನಾಗಿಸಿದೆ.

ಇದನ್ನು ಓದಿ: ಅನಿರೀಕ್ಷಿತವಾಗಿ ಮನೆಗೆ ಬಂದ ಪೊಲೀಸರಿಗೆ ಶಾಕ್​; ಗಾಂಜಾ ಸಮೇತ ಸಿಕ್ಕಿಬಿದ್ದ ಬಿಗ್​ಬಾಸ್​ ರನ್ನರ್ ಅಪ್‌!

ಕೂಡಗಿಯ ಎನ್ ಟಿಪಿಸಿಯ ಸಿಎಸ್ ಆರ್ ಅಂದ್ರೆ, ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮ ಅನುದಾನದಲ್ಲಿ 50 ಸಾವಿರ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 10ಸಾವಿರ ಸೇರಿ ಒಟ್ಟು 60 ಸಾವಿರ ವಿವಿಧ ಬಗೆಯ ಸಸಿಗಳು ಇದೀಗ ಮರಗಳಾಗಿ ಎತ್ತರಕ್ಕೆ ಬೆಳೆಯುತ್ತಿವೆ. ಪ್ರಾಣಿ ಪಕ್ಷಿಗಳ ಆಸರೆ ತಾಣವಾಗಿ ಪರಿವರ್ತನೆ ಆಗ್ತಿದೆ. ಹುಣಸೆ, ಬೇವು, ನೇರಳೆ, ಶ್ರೀಗಂಧ, ಆಲ, ಅರಳಿ, ಬಸರಿಗಿಡ, ಹೊಂಗೆ, ಇಲಾಚಿ, ರಕ್ತಚಂದನ, ಹುಣಸೆ, ಕರಿಮತ್ತಿ, ಬಾಗಿ, ಬಿದರಿ, ನೆಲ್ಲಿ, ಹತ್ತಿ ಗಿಡ ಹೀಗೆ ವಿವಿಧ ಜಾತಿ ಸಸಿಗಳನ್ನು ನೆಡಲಾಗಿದೆ. ಮಮದಾಪೂರ ಗ್ರಾಮಕ್ಕೆ ಹೊಂದಿಕೊಂಡಂತೆ ಎರಡು ಕೆರೆಗಳಿವೆ. ಕೆರೆ ನೀರನ್ನು ಹನಿ ನೀರಾವರಿ ಮೂಲಕ ಸಸಿಗಳು, ಗಿಡಗಳಿಗೆ ನೀರುಣಿಸುವ ಕಾರ್ಯ ಮಾಡ್ತಿರೋದು ವಿಶೇಷ. ನೀರು ಪೋಲಾಗದಂತೆ ನೇರವಾಗಿ ಗಿಡದ ಬುಡಕ್ಕೆ ಹನಿ ನೀರಾವರಿ ಪದ್ಧತಿ ಅಳವಡಿಕೆ ಮಾಡಲಾಗಿದೆ. ನೆಡುತೋಪುವಿನಲ್ಲಿ ಶೇಕಡಾ 95% ರಷ್ಟು ಪ್ರಭಾವಶಾಲಿಯಾಗಿ, ಬೆಳೆದ ಸಸಿಗಳು ಒಂದು ಕಾಲದಲ್ಲಿ ನಿರ್ಜನವಾಗಿದ್ದ ಭೂದೃಶ್ಯವನ್ನು ಹಸಿರು ವಲಯವನ್ನಾಗಿ ಮಾಡಿವೆ.

ಮಮದಾಪೂರ ಗ್ರಾಮದಲ್ಲಿ ಕಾಯ್ದಿಟ್ಟ ಅರಣ್ಯ ಪ್ರದೇಶವಿದ್ರೂ ಇಲ್ಲಿನ ಜನರು ಯಾವುದೇ ರೀತಿ ಒತ್ತುವರಿ ಮಾಡದೇ ಅರಣ್ಯ ಪ್ರದೇಶ ಸಂರಕ್ಷಣೆ ಮಾಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ವಿಸ್ತರಣೆಗಾಗಿ ಕೋಟಿ ವೃಕ್ಷ ಅಭಿಯಾನದ ಮೂಲಕ ಸಚಿವ ಎಂಬಿ ಪಾಟೀಲ್ ಪಣತೊಟ್ಟಿದ್ದು, ಮೊದಲ ಹಂತದಲ್ಲಿ ವಿಜಯಪುರ ಬಳಿಯ ಭೂತನಾಳ ಕೆರೆ ಬಳಿ ಅರಣ್ಯೀಕರಣ ಮಾಡಲಾಗಿದೆ. ಎರಡನೇ ಹಂತದಲ್ಲಿ ಮಮದಾಪೂರ ಗ್ರಾಮದಲ್ಲಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಪ್ರಾದೇಶಿಕ ಅರಣ್ಯ ವಿಭಾಗ ಹಾಗೂ ಕೂಡಗಿ ಎನ್ ಟಿಪಿಸಿ , ಹಾಗೂ ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ವಿಭಿನ್ನ ರೀತಿಯಲ್ಲಿ ಅರಣ್ಯೀಕರಣ ಮಾಡಲಾಗ್ತಿದೆ. ಎನ್‌ಟಿಪಿಸಿ ಕೂಡಗಿಯ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯಡಿ 2.9 ಕೋಟಿ ರೂ.ವೆಚ್ಚದಲ್ಲಿ 50 ಸಾವಿರ ಸಸಿಗಳನ್ನು ನೆಡಲಾಗಿದೆ. ಎನ್ ಟಿಪಿಸಿಯವರು ಅಂದಾಜು 6ಕೋಟಿಯವರೆಗೆ ಸಿಎಸ್ ಆರ್ ಅನುದಾನ ಅರಣ್ಯೀಕರಣ ಮಾಡಲು ಉತ್ತೇಜನ ನೀಡುತ್ತಿದ್ದಾರೆ.

ಇನ್ನುಳಿದ 10,000 ಸಸಿಗಳನ್ನು ಎಂಎನ್‌ಆರ್‌ಇಜಿಎ ಯೋಜನೆಯಡಿ ನೆಡಲಾಗಿದೆ. ವಿಜಯಪುರ ಬಳಿಯ ಭೂತನಾಳದ ಕೆರೆ ಬಳಿ ಹೈಟೆಕ್ ನರ್ಸರಿ ಅಭಿವೃದ್ಧಿಪಡಿಸಲಾಗಿದೆ. ಸಚಿವ ಎಂಬಿ ಪಾಟೀಲ್ ಅರಣ್ಯೀಕರಣದ ದೂರದೃಷ್ಟಿ ಅರಣ್ಯ ಇಲಾಖೆಯ ಹಿಂದಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಪಿಕೆಎಂ ಮತ್ತು ಹಾಲಿ ಡಿಸಿಎಫ್ ಶಿವಶರಣಯ್ಯ ನೇತೃತ್ವದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಗ್ಯವಂತ ಮಸೂದಿ ವಲಯ ಅರಣ್ಯಾಧಿಕಾರಿ ಸಂತೋಷ ಅಜೂರ್ ಹಾಗೂ ಸಿಬ್ಬಂದಿ ಪರಿಶ್ರಮದಿಂದ ಮಮದಾಪೂರ ಗ್ರಾಮದಲ್ಲಿ ಅರಣ್ಯೀಕರಣ ರೂಪುಗೊಳ್ಳುತ್ತಿದೆ. ಇಲ್ಲಿನ ಅರಣ್ಯೀಕರಣ ಕಂಡು ಗ್ರಾಮದ ರೈತರು ತಮ್ಮ ಜಮೀನಿನಲ್ಲಿ ಬಳ್ಳಾರಿ ಜಾಲಿ ತೆರವುಗೊಳಿಸಿ ಅರಣ್ಯ ಕೃಷಿಗೆ ಮುಂದಾಗಿದ್ದಾರೆ.

ಇದನ್ನು ಓದಿ: IPL 2024: ಮೊದಲ ಪಂದ್ಯದಲ್ಲಿ ಆರ್​​​ಸಿಬಿ, ಸಿಎಸ್​ಕೆ ಜಿದ್ದಾಜಿದ್ದಿ; ಎಲ್ಲಿ? ಯಾವಾಗ? ಇಲ್ಲಿದೆ ಡೀಟೆಲ್ಸ್​​!

ಶುದ್ಧ ಗಾಳಿ, ಜೀವ ವೈವಿಧ್ಯತೆ ತಾಣವಾಗಿ ಮಾರ್ಪಟ್ಟಿದೆ. ಗ್ರಾಮ ಅರಣ್ಯ ಸಮಿತಿ ಸಾಥ್ ಕೂಡಾ ಇದೆ. ಸ್ಥಳೀಯ ನಿರುದ್ಯೋಗಿಗಳು ಉದ್ಯೋಗಾವಕಾಶ ಕಲ್ಪಿಸಲಾಗಿದೆ. ವಿಶಿಷ್ಟ ಅರಣ್ಯೀಕರಣ ಪ್ರದೇಶಕ್ಕೆ ಮುಂಬೈಯಿಂದ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ, ಇಲ್ಲಿ ಅರಣ್ಯೀಕರಣ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹನಿ ನೀರಾವರಿ ಪದ್ಧತಿ ಮೂಲಕ ಅರಣ್ಯೀಕರಣ ಪದ್ಧತಿಯನ್ನು ಇತರೆಡೆ ಅಳವಡಿಸಿಕೊಳ್ಳುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ವಿಸ್ತರಣೆಗೆ ಅರಣ್ಯ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಕೋಟಿ ವೃಕ್ಷ ಅಭಿಯಾನದ ಪರಿಕಲ್ಪನೆ ಮೂಲಕ ಹೆಜ್ಜೆ ಇಟ್ಟಿದ್ದಾರೆ. ಮಮದಾಪೂರ ಗ್ರಾಮದಲ್ಲಿ ಶುಷ್ಕ ಪ್ರದೇಶವೀಗ ಮಲೆನಾಡಿನಂತಾಗುತ್ತಿರೋದು ವಿಶೇಷ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಯಲು ಸೀಮೆಯ ಬರದ ಮಧ್ಯೆಯೂ ಹಸಿರು; ಜಾಲಿ ಪ್ರದೇಶಕ್ಕೆ ಜೀವ ತುಂಬಿದ ಸಚಿವ MB ಪಾಟೀಲ್​​

https://newsfirstlive.com/wp-content/uploads/2024/02/mb-patil-2.jpg

Load More